ಭದ್ರಾವತಿ : ಭದ್ರಾವತಿ ತಾಲೂಕು ದೊಣಬಘಟ್ಟ (ದಡಮಘಟ್ಟ) ಗ್ರಾಮದಲ್ಲಿ ನಾಯಿಗಳ ಹಿಂಡು ದಾಳಿಗೆ 4 ವರ್ಷದ ಮಗು ಸೈಯದ್ ಮದನಿ ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ಬುಧವಾರ ಸಂಜೆ ನಡೆದಿದೆ.
ಸಂಜೆ ಸುಮಾರು 4 ಗಂಟೆ ಸಮಯದಲ್ಲಿ ಮಗುವಿನ ತಂದೆ ಜಮೀನಿಗೆ ಹೋಗಿದ್ದ ಸಂದರ್ಭದಲ್ಲಿ ತಂದೆಯನ್ನು ಮಗು ಹಿಂಬಾಲಿಸಿಕೊಂಡು ಹೋಗುವಾಗ ಸುಮಾರು 7-8 ಬೀದಿ ನಾಯಿಗಳ ಹಿಂಡು ಮಗು ಮೇಲೆ ದಾಳಿ ಮಾಡಿದೆ. ಇದರಿಂದಾಗಿ ಮಗು ತೀವ್ರ ಅಸ್ವಸ್ಥತೆಯಿಂದ ಬಳತ್ತಿರುವುದನ್ನು ಕಂಡು ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು,
ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಗು ಮೃತಪಟ್ಟಿದೆ. ಮಗುವಿನ ತಂದೆ ಸ್ವಲ್ಪ ದೂರಲ್ಲೇ ಯಂತ್ರದಲ್ಲಿ ಭತ್ತ ಕಟಾವು ಮಾಡಿಸುತ್ತಿದ್ದರು. ಯಂತ್ರದ ಶಬ್ದಕ್ಕೆ ಬೀದಿ ನಾಯಿಗಳ ದಾಳಿ ಆಗಿತ್ತಿರುವು ತಿಳಿಯದಾಗಿದೆ. ಈ ಘಟನೆಯಿಂದ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.