ಬೆಂಗಳೂರು : ಮತದಾರರ ಮಾಹಿತಿ ಕದ್ದ ಚಿಲುಮೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಕಮಿಷನರ್ ತುಷಾರ್ ಗಿರಿನಾಥ್ ಗೆ ವಿಚಾರಣೆಗೆ ಹಾಜರಾಗುವಂತೆ ಹಲಸೂರು ಗೇಟ್ ಪೊಲೀಸರು ನೋಟಿಸ್ ನೀಡಿದ್ದಾರೆ.
ತುಷಾರ್ ಗಿರಿನಾಥ್ 2022-23 ರಲ್ಲಿ ಹೊರಡಿಸಿದ್ದ ಆದೇಶವೇ ಅವರಿಗೆ ಕಂಟಕವಾಗಿದೆ ಎನ್ನಲಾಗಿದೆ. ಆಧಾರ್ ಕಾರ್ಡ್ ಹಾಗೂ ಓಟರ್ ಐಡಿ ಲಿಂಕ್ ಮಾಡುವಂತೆ ಕಮಿಷನರ್ ಆದೇಶ ಹೊರಡಿಸಿದ್ದರು, ಇದರಲ್ಲಿ ತಮ್ಮ ಸಂಸ್ಥೆಯ ಸದಸ್ಯರು ಸ್ವಯಂ ಆಸಕ್ತಿ ಹೊಂದಿದ್ದರೇ ಎಂದು ಮನವಿ ಸಲ್ಲಿಸಿದ್ದೀರಾ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ತಮ್ಮ ಸಂಸ್ಥೆಯ ಬಿಎಲ್ಒ ಸಿಬ್ಬಂದಿಗೆ ಮನೆ ಮನೆಗೆ ಹೋಗಿ ಆಧಾರ್ ಲಿಂಕ್ ಮಾಡಿ ಎಂದು ಆದೇಶ ಹೊರಡಿಸಿದ್ದರು. ಈ ಸಂಬಂಧ ವಿಚಾರಣೆ ನಡೆಸಲು ಬಿಬಿಎಂಪಿ ಕಮಿಷನರ್ ತುಷಾರ್ ಗಿರಿನಾಥ್ ಗೆ ಶೀಘ್ರವೇ ವಿಚಾರಣೆಗೆ ಹಾಜರಾಗುವಂತೆ ಹಲಸೂರು ಗೇಟ್ ಪೊಲೀಸರು ನೋಟಿಸ್ ನೀಡಿದ್ದಾರೆ.
ಇನ್ನೂ, ಚಿಲುಮೆ ಸಂಸ್ಥೆಯ ಮೇಲೆ ಮತದಾರರ ಪರಿಷ್ಕರಣೆಯಲ್ಲಿ ಅಕ್ರಮ ಆರೋಪಕ್ಕೆ ಸಂಬಂಧಿಸಿದಂತೆ ನಾಲ್ವರು ಸರ್ಕಾರಿ ಅಧಿಕಾರಿಗಳು ಸೇರಿದಂತೆ 11 ಮಂದಿ ಅರೆಸ್ಟ್ ಆಗಿದ್ದಾರೆ. ಸದ್ಯ ಅಧಿಕೃತವಾಗಿ ಚಿಲುಮೆ ಸಂಸ್ಥೆಗೆ ಅನುಮತಿ ನೀಡಿರುವ ತುಷಾರ್ ಗಿರಿನಾಥ್ ವಿರುದ್ಧ ಕ್ರಮವೇನು ಎಂಬ ಬಗ್ಗೆ ಬಿಬಿಎಂಪಿ ಅಧಿಕಾರಿ ವರ್ಗದಲ್ಲೇ ಗಂಭೀರ ಚರ್ಚೆ ಶುರುವಾಗಿದೆ.
ಚಿಲುಮೆ ಸಂಸ್ಥೆಗೆ ಕೇವಲ ಮತದಾರರ ಜಾಗೃತಿ ಮೂಡಿಸಲು ಮಾತ್ರ ಅನುಮತಿ ನೀಡಲಾಗಿತ್ತು ಎಂದು ಈ ಹಿಂದೆ ಬಿಬಿಎಂಪಿ ಮುಖ್ಯ ಆಯುಕ್ತರು ಸ್ಪಷ್ಟಪಡಿಸಿದ್ದರು. ಬೇರೆ ಯಾವುದೇ ಕೆಲಸಕ್ಕೆ ಅವಕಾಶ ನೀಡಿಲ್ಲ ಎಂದು ಬಿಬಿಎಂಪಿ ಮುಖ್ಯ ಆಯುಕ್ತರು ತಿಳಿಸಿದ್ದರು. ಆದರೆ, ಚಿಲುಮೆ ಸಂಸ್ಥೆಗೆ ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳಲ್ಲಿ ವೋಟರ್ ಐಡಿಗೆ ಆಧಾರ್ ಲಿಂಕ್ ಮಾಡಲು ಬಿಬಿಎಂಪಿ ಕಮಿಷನರ್ರೇ ಅನುಮತಿ ಕೊಟ್ಟಿದ್ದಾರೆ. ಜಿಲ್ಲಾ ಚುನಾವಣಾಧಿಕಾರಿ ತುಷಾರ್ ಗಿರಿನಾಥ್ ಅವರು 20-8-2022 ರಂದು ಚಿಲುಮೆ ಸಂಸ್ಥೆಗೆ ಅನುಮತಿ ಪತ್ರ ಬರೆದಿದ್ದಾರೆ. ಉಚಿತವಾಗಿ Voter helpline app ಹಾಗೂ ಗರುಡಾ ಆ್ಯಪ್ ಮೂಲಕ ವೋಟರ್ ಐಡಿಗಳನ್ನ ಆಧಾರ್ ಲಿಂಕ್ ಮಾಡುತ್ತೇವೆ ಎಂದು ಮನವಿ ಸಲ್ಲಿಸಿದ್ದ ಚಿಲುಮೆ ಸಂಸ್ಥೆಗೆ ತುಷಾರ್ ಗಿರಿನಾಥ್ ಅನುಮತಿ ನೀಡಿದ್ದಾರೆ.
BREAKING NEWS : ಉತ್ತರ ಪ್ರದೇಶದಲ್ಲಿ ಬಸ್-ಟ್ರಕ್ ನಡುವೆ ಡಿಕ್ಕಿ: 6 ಮಂದಿ ಸ್ಥಳದಲ್ಲೇ ಸಾವು, ಕೆಲವರ ಸ್ಥಿತಿ ಗಂಭೀರ