ಬೆಂಗಳೂರು : ತಡರಾತ್ರಿ ನಿಷೇಧಿತ ಇ-ಸಿಗರೇಟ್ ಅಡ್ಡೆ ಮೇಲೆ ದಾಳಿ ನಡೆಸಿದ ಬೆಂಗಳೂರಿನ ಪೊಲೀಸರು 50 ಲಕ್ಷಕ್ಕೂ ಹೆಚ್ಚು ಮೌಲ್ಯದ ಇ-ಸಿಗರೇಟ್ ಜಪ್ತಿ ಮಾಡಿದ್ದಾರೆ.
ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿಗಳು ಕೋರಮಂಗಲ, ಬಾಣಸವಾಡಿ, ಪುಲಿಕೇಶಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಳಿ ನಡೆಸಿದ್ದಾರೆ.
ಕಳೆದ ಮೂರು ವರ್ಷಗಳ ಹಿಂದೆಯೇ ಕೇಂದ್ರ ಸರ್ಕಾರ ಇ ಸಿಗರೇಟ್ ಬ್ಯಾನ್ ಮಾಡಿ ಆದೇಶ ಹೊರಡಿಸಿದರೂ ಬೆಂಗಳೂರಿನಲ್ಲಿ ಮಾತ್ರ ಇ ಸಿಗರೇಟ್ ಅಕ್ರಮವಾಗಿ ಮಾರಾಟ , ಮಾಡಲಾಗುತ್ತಿದೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಹಲವರನ್ನು ವಶಕ್ಕೆ ಪಡೆದಿದ್ದಾರೆ.
ಇ ಸಿಗರೇಟ್ ಗಳನ್ನು ವೇಪ್ಸ್, ವೇಪ್ ಪೆನ್, ಇ ಸಿಗಾರ್ ಎಂಬ ಹೆಸರಿನಲ್ಲಿ ಕರೆಯಲಾಗುತ್ತದೆ. ಈ ಸಾಧನಗಳು ಇ ದ್ರವವನ್ನು ಉಪಯೋಗ ಮಾಡಿಕೊಂಡು ಏರಸಾಲ್ ಗಳನ್ನು ಉತ್ಪತ್ತಿ ಮಾಡಬಹುದಾಗಿದೆ.
BIGG NEWS: ಬೆಂಗಳೂರಿನಲ್ಲಿ ಶಾಲಾ ವಿದ್ಯಾರ್ಥಿಗಳ ಬ್ಯಾಗ್ ನಲ್ಲಿ ಕಾಂಡೋಮ್, ನೀರಿನ ಬಾಟಲಿಯಲ್ಲಿ ಮದ್ಯ ಪತ್ತೆ
BIGG NEWS: ʻಸಲಿಂಗ ವಿವಾಹʼದ ಮಾನ್ಯತೆಯನ್ನು ರಕ್ಷಿಸುವ ಮಸೂದೆ ಅಂಗೀಕರಿಸಿದ ಯುಎಸ್ ಸೆನೆಟ್