ಬೆಂಗಳೂರು: ರಾಜ್ಯ ಸರ್ಕಾರದಿಂದ ( Karnataka Government ) ಕಟ್ಟಡ ಕಾರ್ಮಿಕರಿಗೆ ( Construction worker ) ಅನುಕೂಲ ಆಗುವ ನಿಟ್ಟಿನಲ್ಲಿ ಉಚಿತ ಬಸ್ ಪಾಸ್ ( Free Bus Pass ) ಘೋಷಿಸಿತ್ತು. ಈ ಪಾಸ್ ಗಳನ್ನು ಈವರೆಗೆ ಬಿಎಂಟಿಸಿಯ ಬಸ್ ನಿಲ್ದಾಣ, ಘಟಕಗಳಲ್ಲಿ ವಿತರಣೆಯನ್ನು ಸ್ಥಗಿತಗೊಳಿಸಲಾಗುತ್ತಿದೆ. ಇನ್ಮುಂದೆ ಡಿಸೆಂಬರ್ 1ರಿಂದ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಉಚಿತ ಸ್ಮಾರ್ಟ್ ಕಾರ್ಡ್ ಸಹಾಯಹಸ್ತ ಪಾಸುಗಳು ಬೆಂಗಳೂರು ಒನ್ ಕೇಂದ್ರದಲ್ಲಿ ಮಾತ್ರವೇ ವಿತರಿಸಲಾಗುತ್ತದೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ( Bangalore Metropolitan Transport Corporation -BMTC ) ಮಾಹಿತಿ ನೀಡಿದ್ದು, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಸಹಯೋಗದೊಂದಿಗೆ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಸಹಾಯ ಹಸ್ತ ಬಸ್ ಪಾಸುಗಳನ್ನು ( BMTC Bus Pass ) ಸಂಸ್ಥೆಯ ಬಸ್ ನಿಲ್ದಾಣಗಳಲ್ಲಿ ವಿತರಿಸಲಾಗುತ್ತಿತ್ತು ಎಂದಿದೆ.
ದಿನಾಂಕ 01-12-2022ರಿಂದ ಈ ಸಹಾಯಹಸ್ತ ಪಾಸುಗಳನ್ನು ಬಸ್ ನಿಲ್ದಾಣ, ಘಟಕಗಳಲ್ಲಿ ವಿತರಣೆ ಮಾಡುವುದನ್ನು ಸ್ಥಗಿತಗೊಳಿಸಲಾಗಿದೆ. ಸೇವಾಸಿಂಧು ಪೋರ್ಟಲ್ ನ ಮೂಲಕ ಬೆಂಗಳೂರು ಒನ್ ಕೇಂದ್ರಗಳಲ್ಲಿ ಸ್ಮಾರ್ಟ್ ಕಾರ್ಡ್ ಮಾದರಿಯ ಪಾಸುಗಳನ್ನು ವಿತರಣೆ ಮಾಡಲಾಗುತ್ತದೆ ಎಂದು ಹೇಳಿದೆ.
ಇನ್ನೂ ನೋಂದಾಯಿತ ಕಟ್ಟಡ ಕಾರ್ಮಿಕರು ದಿನಾಂಕ 01-12-2022ರಿಂದ ಬೆಂಗಳೂರು ಒನ್ ಕೇಂದ್ರಗಳಲ್ಲಿ ಸ್ಮಾರ್ಟ್ ಕಾರ್ಡ್ ( Smart Card ) ಸಹಾಯಹಸ್ತ ಪಾಸುಗಳನ್ನು ಪಡೆಯಬಹುದಾಗಿದೆ. ಇದಕ್ಕಾಗಿ ನೋಂದಣಿಯಾಗಿರುವ ಗುರುತಿನ ಚೀಟಿ, ಆಧಾರ್ ಕಾರ್ಡ್ ಪ್ರತಿಯನ್ನು ತೆಗೆದುಕೊಂಡು ಹೋಗಿ, ನೀಡಿ ಪಡೆಯುವಂತೆ ತಿಳಿಸಿದೆ.
‘ಕುವೆಂಪು ವಿವಿ’ ಸ್ನಾತಕೋತ್ತರ ಪ್ರವೇಶಾತಿಗೆ ಅರ್ಜಿ ಸಲ್ಲಿಕೆ ಅವಧಿ ಡಿ.7ರವರೆಗೆ ವಿಸ್ತರಣೆ
BIGG NEWS : ‘ಅರಣ್ಯ ಭೂಮಿ’ ಸಾಗುವಳಿ ಮಾಡುತ್ತಿರುವ ರೈತರಿಗೆ ‘ಸಿಎಂ ಬೊಮ್ಮಾಯಿ’ ಗುಡ್ ನ್ಯೂಸ್