ಉಡುಪಿ: ಹಿಂದು ದೇವಾಲಯಗಳನ್ನು ಟಾರ್ಗೆಟ್ ಮಾಡಿಕೊಂಡು ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಫೋಟಿಸಿದ್ದ ಶಂಕಿತ ಉಗ್ರ ಶಾರಿಕ್ ಉಡುಪಿಗೂ ಭೇಟಿ ನೀಡಿದ್ದನೇ ಎಂಬ ಬಗ್ಗೆ ಪೊಲೀಸರಿಗೆ ಅನುಮಾನ ಬಂದಿದ್ದು, ಉಗ್ರನ ಹೆಜ್ಜೆ ಗುರುತುಗಳ ಬೆನ್ನಟ್ಟಿ ಉಡುಪಿಯ ಹಲವೆಡೆ ತನಿಖೆ ನಡೆಸಿದ್ದಾರೆ.
BIGG NEWS: PFI ಬ್ಯಾನ್ ಪ್ರಶ್ನಿಸಿದ್ದ ರಿಟ್ ಅರ್ಜಿ: ಇಂದು ತೀರ್ಪು ಪ್ರಕಟಿಸಲಿರುವ ಹೈಕೋರ್ಟ್
ಇಲ್ಲಿನ ಕೃಷ್ಣ ಮಠಕ್ಕೆ ಶಾರಿಕ್ ಬಂದ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ರಥ ಬೀದಿಗೆ ಬಂದು ಪರಿಶೀಲನೆ ನಡೆಸಿರುವ ಮಂಗಳೂರು ಪೊಲೀಸರು ಶಾರಿಕ್ ಸುತ್ತಾಡಿದ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.ಅಕ್ಟೋಬರ್ 11ರಂದು ಶಾರಿಕ್ ಕೃಷ್ಣಮಠ ಹಾಗೂ ರಥಬೀದಿಯಲ್ಲಿ ಸುತ್ತಾಡಿದ್ದ. ರಥಬೀದಿಯಿಂದ ಶಾರಿಕ್ ಮೊಬೈಲ್ನಲ್ಲಿ ಮಹಿಳೆಯೊಬ್ಬರು ಮಾತನಾಡಿದ ವಿಷಯ ಬಯಲಿಗೆ ಬಂದಿದೆ. ಸಿಸಿಟಿವಿ ದೃಶ್ಯ ಪರಿಶೀಲಿಸಿದಾಗ ಯಾವುದೇ ಮಾಹಿತಿ ಲಭ್ಯವಾಗಿಲ್ಲ.