ಚಿಕ್ಕಮಗಳೂರು : ನಾನು ರೌಡಿ ಶೀಟರ್ ಅಲ್ಲ, ನನ್ನ ಮೇಲೆ ಯಾವುದೇ ರೌಡಿ ಶೀಟರ್ ಕೇಸ್ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ತಿಹಾರ್ ಜೈಲಿನಿಂದ ಬಂದವರು ರಾಜ್ಯಾಧ್ಯಕ್ಷ ಹುದ್ದೆಗೆ ಬಡ್ತಿ ಹೊಂದಿದ್ದಾರೆ ಎಂಬ ಬಿಜೆಪಿ ಟ್ವೀಟ್ ಗೆ ಡಿಕೆಶಿ ತಿರುಗೇಟು ನೀಡಿದರು.
ಮೂಡಿಗೆರೆಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಡಿಕೆಶಿ ನಾನು ರೌಡಿ ಶೀಟರ್ ಅಲ್ಲ, ನನ್ನ ಮೇಲೆ ಯಾವುದೇ ರೌಡಿ ಶೀಟರ್ ಕೇಸ್ ಇಲ್ಲ, ಬಿ.ಎಸ್ ಯಡಿಯೂರಪ್ಪ ಕೂಡ ಜೈಲಿಗೆ ಹೋಗಿ ಬಂದಿದ್ದಾರೆ, ಅಂತೆಯೇ ನಾನು ಕೂಡ ಜೈಲಿಗೆ ಹೋಗಿದ್ದೇನೆ, ರಾಜಕೀಯ ಪ್ರೇರಿತವಾಗಿ ನನ್ನನ್ನು ಜೈಲಿಗೆ ಹಾಕಿದ್ದಾರೆ, ನಾನೇನು ಭ್ರಷ್ಟಾಚಾರ ಮಾಡಿ ಜೈಲಿಗೆ ಹೋಗಿಲ್ಲ ಎಂದು ಡಿಕೆ ಶಿವಕುಮಾರ್ ಹೇಳಿದರು.
ಮೊದಲು ಬಿಜೆಪಿಯವರ ತಟ್ಟೆಯಲ್ಲಿ ದೊಡ್ಡ ಹೆಗ್ಗಣ ಬಿದ್ದಿದೆ, ಅದನ್ನು ಮೊದಲು ನೋಡಿಕೊಳ್ಳಲಿ, ಮತದಾನದ ಹಕ್ಕನ್ನೇ ಬಿಜೆಪಿಯವರು ಮಾರಲು ಹೊರಟಿದ್ದರು ಎಂದು ಕಿಡಿಕಾರಿದ್ದಾರೆ.
ಸಿಎಂ ಬೊಮ್ಮಾಯಿ ದೆಹಲಿ ಟೂರಿಸ್ಟ್
ಸಿಎಂ ಬೊಮ್ಮಾಯಿಯನ್ನು ದೆಹಲಿ ಟೂರಿಸ್ಟ್ ಎಂದು ಸರಣಿ ಟ್ವೀಟ್ ನಲ್ಲಿ ಕಾಂಗ್ರೆಸ್ ವ್ಯಂಗ್ಯವಾಡಿದೆ. ದೆಹಲಿ ಟೂರಿಸ್ಟ್ ಬೊಮ್ಮಾಯಿಯನ್ನು ಹೈಕಮಾಂಡ್ ನಾಯಕರು ಭೇಟಿ ಮಾಡಲು ಸತಾಯಿಸುತ್ತಿರುವುದು ನೋಡಿ ಆಯ್ಯೋ ಪಾಪ ಎನಿಸುತ್ತಿದೆ! ಇದುವರೆಗೂ 12 ಬಾರಿ ದೆಹಲಿ ಭೇಟಿ ಮಾಡಿದರೂ ರಾಜ್ಯಕ್ಕೆ ನಯಾಪೈಸೆ ಪ್ರಯೋಜನವಾಗಿಲ್ಲ, ಈಗಲೂ ಆಗುವುದಿಲ್ಲ. ಬೊಮ್ಮಾಯಿಯವರ ಸಂಕಟ ವಿಸ್ತರಣೆಯಾಗುತ್ತಿದೆಯೇ ಹೊರತು ಸಂಪುಟ ವಿಸ್ತರಣೆಯಲ್ಲ ಎಂದು ಕಿಡಿಕಾರಿದೆ.
BIGG NEWS: ಗರುಡಾಚಾರ್ ಅವರ ಮನೆಗೆ ಮುತ್ತಿಗೆ ಹಾಕಿದ ಹಿಂದೂ ಕಾರ್ಯಕರ್ತರ ಬಂಧನ; BJP ವಿರುದ್ಧ ಮುತಾಲಿಕ್ ಆಕ್ರೋಶ