ಕೆಎನ್ಎನ್ ಡಿಜಿಟಲ್ ಡೆಸ್ಕ್ : ವಿಶ್ವದ ಅತಿದೊಡ್ಡ ಮೆಸೇಜಿಂಗ್ ಪ್ಲಾಟ್ಫಾರ್ಮ್ ಎನಿಸಿದ ವಾಟ್ಸಾಪ್ನ ಡಾಟಾ ಕಳ್ಳತನವಾಗಿದೆ ಎಂದು ಸೈಬರ್ ನ್ಯೂಸ್ ಎಂಬ ಆನ್ಲೈನ್ ಸುದ್ದಿ ಮಾಧ್ಯಮದಲ್ಲಿ ವರದಿಯಾಗಿದ್ದು ಬಹಳ ಮಂದಿ ಆತಂಕಿತರಾಗಿದ್ದಾರೆ. ಹ್ಯಾಕಿಂಗ್ ಸಮುದಾಯದವರ ಆನ್ಲೈನ್ ಫೋರಂವೊಂದರಲ್ಲಿ ಹ್ಯಾಕರ್ವೊಬ್ಬ ತನ್ನ ಬಳಿ 48.7 ಕೋಟಿ ವಾಟ್ಸಾಪ್ ಮೊಬೈಲ್ ನಂಬರ್ಗಳ ಡಾಟಾಬೇಸ್ ಇದೆ. ಅದನ್ನು ಮಾರುತ್ತಿರುವುದಾಗಿ ಆತ ಆ ವೇದಿಕೆಯಲ್ಲಿ ಜಾಹೀರಾತು ನೀಡಿದ್ದ. ಇದರಲ್ಲಿ ಭಾರತದ 60 ಲಕ್ಷಕ್ಕೂ ಹೆಚ್ಚು ವಾಟ್ಸಾಪ್ ಬಳಕೆದಾರರ ನಂಬರ್ ಇದೆ ಎನ್ನಲಾಗಿದೆ.
ಹ್ಯಾಕರ್ ವೇದಿಕೆಯಲ್ಲಿ ಬಂದಿರುವ ಈ ಜಾಹೀರಾತಿನಲ್ಲಿರುವುದು ಸತ್ಯವಾ? ಇದು ನಿಜ ಅಲ್ಲ ಎನ್ನಲು ಕಷ್ಟ ಎನ್ನುತ್ತದೆ ಸೈಬರ್ ನ್ಯೂಸ್. ಹ್ಯಾಕರ್ ಕಡೆಯಿಂದ ಪಡೆಯಲಾದ ಕೆಲ ಮೊಬೈಲ್ ನಂಬರ್ ಸ್ಯಾಂಪಲ್ಗಳನ್ನು ಪರಿಶೀಲಿಸಿದಾಗ ಅವು ನಿಜಕ್ಕೂ ವಾಟ್ಸಾಪ್ ಸಂಖ್ಯೆಗಳೇ ಆಗಿರುವುದು ದೃಢಪಟ್ಟಿವೆ ಎಂದು ಸೈಬರ್ ನ್ಯೂಸ್ ಹೇಳಿದೆ.
ಹ್ಯಾಕರ್ ವೇದಿಕೆಯಲ್ಲಿ ಬಂದಿರುವ ಈ ಜಾಹೀರಾತಿನಲ್ಲಿರುವುದು ಸತ್ಯವಾ? ಇದು ನಿಜ ಅಲ್ಲ ಎನ್ನಲು ಕಷ್ಟ ಎನ್ನುತ್ತದೆ ಸೈಬರ್ ನ್ಯೂಸ್. ಹ್ಯಾಕರ್ ಕಡೆಯಿಂದ ಪಡೆಯಲಾದ ಕೆಲ ಮೊಬೈಲ್ ನಂಬರ್ ಸ್ಯಾಂಪಲ್ಗಳನ್ನು ಪರಿಶೀಲಿಸಿದಾಗ ಅವು ನಿಜಕ್ಕೂ ವಾಟ್ಸಾಪ್ ಸಂಖ್ಯೆಗಳೇ ಆಗಿರುವುದು ದೃಢಪಟ್ಟಿವೆ ಎಂದು ಸೈಬರ್ ನ್ಯೂಸ್ ಹೇಳಿದೆ.
ಆದರೆ, ವಾಟ್ಸಾಪ್ ಸಂಸ್ಥೆ ಇದು ಸತ್ಯಕ್ಕೆ ದೂರವಾದುದು ಎಂದು ಸ್ಪಷ್ಟಪಡಿಸಿದೆ. ಯಾವ ಡಾಟಾ ಸೋರಿಕೆಯಾಗಿಲ್ಲ. ಸೈಬರ್ ನ್ಯೂಸ್ನಲ್ಲಿ ಪ್ರಕಟವಾಗಿರುವುದು ನಕಲಿ ಸ್ಕ್ರೀನ್ಶಾಟ್ಗಳಾಗಿವೆ ಎಂದು ವಾಟ್ಸಾಪ್ ಹೇಳಿದೆ.
ಅದೇನೇ ಆದರೂ ಸೈಬರ್ನ್ಯೂಸ್ನ ಸುದ್ದಿಯಲ್ಲಿರುವ ಪ್ರಕಾರ ಭಾರತವೂ ಸೇರಿ 84 ದೇಶಗಳ ವಾಟ್ಸಾಪ್ ಬಳಕೆದಾರರ ಡಾಟಾ ಸೋರಿಕೆಯಾಗಿದೆ. ಈಜಿಪ್ಟ್, ಇಟಲಿ ಮತ್ತು ಅಮೆರಿಕದವರ ವಾಟ್ಸಾಪ್ ದತ್ತಾಂಶವೇ ಹೆಚ್ಚು ಸೋರಿಕೆಯಾಗಿರುವುದು. ವಿಶ್ವಾದ್ಯಂತ 200 ಕೋಟಿಗೂ ಹೆಚ್ಚು ವಾಟ್ಸಾಪ್ ಯೂಸರ್ಗಳಿದ್ದು, 48.7 ಕೋಟಿಯಷ್ಟು ನಂಬರ್ಗಳು ಲೀಕ್ ಆಗಿವೆ. ಅಂದರೆ ಬಹುತೇಕ ಶೇ. 25ರಷ್ಟು ವಾಟ್ಸಾಪ್ ನಂಬರ್ಗಳು ಸೋರಿಕೆಯಾಗಿವೆ.
ನಿಮ್ಮ ವಾಟ್ಸಾಪ್ ನಂಬರ್ ಸೋರಿಕೆಯಾಗಿದೆಯಾ ಎಂಬುದನ್ನು ಪರಿಶೀಲಿಸುವ ಅವಕಾಶವನ್ನು ಸೈಬರ್ ನ್ಯೂಸ್ ಮಾಡಿಕೊಟ್ಟಿದೆ. ಅದರ ವಿಧಾನ ಮತ್ತು ಲಿಂಕ್ ಇಲ್ಲಿದೆ:
1) ಸೈಬರ್ ನ್ಯೂಸ್ನಲ್ಲಿರುವ ಈ ಲಿಂಕ್ಗೆ ಹೋಗಿ: https://cybernews.com/personal-data-leak-check/
2) ಇಂಟರ್ನ್ಯಾಷನಲ್ ಫಾರ್ಮ್ಯಾಟ್ನಲ್ಲಿ ನಿಮ್ಮ ಮೊಬೈಲ್ ಸಂಖ್ಯೆ ಅಥವಾ ಇ ಮೇಲ್ ಐಡಿ ನಮೂದಿಸಿ
3) ಇದಾದ ಬಳಿಕ ‘ಚೆಕ್ ನೌ’ ಅನ್ನು ಕ್ಲಿಕ್ ಮಾಡಿ.
ವಾಟ್ಸಾಪ್ ನಂಬರ್ ಹೇಗೆ ದುರುಪಯೋಗ ಆಗುತ್ತದೆ?
ಸೈಬರ್ ನ್ಯೂಸ್ ಬಳಿ ಹ್ಯಾಕರ್ನ ದತ್ತಾಂಶ ಹೇಗೆ ಸಿಕ್ಕಿತು ಎಂಬುದು ಗೊತ್ತಿಲ್ಲ. ಆದರೆ, ವಾಟ್ಸಾಪ್ನಲ್ಲಿ ದತ್ತಾಂಶ ಸೋರಿಕೆಯಾಗಿದೆ ಅಂತ ಅನಿಸುವುದಿಲ್ಲ ಎಂದು ಸೈಬರ್ ನ್ಯೂಸ್ ಹೇಳಿದೆ. ಅದಕ್ಕಿರುವ ಅನುಮಾನದ ಪ್ರಕಾರ ಥರ್ಡ್ ಪಾರ್ಟಿ ಆ್ಯಪ್ಗಳು ವಾಟ್ಸಾಪ್ನ ಸ್ಕ್ರೇಪಿಂಗ್ ಮಾಡಲು ಅವಕಾಶ ಹೊಂದಿದ್ದು ಆ ಮೂಲಕ ಮಾಹಿತಿ ಸೋರಿಕೆಯಾಗಿರಬಹುದು. ಒಂದು ವೇಳೆ ವಾಟ್ಸಾಪ್ ಅನ್ನು ಯಾರಾದರೂ ಕದ್ದಿದ್ದರೆ ಅದನ್ನು ಸಾಮಾನ್ಯವಾಗಿ ಮಾರ್ಕೆಟಿಂಗ್ ಉದ್ದೇಶಕ್ಕೆ ಬಳಸಲಾಗಬಹುದು. ನಿಮ್ಮ ವಾಟ್ಸಾಪ್ ನಂಬರ್ಗೆ ಜಾಹೀರಾತು ಮೆಸೇಜ್ಗಳು ನೇರವಾಗಿ ಬಂದು ಬೀಳಬಹುದು. ಅಥವಾ ನಿಮ್ಮ ಗುರುತಿನ ಕಳ್ಳತನ ಆಗಿ, ನಿಮ್ಮ ಹೆಸರಿನಲ್ಲಿ ಸೈಬರ್ ಅಪರಾಧ ಚಟುವಟಿಕೆಗಳು ನಡೆಯಬಹುದು