ಮುಂಬೈ : ವೀರ್ ಸಾವರ್ಕರ್ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೀಡಿರುವ ಹೇಳಿಕೆಗೆ ಮಹಾರಾಷ್ಟ್ರ ನವನಿರ್ಮಾಣ ಸೇನೆ (MNS) ಅಧ್ಯಕ್ಷ ರಾಜ್ ಠಾಕ್ರೆ ಸೋಮವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಭಾನುವಾರ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ರಾಜ್ ಠಾಕ್ರೆ, ರಾಹುಲ್ ಗಾಂಧಿ “ಮೂರ್ಖ” ಎಂದು ಕರೆದಿದ್ದಾರೆ. ” ಯೂ ಈಡಿಯಟ್, ಜೈಲಿನಲ್ಲಿದ್ದ ಮತ್ತು ತುಂಬಾ ನೋವು ಅನುಭವಿಸಿದ ಸಾವರ್ಕರ್ ಬಗ್ಗೆ ಮಾತನಾಡಲು ನಿಮ್ಮ ಯೋಗ್ಯತೆ ಇದ್ಯಾ? ಎಂದು ಕೆಂಡಮಂಡಲರಾಗಿದ್ದಾರೆ.
ಸಾವರ್ಕರ್ ವಿರುದ್ಧ ಹೇಳಿಕೆ ನೀಡಿದ ನಂತ್ರ ರಾಹುಲ್ ವಿರುದ್ಧ ಥಾಣೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ರಾಹುಲ್ ಗಾಂಧಿ ಅವರ ಹೇಳಿಕೆಗೆ ಭಾನುವಾರ ಪ್ರತಿಕ್ರಿಯಿಸಿರುವ ಠಾಕ್ರೆ, ಸಾವರ್ಕರ್ ಮಾಡಿದ್ದು ಅವರ “ಕಾರ್ಯತಂತ್ರದ” ಭಾಗವಾಗಿದೆ ಎಂದು ಹೇಳಿದರು. “ಸಾವರ್ಕರ್ ಯಾರು ಎಂದು ನಿಮಗೆ ತಿಳಿದಿದೆಯೇ? ಅವರನ್ನ ಎಲ್ಲಿ ಇರಿಸಲಾಗಿತ್ತೋ.? ಅಲ್ಲಿ ಅವರು ಏನು ಮಾಡುತ್ತಿದ್ದರು? ನೀವು ಯಾವ ಕಷ್ಟಗಳನ್ನ ಎದುರಿಸಿದಿರಿ.? ಇನ್ನು ಶಿವಾಜಿ ಮಹಾರಾಜರು ತಮ್ಮ ಕೋಟೆಗಳನ್ನ ಮಿರ್ಜಾ ರಾಜೆಗೆ ನೀಡಿದರು. ಹಾಗಂತ ಅವು ಉಡುಗೊರೆಗಳಾಗಿರಲಿಲ್ಲ, ಬದಲಾಗಿ ಒಂದು ತಂತ್ರವಾಗಿತ್ತು’ ಎಂದು ಹೇಳಿದರು.
ಅಂದ್ಹಾಗೆ, ಸಾವರ್ಕರ್ ಅವರು ಬ್ರಿಟಿಷ್ ರಾಜ್’ಗೆ ಬರೆದಿದ್ದಾರೆ ಎಂದು ಹೇಳಲಾದ ಪತ್ರದ ಆಯ್ದ ಭಾಗವನ್ನ ಉಲ್ಲೇಖಿಸಿದ ರಾಹುಲ್, “ಕೇಸರಿ ಸಿದ್ಧಾಂತಿಯು ಮಹಾತ್ಮಾ ಗಾಂಧಿ, ಜವಾಹರಲಾಲ್ ನೆಹರು ಮತ್ತು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರಂತಹವರಿಗೆ ದ್ರೋಹ ಬಗೆದು ಬ್ರಿಟಿಷ್ ಆಡಳಿತದಿಂದ ತಮ್ಮನ್ನು ಕ್ಷಮಿಸುವಂತೆ ಬೇಡಿಕೊಂಡಿದ್ದಾರೆ” ಎಂದು ಹೇಳಿದ್ದರು. “ವೀರ್ ಸಾವರ್ಕರ್ ಬ್ರಿಟಿಷರಿಗೆ ಪತ್ರ ಬರೆದರು. ನಂತ್ರ ಸಾವರ್ಕರ್ ಬ್ರಿಟಿಷರಿಗೆ ಸಹಾಯ ಮಾಡಿದರು. ಸಾವರ್ಕರ್ ಭಯದಿಂದ ಈ ಪತ್ರಕ್ಕೆ ಸಹಿ ಹಾಕುವ ಮೂಲಕ ಮಹಾತ್ಮಾ ಗಾಂಧಿ, ಜವಾಹರಲಾಲ್ ನೆಹರು ಮತ್ತು ಸರ್ದಾರ್ ಪಟೇಲ್ ಅವರಂತಹ ನಾಯಕರಿಗೆ ದ್ರೋಹ ಬಗೆದರು” ಎಂದು ರಾಹುಲ್ ಹೇಳಿದ್ದರು.
‘ವಿದ್ಯಾಸಿರಿ’ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ನ.30 ಕೊನೆಯ ದಿನಾಂಕ |Scholarship
ಆಕೆ ಬೇಕೆಂತಲೇ ಹೀಗೆಲ್ಲಾ ಮಾಡ್ತಿದ್ದಾಳೆ ; ಪವಿತ್ರಾ ಲೋಕೇಶ್ ‘ಟ್ರೋಲಿಂಗ್ ಕೇಸ್’ಗೆ ಹೊಸ ಟ್ವಿಸ್ಟ್