ಮಂಗಳೂರು : ಮಂಗಳೂರು ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣದ ಆರೋಪಿ ಶಾರೀಖ್ ಮೊಬೈಲ್ ನಿಂದ ಮತ್ತಷ್ಟು ಸ್ಪೋಟಕ ಮಾಹಿತಿಗಳು ರಿವೀಲ್ ಆಗುತ್ತಿದೆ.
ಇದೀಗ ಆತಂಕಕಾರಿ ವಿಷಯ ಅಂದರೆ, ಈತ ಮುಸ್ಲಿಂ ಯುವಕರನ್ನು ಸೆಳೆಯಲು ಸೆಕ್ಸ್ ವೀಡಿಯೋವನ್ನು ಕಳುಹಿಸುತ್ತಿದ್ದ ವಿಚಾರ ಪೊಲೀಸ್ ತನಿಖೆಯಿಂದ ಬೆಳಕಿಗೆ ಬಂದಿದೆ ಎನ್ನಲಾಗಿದೆ.
ಸೆಕ್ಸ್ ವಿಡಿಯೋಗಳಿಂದಲೇ ಕರಾವಳಿ ಭಾಗದ ಹಲವು ಮುಸ್ಲಿಂ ಯುವಕರನ್ನು ಉಗ್ರ ಚಟುವಟಿಕೆಗೆ ಸೇರಿಸಿದ್ದಾನೆ ಎಂಬ ಮಾಹಿತಿ ಪೊಲೀಸ್ ತನಿಖೆಯಿಂದ ಹೊರ ಬಿದ್ದಿದೆ ಎನ್ನಲಾಗಿದೆ.
ಶಂಕಿತ ಉಗ್ರ ಶಾರೀಖ್ ಮೊಬೈಲ್ ನಲ್ಲಿ ಬರೋಬ್ಬರಿ 500 ಕ್ಕೂ ಹೆಚ್ಚು ಸೆಕ್ಸ್ ವೀಡಿಯೋಗಳು ಪತ್ತೆಯಾಗಿದ್ದು, ಇದನ್ನೇ ಅಸ್ತ್ರವನ್ನಾಗಿಸಿ ಈತ ನೂರಾರು ಮುಸ್ಲಿಂ ಯುವಕರನ್ನು ಉಗ್ರ ಚಟುವಟಿಕೆಗೆ ಸೇರಿಸಿದ್ದಾನೆ ಎಂಬ ಮಾಹಿತಿ ಪೊಲೀಸ್ ತನಿಖೆಯಿಂದ ಹೊರ ಬಿದ್ದಿದೆ ಎನ್ನಲಾಗಿದೆ. ಶಾರೀಕ್ ಹತ್ತಕ್ಕೂ ಹೆಚ್ಚು ಪೋನ್ಗಳನ್ನು ಹೊಂದಿದ್ದು, ಅದನ್ನು ಬಳಕೆ ಮಾಡಿದ ನಂತರ ಮೊಬೈಲನ್ನು ಮಾರಾಟ ಮಾಡುತ್ತಿದ್ದನು ಎನ್ನಲಾಗಿದೆ.
ಮೊದಲು ಯುವಕರ ಮೊಬೈಲ್ ನಂಬರ್ ಕಲೆಹಾಕಿ ಅವರ ಮೊಬೈಲ್ ಗೆ ಸೆಕ್ಸ್ ವಿಡಿಯೋ ಕಳುಹಿಸಿ ಅವರ ಪರಿಚಯ ಮಾಡಿಕೊಂಡು ಇನ್ನಷ್ಟು ಸಲುಗೆ ಬೆಳೆಸಿ ಭಯೋತ್ಪಾದನೆ ವಿಡಿಯೋ ಕಳುಹಿಸುತ್ತಿದ್ದರು. ನಂತರ ಅವರನ್ನು ಭೇಟಿಯಾಗಿ ಉಗ್ರ ಚಟುವಟಿಕೆಗೆ ಸೇರಿಸುತ್ತಿದ್ದನು ಎಂಬ ಸ್ಪೋಟಕ ಮಾಹಿತಿ ಬಯಲಾಗಿದೆ.
ಇನ್ನೂ, ಮತಾಂಧ ಮನಃಸ್ಥಿತಿಯನ್ನು ಹೊಂದಿದ್ದ ಮಹಮ್ಮದ್ ಶಾರೀಕ್ನ ಮೊಬೈಲ್ನಲ್ಲಿ 1 ಸಾವಿರಕ್ಕೂ ಹೆಚ್ಚು ಜೆಹಾದಿ ವೀಡಿಯೋಗಳು ಪತ್ತೆಯಾಗಿವೆ.ಐಸಿಸ್ ಉಗ್ರರ ವಿಧ್ವಂಸಕ ಕೃತ್ಯಗಳ ವೀಡಿಯೋ ಸೇರಿದಂತೆ 55 ಜಿಬಿಗೂ ಅಧಿಕ ವೀಡಿಯೋ, ಪೊಟೋಗಳು ಆತನ ಮೊಬೈಲ್ ಮತ್ತು ಪೆನ್ಡ್ರೈವ್ನಲ್ಲಿ ಪತ್ತೆಯಾಗಿವೆ ಎನ್ನಲಾಗಿದೆ.
ಮಂಗಳೂರಿನಲ್ಲಿ ಆಟೋದಲ್ಲಿ ಕುಕ್ಕರ್ ಬಾಂಬ್ ಬಾಂಬ್ ಸ್ಫೋಟದಲ್ಲಿ ತೀವ್ರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಉಗ್ರ ಶಾರೀಕ್ನನ್ನೂ ಹತ್ಯೆಗೆ ಸಂಚಿನ ಬಗ್ಗೆ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಶಾರೀಕ್ ಚಿಕಿತ್ಸೆ ಪಡೆಯುತ್ತಿರುವ ಮಂಗಳೂರಿನ ಆಸ್ಪತ್ರೆಗೆ ಹೆಚ್ಚಿನ ಭದ್ರತೆ ಕಲ್ಪಿಸಲಾಗಿದೆ. ಶಾರೀಕ್ ಕೊಠಡಿ ಪ್ರವೇಶದ ಬಳಿ ಮೆಟಲ್ ಡಿಟೆಕ್ಟರ್ ಅಳವಡಿಸಿಸಲಾಗಿದೆ.
BIGG NEWS ; “50 ಕೋಟಿ ಬಳಕೆದಾರರ ಡೇಟಾ ಸೋರಿಕೆಗೆ ಯಾವುದೇ ಎವಿಡೆನ್ಸ್ ಇಲ್ಲ” ; ವಾಟ್ಸಾಪ್ ಸ್ಪಷ್ಟನೆ |Data Leak
ನ.30 ರಿಂದ ‘ಪುರುಷ ಸಂತಾನಹರಣ ಚಿಕಿತ್ಸಾ’ ಶಿಬಿರ : ಸರ್ಕಾರದಿಂದ 1,100 ರೂ. ಪ್ರೋತ್ಸಾಹಧನ