ಬಂಟ್ವಾಳ : ಅತಿಯಾಗಿ ತಲೆ ನೋವಿನ ಮಾತ್ರೆ ಸೇವಿಸಿ ಅಸ್ವಸ್ಥಗೊಂಡು ಶಾಲಾ ಬಾಲಕಿಯೋರ್ವಳು ಆಸ್ಪತ್ರೆಗೆ ದಾಖಲಾಗಿ ಜೀವನ್ಮರಣ ಹೋರಾಟ ನಡೆಸುತ್ತಿರುವ ಘಟನೆ ವರದಿಯಾಗಿದೆ.
BIGG NEWS : ಚಿತ್ರದುರ್ಗದಲ್ಲಿ ಜ.8 ರಂದು ಕಾಂಗ್ರೆಸ್ `SC-ST’ ಐಕ್ಯತಾ ಸಮಾವೇಶ
ಕುಮ್ಡೆಲು ನಿವಾಸಿಯಾಗಿರುವ ಬಾಲಕಿ ಮಂಗಳೂರು ಖಾಸಗಿ ಕಾಲೇಜಿನ ಅಪ್ರಾಪ್ತ ಬಾಲಕಿಯಾಗಿದ್ದಾಳೆ. ಬಡತನದ ಕುಟುಂಬದ ಬಾಲಕಿಯಾಗಿರುವ ಈಕೆಯ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಬಾಲಕಿ ಅತಿಯಾದ ತಲೆನೋವಿನಿಂದ ಬಳಲುತ್ತಿದ್ದಳು ಎನ್ನಲಾಗಿದೆ.
BIGG NEWS : ಚಿತ್ರದುರ್ಗದಲ್ಲಿ ಜ.8 ರಂದು ಕಾಂಗ್ರೆಸ್ `SC-ST’ ಐಕ್ಯತಾ ಸಮಾವೇಶ
ಸದ್ಯ ಸ್ಪಷ್ಟವಾದ ಯಾವುದೇ ಕಾರಣ ತಿಳಿದು ಬಂದಿಲ್ಲ. ಒಂದು ಕಡೆಯಿಂದ ತಾಯಿಯ ಅನಾರೋಗ್ಯ, ಇನ್ನೊಂದು ಕಡೆಯಿಂದ ಮೈಗ್ರೇನ್ ಸಮಸ್ಯೆ ಇವೆಲ್ಲವೂಗಳ ಜೊತೆ ಅತಿಯಾದ ಬಡತನದಿಂದ ಬೇಸತ್ತ ವಿದ್ಯಾರ್ಥಿನಿ ಮಾತ್ರೆ ತೆಗೆದಕೊಂಡಿದ್ದಾಳಾ? ಎನ್ನುವ ಪ್ರಶ್ನೆ ಪೋಲೀಸರದ್ದು.
BIGG NEWS : ಚಿತ್ರದುರ್ಗದಲ್ಲಿ ಜ.8 ರಂದು ಕಾಂಗ್ರೆಸ್ `SC-ST’ ಐಕ್ಯತಾ ಸಮಾವೇಶ
ಸದ್ಯ ಬಾಲಕಿ ತೀವ್ರ ನಿಗಾ ಘಟಕ ದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಶೀಘ್ರವಾಗಿ ಗುಣಮುಖವಾಗಿ ಬರಲಿ ಎಂಬುದು ಎಲ್ಲರ ಹಾರೈಕೆಯಾಗಿದೆ