ಬೆಂಗಳೂರು: ಪ್ರತಿ ಆಟೊರಿಕ್ಷಾ ರೈಡ್ಗೆ ಶೇ 5ರ ಜಿಎಸ್ಟಿ ವಿಧಿಸುವ ನಿರ್ಧಾರದ ಬಗ್ಗೆ ‘ಓಲಾ ಊಬರ್ ಚಾಲಕರು ಮತ್ತು ಮಾಲೀಕರ ಒಕ್ಕೂಟ’ ಬೇಸರ ವ್ಯಕ್ತಪಡಿಸಿದೆ.
BIGG NEWS: ಅವಕಾಶ ಸಿಕ್ಕಲ್ಲಿ ಇಂದು ದೆಹಲಿಯಲ್ಲಿ ಜೆಪಿ ನಡ್ಡಾ ಭೇಟಿ : ಸಿಎಂ ಬೊಮ್ಮಾಯಿ
ಕರ್ನಾಟಕ ಸರ್ಕಾರವು ಆ್ಯಪ್ಗಳ ಮೂಲಕ ಆಟೊಗಳನ್ನು ಬುಕ್ ಮಾಡಿ ಸಂಚರಿಸುವ ಪ್ರಯಾಣಿಕರ ಪ್ರತಿ ಸವಾರಿಗೆ ಶೇ. 5ರ ಸೇವಾ ಶುಲ್ಕ ಮತ್ತು ಜಿಎಸ್ಟಿ ವಿಧಿಸುವಂತೆ ಪ್ರಾದೇಶಿಕ ಸಾರಿಗೆ ಪ್ರಾಧಿಕಾರಗಳಿಗೆ ಸೂಚಿಸಿತ್ತು. ಕಳೆದ ನವೆಂಬರ್ 25ರಂದು ಈ ಆದೇಶ ಹೊರಬಿದ್ದಿತ್ತು. ಇದು ಚಾಲಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಒಕ್ಕೂಟದ ಅಧ್ಯಕ್ಷ ತನ್ವೀರ್ ಪಾಷ, ‘ಕರ್ನಾಟಕ ಸರ್ಕಾರವು ಹೈಕೋರ್ಟ್ ಎದುರು ಸರಿಯಾಗಿ ವಾದ ಮಂಡಿಸುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.
BIGG NEWS: ಅವಕಾಶ ಸಿಕ್ಕಲ್ಲಿ ಇಂದು ದೆಹಲಿಯಲ್ಲಿ ಜೆಪಿ ನಡ್ಡಾ ಭೇಟಿ : ಸಿಎಂ ಬೊಮ್ಮಾಯಿ
ಕರ್ನಾಟಕ ಸರ್ಕಾರವು ‘ಕರ್ನಾಟಕ ಆನ್ ಡಿಮಾಂಡ್ ಟ್ರಾನ್ಸ್ಪೋರ್ಟೇಶನ್ ಟೆಕ್ನಾಲಜಿ ಅಗ್ರಿಗೇಟರ್ಸ್’ ನಿಯಮಗಳಿಗೆ ತಿದ್ದುಪಡಿ ತರಬೇಕಿತ್ತು. ಏಕೆಂದರೆ ಈ ನಿಯಮಗಳಲ್ಲಿ ಆಟೊರಿಕ್ಷಾಗಳ ಉಲ್ಲೇಖವೇ ಇಲ್ಲ’ ಎಂದು ಪಾಷಾ ಪ್ರತಿಕ್ರಿಯಿಸಿದರು. ‘ಅವರು ನ್ಯಾಯಾಲಯಕ್ಕೆ ಸರಿಯಾಗಿ ಮಾಹಿತಿ ನೀಡಿದ್ದರೆ, ನಿಯಮಗಳಿಗೆ ತಿದ್ದುಪಡಿ ತರಲು ನ್ಯಾಯಾಲಯವು ಸೂಚಿಸುತ್ತಿತ್ತು’ ಎಂದು ಹೇಳಿದ್ದಾರೆ.