ಮೀರತ್: ಮೀರತ್ನ ಕಿಥೋರ್ ಪ್ರದೇಶದ ಮಧ್ಯಂತರ ಕಾಲೇಜಿನಲ್ಲಿ ಅಶ್ಲೀಲ ಟೀಕೆಗಳು ಮತ್ತು ಮಹಿಳಾ ಶಿಕ್ಷಕಿಯೊಬ್ಬರಿಗೆ ಕಿರುಕುಳ ನೀಡಲು ಯತ್ನಿಸಿದ ಆರೋಪದ ಮೇಲೆ ಮೂವರು ಅಪ್ರಾಪ್ತ ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ.
ವಿದ್ಯಾರ್ಥಿಗಳು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾರೆ. ವಿಡಿಯೋದಲ್ಲಿ ವಿದ್ಯಾರ್ಥಿಗಳು ಶಿಕ್ಷಕಿಯನ್ನು ‘ಮೆರಿ ಜಾನ್’ ಎಂದು ಸಂಬೋಧಿಸಿ ‘ಐ ಲವ್ ಯೂ’ ಎಂದು ಹೇಳುವುದನ್ನು ಕೇಳಬಹುದು.
In #Meerut‘s Kithore police limits, 3 intermediate students were booked for harassing their teacher with lewd comments, and posting the visual of their act on social media. #UttarPradesh pic.twitter.com/cE282awDZO
— Arvind Chauhan (@Arv_Ind_Chauhan) November 27, 2022
ಈ ಸಂಬಂಧ, 12 ನೇ ತರಗತಿಯ ಮೂವರು ವಿದ್ಯಾರ್ಥಿಗಳು ಕಳೆದ ಕೆಲವು ವಾರಗಳಿಂದ ತನಗೆ ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಶಿಕ್ಷಕಿ ಶುಕ್ರವಾರ ದೂರು ನೀಡಿದ್ದಾರೆ. ಶಾಲೆಗೆ ಹೋಗುವಾಗ ಮತ್ತು ಮನೆಗೆ ಹಿಂದಿರುಗುವಾಗ ವಿದ್ಯಾರ್ಥಿಗಳು ಹಲವು ಬಾರಿ ಅಶ್ಲೀಲ ಕಾಮೆಂಟ್ಗಳನ್ನು ಮಾಡುತ್ತಿದ್ದರು. ಈ ಕುರಿತು ವಿದ್ಯಾಗಳ ಪೋಷಕರಿಗೆ ದೂರು ನೀಡಿದರೂ ಅವರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಶಿಕ್ಷಕಿ ಆರೋಪಿಸಿದ್ದಾರೆ.
ಈ ಸಂಬಂಧ, ಮೂವರು ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
Chanakya Niti: ಈ ಮೂವರು ನಿಮ್ಮ ಜೊತೆಗಿದ್ರೆ ಜೀವನ ಬಲು ಸುಲಭ: ಆಚಾರ್ಯ ಚಾಣಕ್ಯ
Chanakya Niti: ಈ ಮೂವರು ನಿಮ್ಮ ಜೊತೆಗಿದ್ರೆ ಜೀವನ ಬಲು ಸುಲಭ: ಆಚಾರ್ಯ ಚಾಣಕ್ಯ