ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ.
ಚಾಮರಾಜನಗರ: ಅಪ್ರಾಪ್ತೆ ವಾಹನ ಚಾಲನೆ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾಮರಾಜನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪಟ್ಟಣದಲ್ಲಿ ದಿನೆ ದಿನೆ ಅಪ್ರಾಪ್ತರಿಂದ ವಾಹನ ಚಾಲನೆ, ಶಿರಸ್ತ್ರಾಣ ಧರಿಸದೆ ವಾಹನ ಸಂಚಾರ ಮಾಡುವ ಪ್ರಕರಣಗಳು ಕೂಡ ಹೆಚ್ಚುತ್ತಿದೆ ಎಂದು ಸವಿಸ್ತೃತವಾಗಿ ಕನ್ನಡ ನ್ಯೂಸ್ ನೌ ವರದಿ ಪ್ರಕಟಿಸಲಾಗಿತ್ತು. ಕೆಲವು ಅಪ್ರಾಪ್ತರು ವಾಹನ ಚಾಲನೆ ಮಾಡುತ್ತಿರುವ ಸಂಬಂದ ಕೆಲ ಪೊಲೀಸರು ಗೊತ್ತಿದ್ದು ಗೊತ್ತಿಲ್ಲದಂತೆ ಮೌನವಾಗಿದ್ದರು..ಕೆಲ ಪೊಲೀಸರೂ ಕೂಡ ತಮ್ಮ ಮಕ್ಕಳು ಅಪ್ರಾಪ್ತರೆಂದು ಗೊತ್ತಿದ್ದರೂ , ವಾಹನ ಚಾಲನೆ ಮಾಡೊದು ತಪ್ಪೆಂದು ಗೊತ್ತಿದ್ದರೂ ಕಾನೂನಿನ ಅರಿವಿನ ಬಗ್ಗೆ ಬೇಜವಬ್ದಾರಿತನ ಪ್ರದರ್ಶನ ಮಾಡಿದ್ದಾರೆ..ಮಾಡುತ್ತಿದ್ದಾರೆ.
ಚಾಮರಾಜನಗರ ಎಸ್ಪಿ ಈಗಾಗಲೇ ಸಿಬ್ಬಂದಿಗಳಿಗಾಗಿಯೇ ಆದೇಶ ಹೊರಡಿಸಿದ್ದು ಕರ್ತವ್ಯ ಅವದಿಯಲ್ಲಿ ಹಾಗೂ ಖಾಸಗೀ ಅವದಿಯಲ್ಲೂ ಹೆಲ್ಮೆಟ್ ಧರಿಸಿ ವಾಹನ ಚಲಾಯಿಸುವುದು. ಒಂದು ವೇಳೆ ನಿಯಮ ಉಲ್ಲಂಘಿಸಿದರೆ ಇಲಾಖಾವಾರು ನಿಯಮ ತೆಗೆದುಕೊಳ್ಳಲಾಗುವುದು ಎಂದು ಆದೇಶ ಹೊರಡಿಸಿದ್ದರೂ ಇವರ ಆದೇಶ ಕ್ಯಾರೆ ಎನ್ನುತ್ತಿಲ್ಲ.
ಚಾಮರಾಜನಗರ ಪಟ್ಟಣದಲ್ಲಿ ಶಾಲಾ ಮಕ್ಕಳಿಂದ ವಾಹನ ಚಾಲನೆಯನ್ನ ಚಾಲನೆ ಮಾಡಿಸೊದು ತಪ್ಪು ಎಂದು ತಿಳಿದಿದ್ದರೂ ಪೋಷಕರು ಮಾತ್ರ ಉದ್ದಟತನ ಪ್ರದರ್ಶಿಸಿದ್ದಾರೆ. ಜಿಲ್ಲೆಯಲ್ಲಿ ಇಷ್ಟು ಅಪ್ರಾಪ್ತ ಮಕ್ಕಳಿಂದ ವಾಹನ ಚಾಲನೆ ಮಾಡುತ್ತಿದ್ದರೂ ಯಾವ್ದೆ ಪ್ರಕರಣ ನ್ಯಾಯಾಲಯಕ್ಕೆ ಹಸ್ತಾಂತರಿಸದೆ ರಾಜೀ ಮಾಡಿಕೊಂಡು ಕೈ ಬಿಡುತ್ತಿರುವುದೆ ಸಾಕ್ಷಿಯಾಗಿದೆ. ಅನ್ಯ ಜಿಲ್ಲೆಯೊಂದರಲ್ಲಿ ನ್ಯಾಯಾಲಯ ಅಪ್ರಾಪ್ತ ಮಕ್ಕಳ ವಾಹನ ಚಾಲನೆ ಮಾಡಿದ ತಪ್ಪಿದೆ 25 ಸಾವಿರ ದಂಡ ಹಾಕಿದ ಸುದ್ದಿ ಪ್ರಚಲಿತವಾಗಿದೆ. ಹೀಗಿರುವಾಗ ಜಿಲ್ಲೆಯಲ್ಲಿ ಇಂತಹ ಪ್ರಕರಣ ಪೊಲೀಸರು ಕಣ್ಣಿಗೆ ಕಂಡರೂ ಮೌನವಹಿಸಿದೆ. ಕಠಿಣ ಕ್ರಮ ಜರುಗಿಸದೆ ಇರೋದು ಇಂತಹ ಸನ್ನಿವೇಶಗಳಿಗೆ ಕಾರಣವಾಗಿದೆ ಎಂದು ವರದಿ ಮಾಡಲಾಗಿತ್ತು.
ಇತ್ತೀಚೆಗೆ ಕೆಎಸ್ಪಿ ಆ್ಯಪ್ ಅಲ್ಲಿ ಅಪ್ರಾಪ್ತೆ ಬಾಲಕಿ ಶಿರಸ್ತ್ರಾಣ ಧರಿಸದೆ, ತ್ರಿಬಲ್ ರೈಡ್ ಜೊತೆಗೆ ಅಪಾಯಕಾರಿ ವಾಹನ ಚಾಲನೆ ಮಾಡುತ್ತಿದ್ದ ಪ್ರಕರಣ ದಾಖಲಿಸಿದ್ದರು. ಇದರಿಂದ ಎಚ್ಚೆತ್ತ ಸಂಚಾರಿ ಠಾಣಾ ಪೊಲೀಸರು ವಾಹನ ಚಾಲನೆ ಮಾಡುತ್ತಿದ್ದ ವಿದ್ಯಾರ್ಥಿನಿ ಹಾಗೂ ಪೋಷಕರ ಮೇಲೆ ಎಪ್ಐಆರ್ ದಾಖಲಿಸಿದ್ದಾರೆ. ಸದ್ಯ ಜೆಎಸ್ಎಸ್ ಸಂಸ್ಥೆಯ ವಿದ್ಯಾರ್ಥಿನಿ ಎಂದು ತಿಳಿದುಬಂದಿದ್ದು ಇನ್ನ ಹಲವಾರು ಶಾಲಾ ಕಾಲೇಜುಗಳಲ್ಲಿ ಇಂತಹ ಕಾನೂನು ರಸ್ತೆ ನಿಯಮ ಉಲ್ಲಂಘನೆ ಪ್ರಕರಣಗಳನ್ನ ಮಾಡುತ್ತಿದ್ದು ಅಂತಹ ಶಾಲಾ ಕಾಲೇಜಿನ ಮುಖ್ಯಸ್ಥರು/ಪ್ರಾಂಶುಪಾಲರ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ಜಿಲ್ಲಾಎಸ್ಪಿ ಹಾಗೂ ರಾಜ್ಯದ ಪೊಲೀಸ್ ಮಹಾನಿರ್ದೇಶಕರಿಗೆ ಮನವಿ ಪತ್ರ ಸಲ್ಲಿಸಲಾಗಿದೆ