ಚಿಕ್ಕಬಳ್ಳಾಪುರ: ಕಳೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಬಂದಿದ್ದಕ್ಕೆ ಜನ ನನ್ನನ್ನು ಸೋಲಿಸಿಬಿಟ್ಟರು ಎಂದು ಪೌರಾಡಳಿತ ಇಲಾಖೆ ಸಚಿವ ಎಂಟಿಬಿ ನಾಗರಾಜ್ ತಮ್ಮ ಸೋಲಿನ ಕಹಿ ನೆನಪನ್ನು ಮಾಡಿಕೊಂಡಿದ್ದಾರೆ.
BIGG NEWS: ಚಿಕ್ಕಬಳ್ಳಾಪುರ ನೂತನ ಮಂಚೇನಹಳ್ಳಿ ಕೇಂದ್ರಕ್ಕೆ 10 ಕೋಟಿ ರೂ. ಅನುದಾನ; ಆರ್. ಅಶೋಕ್ ಘೋಷಣೆ
ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ ಅವರು, ಯಾವ ಶಾಸಕರು, ಸಚಿವರು ಸರ್ಕಾರ ಕೆಲಸ ಮಾಡಿದೆ ಅಂತ ಜನರೇ ನೆನೆಪಿಟ್ಟುಕೊಳ್ಳಿ. ಯಾಕೆಂದರೆ ಚುನಾವಣೆ ಬಂದ ನಾಲ್ಕೈದು ದಿನದಲ್ಲೇ ಮೆರೆತು ಬಿಡುತ್ತೀರಾ. ನಿದ್ದೆ ಮಂಪರು ಬಂದ ಹಾಗೆ ತೂಕಡಿಸಿಬಿಡುತ್ತೀರಾ. ಮೊನ್ನೆ ನಡೆದ ಬೈ ಎಲೆಕ್ಷನ್ನಲ್ಲಿ ನಾನು ಸೋಲಬೇಕಿತ್ತಾ? ಆದರೆ ಸೋಲಿಸಿಬಿಟ್ಟಿದ್ದೀರಾ ಎಂದಿದ್ದಾರೆ.
BIGG NEWS: ಚಿಕ್ಕಬಳ್ಳಾಪುರ ನೂತನ ಮಂಚೇನಹಳ್ಳಿ ಕೇಂದ್ರಕ್ಕೆ 10 ಕೋಟಿ ರೂ. ಅನುದಾನ; ಆರ್. ಅಶೋಕ್ ಘೋಷಣೆ
ಈ ವಿಚಾರದಲ್ಲಿ ನನ್ನದು ಒಂದು ತಪ್ಪಿದೆ. ಸುಧಾಕರ್ ಜೊತೆಗೆ ನಾನು ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಬಂದನಲ್ಲ ಅದಕ್ಕೆ ಸೋಲಿಸಿಬಿಟ್ಟಿದ್ದೀರಾ. ಆದರೆ ಸುಧಾಕರ್ನನ್ನು ಗೆಲ್ಲಿಸಿದ್ದೀರಾ. ಇದೇ ನನಗೆ ನೋವು ತರಿಸಿದೆ. ಸೋಲಿನಿಂದ ನನಗೆ ಏನೂ ಕಷ್ಟವಾಗಲಿಲ್ಲ. ಆದರೆ ಹೊಸಕೋಟೆ ತಾಲೂಕಿನ ಅಭಿವೃದ್ಧಿಗೆ ಹಿನ್ನೆಡೆ ಆಯಿತು. ಹೊಸಕೋಟೆ ಜನರ ಸೇವೆ ಮಾಡಲು ಆಗಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು