ಬೆಂಗಳೂರು: ನಗರದಲ್ಲಿ ವೋಟರ್ ಐಡಿ ಪರಿಷ್ಕರಣೆಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ವೋಟ್ ಕಳ್ಳತನ ನೋಟ್ ಪ್ರಿಂಟ್ ಮಾಡಿದ್ದಷ್ಟೇ ಅಪರಾಧ. ಅಕ್ರಮದಲ್ಲಿ ಭಾಗಿಯಾದವರ ವಿರುದ್ಧ ಕಾನೂನು ಕ್ರಮ ಆಗಬೇಕು ಎಂದು ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕಿಡಿಕಾರಿದ್ದಾರೆ.
BIGG NEWS: ಮಂಡ್ಯದಲ್ಲಿ ಕಮಲ ಅರಳಿಸಲು ಸಖತ್ ಪ್ಲ್ಯಾನ್ ; ಸುಮಲತಾ ಅಂಬರೀಶ್ ಆಪ್ತ ಸಚ್ಚಿದಾನಂದ ಬಿಜೆಪಿಗೆ
ಬಿಎಲ್ಒಗಳನ್ನು ನೇಮಕ ಮಾಡುವ ಅಧಿಕಾರ ಯಾರಿಗೂ ಇಲ್ಲ. ಪಕ್ಷದಿಂದ ನೇಮಕ ಮಾಡಿದರೂ ತಹಶೀಲ್ದಾರ್ ಸಹಿ ಹಾಕಬೇಕು. ನಮ್ಮ ಅವಧಿಯಲ್ಲಿ ಅಕ್ರಮ ಆಗಿದ್ದರೆ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳಿ. ರಾಜರಾಜೇಶ್ವರಿನಗರದಲ್ಲಿ ಗೌಡ ಎಂಬ ಹೆಸರು ಡಿಲೀಟ್ ಮಾಡಿದ್ದಾರೆ. ಗೌಡ ಅಂತ ಇದ್ರೆ ಡಿಲಿಟ್ ಮಾಡಿದ್ದಾರೆ ಎಂದು ಶಾಸಕ ಮುನಿರತ್ನ ಹೆಸರು ಪ್ರಸ್ತಾಪಿಸದೇ ಡಿಕೆ ಶಿಕುಮಾರ್ ಗಂಭೀರ ಆರೋಪ ಮಾಡಿದ್ದಾರೆ.
ದಲಿತರು, ಹಿಂದುಳಿದ, ಮುಸ್ಲಿಮರ ಮತಗಳನ್ನ ಡಿಲೀಟ್ ಮಾಡಿದ್ದಾರೆ. ಈ ಅಕ್ರಮದಲ್ಲಿ ಸಚಿವರು ಹಾಗೂ ಶಾಸಕರು ಭಾಗಿಯಾಗಿದ್ದಾರೆ. ನನ್ನ ಮೇಲೂ ಮಾನನಷ್ಟ ಮೊಕದ್ದಮೆ ಹಾಕುವುದಾಗಿ ಹೇಳಿದ್ದಾರೆ. ಮಾನನಷ್ಟ ಮೊಕದ್ದಮೆ ದಾಖಲಿಸಲಿ ನನಗೇನು ಭಯವಿಲ್ಲ ಎಂದು ಸಚಿವ ಡಾ.ಅಶ್ವತ್ಥ್ ನಾರಾಯಣಗೆ ಡಿಕೆ ಶಿವಕುಮಾರ್ ಟಾಂಗ್ ಕೊಟ್ಟಿದ್ದಾರೆ.