ನ್ಯೂಯಾರ್ಕ್: ಭದ್ರತಾ ಕಾರಣದಿಂದ ಹುವಾವೇ ಟೆಕ್ನಾಲಜೀಸ್ ಕಂಪನಿ ಮತ್ತು ಝಡ್ಟಿಇ ಕಾರ್ಪ್ನಿಂದ ಎಲೆಕ್ಟ್ರಾನಿಕ್ ಉಪಕರಣಗಳ ಮೇಲೆ ನಿಷೇಧ ಹೇರಿದೆ. ಫೆಡರಲ್ ಕಮ್ಯುನಿಕೇಷನ್ಸ್ ಕಮಿಷನ್, ಶುಕ್ರವಾರ ಬಿಡುಗಡೆ ಮಾಡಿರುವ ಹೇಳಿಕೆ ಪ್ರಕಾರ, ನಿಷೇಧ ಹೇರಿರುವ ಪಟ್ಟಿಯಲ್ಲಿ ಕನೆಕ್ಟೆಡ್-ಕ್ಯಾಮೆರಾ ಪೂರೈಕೆದಾರರಾದ ಹ್ಯಾಂಗ್ಝೌ ಹಿಕ್ವಿಷನ್ ಡಿಜಿಟಲ್ ಟೆಕ್ನಾಲಜಿ ಕಂಪನಿ ಮತ್ತು ದಹುವಾ ಟೆಕ್ನಾಲಜಿ ಕಂಪನಿ ಮತ್ತು ದ್ವಿಮುಖ ರೇಡಿಯೋ ತಯಾರಕ ಹೈಟೆರಾ ಕಮ್ಯುನಿಕೇಷನ್ಸ್ ಕಾರ್ಪೊರೇಷನ್ ಅನ್ನು ಹೆಸರಿಸಿದೆ.
ವಿಶ್ವಾಸಾರ್ಹವಲ್ಲದ ಸಂವಹನ ಸಾಧನಗಳನ್ನು ನಮ್ಮ ಗಡಿಯೊಳಗೆ ಬಳಸಲು ಅಧಿಕೃತಗೊಳಿಸಲಾಗಿಲ್ಲ ಎಂದು ಖಚಿತಪಡಿಸಿಕೊಳ್ಳುವ ಮೂಲಕ ನಮ್ಮ ರಾಷ್ಟ್ರೀಯ ಭದ್ರತೆಯನ್ನು ರಕ್ಷಿಸಲು ಎಫ್ಸಿಸಿ ಬದ್ಧವಾಗಿದೆ ಮತ್ತು ನಾವು ಇಲ್ಲಿ ಆ ಕೆಲಸವನ್ನು ಮುಂದುವರಿಸುತ್ತಿದ್ದೇವೆ ಎಂದು ಅಧ್ಯಕ್ಷೆ ಜೆಸ್ಸಿಕಾ ರೋಸೆನ್ವರ್ಸೆಲ್ ಸುದ್ದಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. “ಈ ಹೊಸ ನಿಯಮಗಳು ದೂರಸಂಪರ್ಕವನ್ನು ಒಳಗೊಂಡ ರಾಷ್ಟ್ರೀಯ ಭದ್ರತಾ ಬೆದರಿಕೆಗಳಿಂದ ಅಮೆರಿಕದ ಜನರನ್ನು ರಕ್ಷಿಸಲು ನಡೆಯುತ್ತಿರುವ ನಮ್ಮ ಕ್ರಮಗಳ ಪ್ರಮುಖ ಭಾಗವಾಗಿದೆ ಅಂತ ಇದೇ ವೇಳೆ ತಿಳಿಸಿದ್ದಾರೆ.