ಇಂಡೋನೇಷ್ಯಾ : ಈ ವಾರದ ಆರಂಭದಲ್ಲಿ ಇಂಡೋನೇಷ್ಯಾದ ಜಾವಾ ದ್ವೀಪವನ್ನು ಬೆಚ್ಚಿಬೀಳಿಸಿದ 5.6 ತೀವ್ರತೆಯ ಭೂಕಂಪದಲ್ಲಿ ಪ್ರಾಣ ಕಳೆದುಕೊಂಡವರ ಸಂಖ್ಯೆ 310 ಕ್ಕೆ ಏರಿದೆ ಎಂದು ಅಧಿಕಾರಿಗಳು ಶುಕ್ರವಾರ ಬಹಿರಂಗಪಡಿಸಿದ್ದಾರೆ, ಹುಡುಕಾಟ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರೆದಿವೆ.
ದೇಶದ ವಿಪತ್ತು ತಗ್ಗಿಸುವ ಏಜೆನ್ಸಿ ಪ್ರಕಾರ, ಭೂಕಂಪದಲ್ಲಿ ಭೂಕುಸಿತಗಳು ಮತ್ತು ಹಲವು ಕಟ್ಟಡಗಳು ಕುಸಿದಿದ್ದು, ಇನ್ನೂ 24 ಜನರು ನಾಪತ್ತೆಯಾಗಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ 2,000 ಕ್ಕೂ ಹೆಚ್ಚು ಇಂಡೋನೇಷಿಯನ್ನರು ಗಾಯಗೊಂಡಿದ್ದಾರೆ. 56,000 ಕ್ಕೂ ಹೆಚ್ಚು ಮನೆಗಳು ಪಶ್ಚಿಮ ಜಾವಾ ಜಿಲ್ಲೆಯ ಸಿಯಾಂಜೂರ್ ಮತ್ತು ಹತ್ತಿರದ ಪ್ರದೇಶಗಳಲ್ಲಿ ಹಾನಿಗೊಳಗಾಗಿವೆ.
ಇಂಡೋನೇಷ್ಯಾವು ವರ್ಷದ ಆರಂಭದಿಂದ ಹಲವು ಬಾರಿ ಪ್ರಬಲ ಭೂಕಂಪಗಳಿಗೆ ತುತ್ತಾಗುತ್ತದೆ. ಆದರೆ ಈ ವಾರ ಸಂಭವಿಸಿದ ಬೂಕಂಪನವು ಇಲ್ಲಿಯವರೆಗಿನ ಅತಿದೊಡ್ಡ ಹಾನಿಯನ್ನು ಉಂಟುಮಾಡಿದೆ ಎನ್ನಲಾಗುತ್ತಿದೆ.
BREAKING NEWS: ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ಟ್ ಕೇಸ್: NIAಗೆ ವರ್ಗಾವಣೆಗೊಳಿಸಿ ಕೇಂದ್ರ ಸರ್ಕಾರ ಆದೇಶ
BIGG NEWS : 466 ಕೋಟಿ ಅಕ್ರಮ ಹಣ ವರ್ಗಾವಣೆ ಪ್ರಕರಣ ; ಯೆಸ್ ಬ್ಯಾಂಕ್ ಮಾಜಿ ಎಂಡಿ ‘ರಾಣಾ ಕಪೂರ್’ಗೆ ಜಾಮೀನು