ಬೆಂಗಳೂರು: ಸಿಲಿಕಾನ್ ಸಿಟಿ ಜನತೆಗೆ ಈಗ ಚಿರತೆಯ() ಭಯ ಆರಂಭವಾಗಿದ್ದು, ಬನಶಂಕರಿ 6 ಸ್ಟೇಜ್ನಲ್ಲಿ ಚಿರತೆ ಪ್ರತ್ಯಕ್ಷ ಕೊಂಡಿದೆ.ಒಬ್ಬೊಬ್ಬರೇ ಓಡಾಡಬೇಡಿ, ಅದರಲ್ಲೂ ರಾತ್ರಿಯಾದರೆ ಮನೆಯಿಂದ ಹೊರಬರಬೇಡಿ ಎಂದು ವೆಲ್ ಫೇರ್ ಅಸೋಸಿಯೇಷನ್ ಜನರಲ್ಲಿ ಜಾಗೃತಿ ಮೂಡಿಸುತ್ತಿದೆ.
ತುರಹಳ್ಳಿ ಅರಣ್ಯ(Turahalli Forest) ಪ್ರದೇಶಕ್ಕೆ ಹತ್ತಿರವಿರುವ ಬನಶಂಕರಿ ಆರನೇ ಹಂತದಲ್ಲಿ ಚಿರತೆ ಕರುವೊಂದನ್ನು ತಿಂದು ಹಾಕಿದೆ. ಈಗಾಗಲೇ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಕಳೆದೊಂದು ವಾರದಿಂದ ಚಿರತೆ ಭೀತಿಯಲ್ಲಿ ಜನರಿದ್ದು ಈಗಾಗಲೇ ಚಿರತೆ ಹಿಡಿಯಲು ಬೋನಿನ ವ್ಯವಸ್ಥೆ ಮಾಡಲಾಗಿದೆ.
ಇದು ಚಿರತೆಗಳ ಸಂತಾನೋತ್ಪತಿ ಸಮಯವಾಗಿರುವುದರಿಂದ ಅಲ್ಲಲ್ಲಿ ಕಾಣುತ್ತಿರುತ್ತದೆ. ಜೊತೆಗೆ ಅರಣ್ಯ ಪ್ರದೇಶಕ್ಕೆ ಈ ಸ್ಥಳ ಹತ್ತಿರವಾಗಿರುವುದರಿಂದ ಓಡಾಟ ಇದೆ. ಸದ್ಯ ಇಲ್ಲಿ ಬೋನಿನ ವ್ಯವಸ್ಥೆ ಮಾಡಲಾಗಿದೆ. ಜನ ಆತಂಕ ಪಡುವ ಅಗತ್ಯವಿಲ್ಲ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.