ವಿಜಯಪುರ: ಐತಿಹಾಸಿಕ ಜಿಲ್ಲೆ ವಿಜಯಪುರದಲ್ಲಿ ಇಂದು ಮತ್ತೆ ಭೂಕಂಪನವಾಗಿದೆ. ತಿಕೋಟಾ ಪಟ್ಟಣ ಹಾಗೂ ಸುತ್ತಮುತ್ತಲ ಪ್ರದೇಶದ ಜನರಿಗೆ ಭುವಿಯೊಡಲು ನಡುಗಿದ ಅನುಭವವಾಗಿದೆ.
BIGG NEWS: ರಾಯಚೂರಿನಲ್ಲಿ ದೇವಸ್ಥಾನಕ್ಕೆ ಬಂದಿದ್ದ ಬಾಲಕಿ ಮೇಲೆ ಪೂಜಾರಿಯಿಂದಲೇ ಅತ್ಯಾಚಾರ
ನಸುಕಿನ ಜಾವ 3 ಗಂಟೆಯಿಂದ 5 ಗಂಟೆಯವರೆಗೆ ಕಂಪನ ಉಂಟಾಗಿದ್ದು, ಆತಂಕಗೊಂಡ ಜನರು ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ಕಳೆದ ಎರಡು ವರ್ಷಗಳಿಂದ ಸರಣಿ ರೂಪದಲ್ಲಿ ಜಿಲ್ಲೆಯ ವಿವಿಧೆಡೆ ಇಂಥ ಘಟನೆಗಳು ಮರುಕಳಿಸುತ್ತಿವೆ.ಇತ್ತೀಚೆಗೆ ಕಳೆದ ತಿಂಗಳ ಹಿಂದೆ ಜಿಲ್ಲೆಯಲ್ಲೆ ನಿರಂತರ ಮಳೆ ಸುರಿದಿತ್ತು. ಈ ನಡುವೆ ಅಂದು ರಾತ್ರಿ 11:42ಕ್ಕೆ ಹಾಗೂ ಗುರುವಾರ ಬೆಳಗ್ಗೆ 6:19ಕ್ಕೆ ನಗರದ ಹಲವೆಡೆ ಭೂಮಿ ಕಂಪಿಸಿದ ಅನುಭವವಾಗಿತ್ತು. ಒಂದೇ ರಾತ್ರಿಯಲ್ಲಿ ಎರಡು ಬಾರಿ ಭೂಮಿ ಕಂಪಿಸಿತ್ತು. ಇದೀಗ ಮತ್ತೆ ಭೂಮಿ ಕಂಪಿಸುತ್ತಿರುವುದು ಜನರಿಗೆ ಆತಂಕ ಶುರುಮಾಡಿದೆ.