ರಾಯಚೂರು: ಜಿಲ್ಲೆಯ ಜಾಲಹಳ್ಳಿ ವ್ಯಾಪ್ತಿಯಲ್ಲಿ ತಾಯಿ ಜೊತೆ ದೇವಸ್ಥಾನಕ್ಕೆ ಬಂದಿದ್ದ ಬಾಲಕಿ ಮೇಲೆ ಪೂಜಾರಿನೇ ಅತ್ಯಾಚಾರ ಮಾಡಿರುವ ಘಟನೆ ನಡೆದಿದೆ.
BIGG NEWS: ಮಂಗಳೂರಿನ ಭೂತಾರಾಧನೆ ಈಗ ಬೆಂಗಳೂರಿಗೆ ಸ್ಥಳಾಂತರ; ಕೊರಗಜ್ಜನ ಹೆಸರಲ್ಲಿ ಹಣ ವಸೂಲಿ
2-3 ದಿನಗಳ ಹಿಂದೆ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಬಾಗೂರ ಬಸವೇಶ್ವರ ದೇವಸ್ಥಾನದ ಪೂಜಾರಿ ಅಯ್ಯಪ್ಪ ಎಂಬಾತ ಈ ಕೃತ್ಯವನ್ನು ವೆಸಗಿದ್ದಾನೆ.
8 ವರ್ಷದ ಬಾಲಕಿ ತಾಯಿ ಜೊತೆ ದೇವಸ್ಥಾನಕ್ಕೆ ಪೂಜೆಗಾಗಿ ಬಂದಿದ್ದಳು. ವಿಶೇಷ ಪೂಜೆ ಮಾಡಿ ತಾಯಿತ ಕಟ್ಟುವುದಾಗಿ ಹೇಳಿದ್ದ ಪೂಜಾರಿ, ಅವರಿಬ್ಬರನ್ನೂ ದೇವಸ್ಥಾನದಲ್ಲಿ ಉಳಿಸಿಕೊಂಡಿದ್ದರು. ರಾತ್ರಿ ಹೊತ್ತು ಬಾಲಕಿ ಮೇಲೆ ಅತ್ಯಾಚಾರ ಮಾಡಿದ್ದಾನೆ. ಈ ಸಂಬಂಧ ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.