ಬೆಂಗಳೂರು: ಕಾಂತಾರ ಸಿನಿಮಾ ಹಿನ್ನೆಲೆ ಬೆಂಗಳೂರಿನಲ್ಲಿಯೂ ಈಗ ದೈವಕೋಲ ದೈವಸ್ಥಾನದ ವೈಭವ ಶುರುವಾಗಿದೆ.
ಕರಾವಳಿಯಲ್ಲಿ ಕೋಲಾಹಲ ಹಬ್ಬಿದೆ. ಕರಾವಳಿಯ ಭಾಗದ ದೈವಾರಾಧನೆ ಸಂಸ್ಕೃತಿ ಈಗ ಇಡಿ ದೇಶಕ್ಕೆ ಚಿರಪರಿಚಿತವಾಗಿದೆ. ಆದರೆ ಈಗ ಬೆಂಗಳೂರಿನಲ್ಲಿ ಮಾತ್ರ ಹೊಸ ದೈವದ ವಿಚಾರದಲ್ಲಿ ದೊಡ್ಡ ಸಮರ ಶುರುವಾಗಿದೆ.
BIGG NEWS : ರಾಜ್ಯ ಸರ್ಕಾರಿ ನೌಕರರೇ ಗಮನಿಸಿ : 2023ರಲ್ಲಿ ಸಿಗಲಿವೆ 19 ಸರ್ಕಾರಿ ರಜೆ ದಿನ
ಬೆಂಗಳೂರಿನ ದೊಡ್ಡಬಳ್ಳಾಪುರದಲ್ಲಿ ಈಗ ಕೊರಗಜ್ಜನ ದೈವಸ್ಥಾನ ಶುರುವಾಗಿದೆ. ಅಲ್ಲದೆ ಬೆಂಗಳೂರಿನಲ್ಲಿ ಪ್ರಪ್ರಥಮ ಬಾರಿಗೆ ಇದೇ ಭಾನುವಾರ ದೈವಕೋಲವೂ ನಡೆಯಲಿದೆ ಅಂತಾ ಆಮಂತ್ರಣ ಪತ್ರಿಕೆಯೂ ಶುರುವಾಗಿದೆ. ಇಲ್ಲಿ ಕೊರಗಜ್ಜನನ್ನು ಪ್ರತಿಷ್ಠಾಪಿಸಿದ ಕುಟುಂಬ ನಮಗೆ ಕೊರಗಜ್ಜ ಕನಸಲ್ಲಿ ಬಂದು ಇಲ್ಲಿ ನೆಲೆಯಾಗುತ್ತೇನೆ ಅಂತಾ ಹೇಳಿದ್ದು, ಕಲ್ಲು ಸಿಕ್ಕಿದೆ ಅನ್ನುತ್ತಿದ್ದಾರೆ. ಆದರೆ ಇದೆಲ್ಲವೂ ದುಡ್ಡಿನ ಬ್ಯುಸಿನೆಸ್ ಆಗಬಾರದು. ಕರಾವಳಿಯಲ್ಲಿ ದೈವಸ್ಥಾನ, ಭೂತಕೋಲ ನಡೆಯೋದು. ಅದನ್ನು ಬಿಟ್ಟು ಬೇರೆ ಕಡೆ ದುಡ್ಡಿಗಾಗಿ ದೈವ, ಕರಾವಳಿಯ ಭಕ್ತಿಯನ್ನು ಮಾರಾಟ ಮಾಡಲಾಗುತ್ತಿದೆ ಅಂತಾ ಕರಾವಳಿಯ ದೈವವನ್ನು ನಂಬುವ ಜನ ಕಿಡಿಕಾರುತ್ತಿದ್ದಾರೆ.