ಬೆಂಗಳೂರು : ವಾಹನ ಸವಾರರಿಗೆ ಬೆಂಗಳೂರು ನಗರ ಸಂಚಾರಿ ಪೊಲೀಸರು ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ಆದಷ್ಟು ಶೀಘ್ರವೇ ನಗರ ವ್ಯಾಪ್ತಿಯಲ್ಲಿ ವಾಹನ ಸವಾರರನ್ನು ಪೊಲೀಸರು ರಸ್ತೆಯಲ್ಲೇ ನಿಂತು ದಾಖಲೆಗಳಿಗೆ ಅಡ್ಡಿಪಡಿಸುವ ವಿಧಾನಕ್ಕೆ ಕೊನೆಯಾಗಲಿದೆ.
BIGG NEWS : ಶಿರಸಿ, ಕಾರವಾರದಿಂದ ‘2 ದಿನದ ಪ್ಯಾಕೇಜ್ ಟೂರ್’ : ದರ, ವೇಳಾಪಟ್ಟಿ | 2 Day Package Tour
ಹೌದು, ಸಂಚಾರ ಪೊಲೀಸರು ರಸ್ತೆಯಲ್ಲಿ ನಿಂತು ವಾಹನ ಚಾಲಕರ ತಪಾಸಣೆ, ದಾಖಲೆಗಳ ಪರಿಶೀಲನೆ ಮಾಡುತ್ತಿದ್ದಾರೆ. ಇಲ್ಲಿ ನಾಲ್ಕೈದು ಸಂಚಾರಿ ಪೊಲೀಸರು ರಸ್ತೆ ಬದಿ ನಿಲ್ಲಬೇಕಿದೆ. ಅಲ್ಲದೇ ಇದರಿಂದ ಸವಾರರು ಸಹ ಕಿರಿಕಿರಿ ಅನುಭವಿಸುತ್ತಾರೆ. ಇದನ್ನು ತಪ್ಪಿಸಲು ಬೆಂಗಳೂರು ನಗರ ಸಂಚಾರಿ ಪೊಲೀಸರು ನೂತನ ಚಿಂತನೆ ನಡೆಸಿದ್ದಾರೆ.
BIGG NEWS : ಶಿರಸಿ, ಕಾರವಾರದಿಂದ ‘2 ದಿನದ ಪ್ಯಾಕೇಜ್ ಟೂರ್’ : ದರ, ವೇಳಾಪಟ್ಟಿ | 2 Day Package Tour
ನಗರಾದ್ಯಂತ ದಿನದ 24X7 ಕಣ್ಗಾವಲು ಕ್ಯಾಮೆರಾಗಳ ಜಾಲದ ಮೂಲಕ ಸಂಚಾರ ನಿಯಮ ಉಲ್ಲಂಘನೆ, ವಾಹನ ಚಾಲಕರನ್ನು ಟ್ರ್ಯಾಕ್ ಮಾಡುವ ವ್ಯವಸ್ಥೆ ತರಲಾಗುವುದು. ಒಂದು ವೇಳೆ ನಿಯಮ ಉಲ್ಲಂಘಿಸುವುದು ಗೊತ್ತಾದರೆ ಕ್ಯಾಮರಾಗಳ ಸಹಾಯದಿಂದ ಸವಾರರ ಮನೆಗೆ ದಂಡದ ನೋಟಿಸ್ ಕಳುಹಿಸಲಾಗುವುದು ಎಂದು ನೂತನ ವಿಶೇಷ ಆಯುಕ್ತ (ಸಂಚಾರ) ಎಂ.ಎ.ಸಲೀಂ ಅವರು ಮಾಹಿತಿ ನೀಡಿದ್ದಾರೆ.
BIGG NEWS : ಶಿರಸಿ, ಕಾರವಾರದಿಂದ ‘2 ದಿನದ ಪ್ಯಾಕೇಜ್ ಟೂರ್’ : ದರ, ವೇಳಾಪಟ್ಟಿ | 2 Day Package Tour