ಚಿಕ್ಕೋಡಿ: ಸಾಮಾನ್ಯವಾಗಿ ದೇವಸ್ಥಾನ ಹಾಗೂ ಮನೆ ಗೃಹಪ್ರವೇಶ ಸಮಯದಲ್ಲಿ ಹೋಮ ಹವನ ಮಾಡುವುದನ್ನು ನೋಡಿದ್ದೇವೆ. ಆದರೆ ಕಳೆದ 15 ವರ್ಷಗಳಿಂದ ರಸ್ತೆ ನಿರ್ಮಾಣವಾಗದ ಹಿನ್ನೆಲೆಯಲ್ಲಿ ಆದಷ್ಟು ಬೇಗನೇ ರಸ್ತೆ ಅಭಿವೃದ್ಧಿಯಾಗಬೇಕು ಎಂದು ರಸ್ತೆ ಮಧ್ಯದಲ್ಲೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸುಟ್ಟಟ್ಟಿ ಗ್ರಾಮಸ್ಥರು ಹೋಮ ನಡೆಸಿದ್ದಾರೆ.
BREAKING NEWS: ಶೂಟಿಂಗ್ ವೇಳೆ ನಟ ಉಪೇಂದ್ರ ಅಸ್ವಸ್ಥ, ಆಸ್ಪತ್ರೆಗೆ ದಾಖಲು | Actor Upendra
ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಅವರಿಗೆ ಹಾಗೂ ಸರ್ಕಾರಕ್ಕೆ ಒಳ್ಳೆಯ ಬುದ್ಧಿ ನೀಡಪ್ಪ ದೇವರೇ ಎಂದು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸುಟ್ಟಟ್ಟಿ ಗ್ರಾಮದಲ್ಲಿ ವಿನೂತನ ಪ್ರತಿಭಟನೆ ನಡೆಸಲಾಗಿದೆ. ಸುಟ್ಟಟ್ಟಿ ಗ್ರಾಮದಿಂದ ಯಲ್ಲಮ್ಮವಾಡಿ ಗ್ರಾಮದವರೆಗೆ ಸರಿಸುಮಾರು 6 ಕಿ.ಮೀ ರಸ್ತೆ ಕಳೆದ 15 ವರ್ಷದಿಂದ ಸಂಪೂರ್ಣವಾಗಿ ಹದಿಗೆಟ್ಟ ಪರಿಣಾಮವಾಗಿ, ವಾಹನ ಸವಾರರು ಗರ್ಭಿಣಿಯರು, ರೋಗಿಗಳು, ಶಾಲೆ ಮಕ್ಕಳು ಪ್ರತಿಕ್ಷಣವೂ ಸಂಕಷ್ಟ ಪಡುವಂತಾಗಿತ್ತು.