ಮಂಗಳೂರು: ಕುಕ್ಕರ್ ಬಾಂಬರ್ ಶಾರೀಕ್ನಗುರಿ ಕದ್ರಿ ದೇವಸ್ಥಾನ ಆಗಿತ್ತು ಎಂದು ಉಗ್ರ ಸಂಘಟನೆ ಹೇಳಿದ್ದರೂ ಆತ ಮೊಬೈಲ್ನಲ್ಲಿ ಮಂಗಳೂರಿನ ಹಲವು ಪ್ರದೇಶಗಳನ್ನು ಸರ್ಚ್ ಮಾಡಿದ್ದ ವಿಚಾರ ಈಗ ಬೆಳಕಿಗೆ ಬಂದಿದೆ.
ಶಾಸಕ M.P ಕುಮಾರಸ್ವಾಮಿ ಮೇಲೆ ಹಲ್ಲೆ ಆರೋಪ : ಟ್ವೀಟ್ ನಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್ ಕಿಡಿ
ಹೌದು. ಶಾರೀಕ್ ಮೊಬೈಲ್ನಲ್ಲಿ ಯಾವ ಸ್ಥಳಗಳನ್ನು ಸರ್ಚ್ ಮಾಡಿದ್ದ ಎನ್ನುವುದು ಗೊತ್ತಾಗಿದೆ. ಸರ್ಕಾರಕ್ಕೆ ನೀಡಿದ ಪ್ರಾಥಮಿಕ ವರದಿಯಲ್ಲಿ ತನಿಖಾ ತಂಡ ಮೂರು ದೇವಸ್ಥಾನ ಮತ್ತು ಎರಡು ಸಾರ್ವಜನಿಕ ಸ್ಥಳದಲ್ಲಿ ಬಾಂಬ್ ಇಡಲು ಪ್ಲಾನ್ ಮಾಡಿದ್ದ ಎಂಬುದನ್ನು ಉಲ್ಲೇಖಿಸಿದೆ.
ಶಾಸಕ M.P ಕುಮಾರಸ್ವಾಮಿ ಮೇಲೆ ಹಲ್ಲೆ ಆರೋಪ : ಟ್ವೀಟ್ ನಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್ ಕಿಡಿ
ಎರಡು ಶಿವ ದೇವಸ್ಥಾನ, ಒಂದು ದೇವಿ ದೇವಸ್ಥಾನ, ಎರಡು ಸಾರ್ವಜನಿಕ ಸ್ಥಳ, ಒಂದು ಕಾರ್ಯಕ್ರಮ ಆತನ ಟಾರ್ಗೆಟ್ ಆಗಿತ್ತು ಎಂದು ಪೊಲೀಸ್ ಉನ್ನತ ಮೂಲಗಳು ಮಾಹಿತಿ ನೀಡಿವೆ.
ಟಾರ್ಗೆಟ್ ಆಗಿದ್ದ ಸ್ಥಳಗಳು ಯಾವುದು?
ಕದ್ರಿ ಶ್ರೀ ಮಂಜುನಾಥಸ್ವಾಮಿ ದೇವಸ್ಥಾನ ಮತ್ತು ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ(Kudroli Gokarnanatheshwara Temple) ಲಕ್ಷದೀಪೋತ್ಸವ ನಡೆಯಿತ್ತಿದೆ. ಕಾರ್ತಿಕ ಮಾಸದಲ್ಲಿ ನಡೆಯುವ ದೀಪೋತ್ಸವ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡುತ್ತಿರುತ್ತಾರೆ. ಈ ಸಂದರ್ಭದಲ್ಲೇ ಸ್ಪೋಟ ಮಾಡುವ ಬಗ್ಗೆ ಸಂಚು ರೂಪಿಸಿದ್ದನೇ ಎಂಬ ಪ್ರಶ್ನೆ ಎದ್ದಿದೆ.
ತನ್ನ ವಾಟ್ಸಪ್ ಡಿಪಿಯಲ್ಲಿ ಕೊಯಮತ್ತೂರಿನ ಆದಿಯೋಗಿ ಶಿವನ ಪ್ರತಿಮೆಯ(Adiyogi Shiva Statue) ಫೋಟೋವನ್ನು ಹಾಕಿದ್ದ. ಶಿವನ ಡಿಪಿಯ ಅಸಲಿಯತ್ತನ್ನು ಡೀಕೋಡ್ ಮಾಡುವಾಗಿ ಪೊಲೀಸರಿಗೆ ಅನುಮಾನ ಬಂದಿದ್ದು ಶಿವ ದೇವಾಲಯಲ್ಲಿ ಕೃತ್ಯ ನಡೆಸಲು ಪ್ಲಾನ್ ಮಾಡಿದ್ದನೇ ಎಂಬ ಶಂಕೆ ವ್ಯಕ್ತವಾಗಿದೆ.
ಶಾಸಕ M.P ಕುಮಾರಸ್ವಾಮಿ ಮೇಲೆ ಹಲ್ಲೆ ಆರೋಪ : ಟ್ವೀಟ್ ನಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್ ಕಿಡಿ
ಮಂಗಳದೇವಿ ದೇವಸ್ಥಾನಕ್ಕೂ(Mangaladevi Temple) ಸ್ಕೆಚ್ ಹಾಕಿರೋ ಬಗ್ಗೆ ಶಂಕೆ ವ್ಯಕ್ತವಾಗಿದ್ದು ಈ ನಿಟ್ಟಿನಲ್ಲೂ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಮಂಗಳೂರಿನ ಪಡೀಲು ಬಳಿ ಇರುವ ರೈಲ್ವೇ ನಿಲ್ದಾಣ(Railway Station) ಮತ್ತು ಬಿಜೈನಲ್ಲಿರುವ ಕೆಎಸ್ಆರ್ಟಿಸಿ(KSRTC) ಬಸ್ ನಿಲ್ದಾಣವನ್ನು ಆತ ಸರ್ಚ್ ಮಾಡಿದ್ದಾನೆ. ಸಾಕಷ್ಟು ಜನರು ಇಲ್ಲಿದ ಪ್ರಯಾಣ ನಡೆಸುವ ಹಿನ್ನೆಲೆಯಲ್ಲಿ ಇಲ್ಲೂ ಕೃತ್ಯ ನಡೆಸಲು ಪ್ರಯತ್ನಿಸಿದ್ದನೇ ಎಂಬ ಅನುಮಾನ ಎದ್ದಿದೆ.
ಆರ್ಎಸ್ಎಸ್(RSS) ಪ್ರಮುಖ ಕಚೇರಿ ʼಸಂಘನಿಕೇತನʼ ಇರುವ ಮಣ್ಣಗುಡ್ಡವನ್ನು ಶಾರೀಕ್ ಸರ್ಚ್ ಮಾಡಿದ್ದಾನೆ. ಸ್ಫೋಟಗೊಂಡ ದಿನವಾದ ನ.19 ರಂದು ಸಂಘನಿಕೇತನದಲ್ಲಿ(Sanghaniketan) ಬೃಹತ್ ವಿದ್ಯಾರ್ಥಿ ಸಮಾವೇಶ ನಡೆಯುತ್ತಿತ್ತು. ಸಾವಿರಾರು ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಶಾಸಕ M.P ಕುಮಾರಸ್ವಾಮಿ ಮೇಲೆ ಹಲ್ಲೆ ಆರೋಪ : ಟ್ವೀಟ್ ನಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್ ಕಿಡಿ
ಕೇಶವ ಸ್ಮೃತಿ ಸಂವರ್ಧನ ಸಮಿತಿಯು ಕನ್ನಡ ಮಾಧ್ಯಮದಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳ ಆತ್ಮವಿಶ್ವಾಸ ವೃದ್ಧಿ ಹಾಗೂ ವಿದ್ಯಾರ್ಥಿ ಸಮುದಾಯದಲ್ಲಿ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿ ಕುರಿತ ಅರಿವನ್ನು ವಿಸ್ತರಿಸುವ ಉದ್ದೇಶದಿಂದ ನ.19 ಮತ್ತು 20ರಂದು ಸಂಘನಿಕೇತನದಲ್ಲಿ ಬೃಹತ್ ವಿದ್ಯಾರ್ಥಿ ಸಮಾವೇಶ ಆಯೋಜಿಸಿತ್ತು. ಶಾರೀಕ್ ಮೊಬೈಲ್ನಲ್ಲಿ ಮಣ್ಣಗುಡ್ಡವನ್ನು ಸರ್ಚ್ ಮಾಡಿದ ಹಿನ್ನೆಲೆಯಲ್ಲಿ ಇಲ್ಲೂ ಕೃತ್ಯ ನಡೆಸಲು ಮುಂದಾಗಿದ್ನಾ ಎಂಬ ನಿಟ್ಟಿನಲ್ಲಿ ತನಿಖೆ ನಡೆಯುತ್ತಿದೆ.
ಶಿವ ದೇವಸ್ಥಾನದಲ್ಲಿ ದೀಪೋತ್ಸವ:
ಹಿಂದೂ ಪಂಚಾಂಗದಲ್ಲಿ ಚಳಿಗಾಲದಲ್ಲಿ ಆರಂಭವಾಗುವ ಕಾರ್ತಿಕ ಮಾಸ ಅತ್ಯಂತ ಪವಿತ್ರ ಮತ್ತು ಶ್ರೇಷ್ಠ ಮಾಸ ಎಂದು ಕರೆಯಲಾಗುತ್ತದೆ. ಈ ಸಂದರ್ಭದಲ್ಲಿ ದೀಪಾರಾಧನೆ ಮಾಡಿದರೆ ಐಶ್ವರ್ಯ, ಸಂಪತ್ತು, ಆರೋಗ್ಯ ಭಾಗ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ. ಕಾರ್ತಿಕ ನಕ್ಷತ್ರ ನವೆಂಬರ್/ಡಿಸೆಂಬರ್ ತಿಂಗಳಿನಲ್ಲಿ ಚಂದ್ರನಿಗೆ ಅತ್ಯಂತ ಹತ್ತಿರದಲ್ಲಿ ಇರುತ್ತದೆ. ಈ ಕಾರಣಕ್ಕೆ ಹಿಂದೂ ಪಂಚಾಂಗದ ಎಂಟನೇ ತಿಂಗಳಿಗೆ ಕಾರ್ತಿಕ ಮಾಸ ಎಂದು ಕರೆಯಲಾಗುತ್ತದೆ. ಪ್ರತಿ ಮಾಸಕ್ಕೆ ಒಬೊಬ್ಬ ದೇವರು ಇರುವಂತೆ ಕಾರ್ತಿಕ ಮಾಸದ ಅಧಿಪತಿ ಶಿವ. ಪರಿಣಾಮವಾಗಿ ಹುಣ್ಣಿಮೆಯ ಚಂದ್ರನು ಪ್ರಕಾಶಮಾನವಾಗಿ ಕಾಣುತ್ತಾನೆ. ಈ ಕಾರಣಕ್ಕೆ ಶಿವ ದೇವಾಲಯಗಳಲ್ಲಿ ಕಾರ್ತಿಕ ದೀಪೋತ್ಸವ ಅತ್ಯಂತ ವಿಜೃಂಭಣೆಯಿಂದ ನಡೆಯುತ್ತದೆ. ಹೆಚ್ಚಿನ ಸಂಖ್ಯೆಯ ಭಕ್ತರು ದೇವಸ್ಥಾನಕ್ಕೆ ಆಗಮಿಸುತ್ತಾರೆ.
ಶಾಸಕ M.P ಕುಮಾರಸ್ವಾಮಿ ಮೇಲೆ ಹಲ್ಲೆ ಆರೋಪ : ಟ್ವೀಟ್ ನಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್ ಕಿಡಿ