ಮಂಗಳೂರು : ಮಂಗಳೂರಿನಲ್ಲಿ ಸ್ಪೋಟ ಬೆನ್ನಲ್ಲೇ ಕರಾವಳಿ ಜಿಲ್ಲೆಯಲ್ಲಿ ಆತಂಕ ಮನೆ ಮಾಡಿದೆ. ಕರಾವಳಿಯ ಮೂರು ದೇವಾಲಯಗಳನ್ನು ಸ್ಪೋಟಿಸಲು ಉಗ್ರರು ಸಂಚು ರೂಪಿಸಿದ್ದರು ಎಂಬ ಸ್ಪೋಟಕ ಮಾಹಿತಿ ಪೊಲೀಸರಿಗೆ ಲಭ್ಯವಾಗಿದ್ದು, ಆತಂಕ ಮನೆ ಮಾಡಿದೆ.
ಈ ಹಿನ್ನೆಲೆ ಮಂಗಳೂರಿನಲ್ಲಿ ಪೊಲೀಸರು ಹೈ ಅಲರ್ಟ್ ಆಗಿದ್ದು, ಕುದ್ರೋಳಿಯ ಗೋಕರ್ಣನಾಥ ದೇವಾಲಯದಲ್ಲಿ ಪೊಲೀಸರು ಹಾಗೂ ಬಾಂಬ್ ನಿಷ್ಕ್ರಿಯ ದಳದ ಅಧಿಕಾರಿಗಳು ತಪಾಸಣೆ ಮಾಡುತ್ತಿದ್ದಾರೆ. ಅಲ್ಲದೇ ಮಂಗಳೂರಿನ ಎಲ್ಲಾ ದೇವಾಲಯಗಳಲ್ಲಿ ಕೂಡ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಈ ಹಿನ್ನೆಲೆ ದೇವಾಲಯಕ್ಕೆ ಬರುವ ಜನರ ಮೇಲೆ ಪೊಲೀಸರು ಕಣ್ಣಿಟ್ಟಿದ್ದಾರೆ.
ಮಂಗಳೂರು ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಪೊಲೀಸರಿಗೆ ದಿನದಿಂದ ದಿನಕ್ಕೆ ಸ್ಪೋಟಕ ಮಾಹಿತಿ ಸಿಗುತ್ತಿದೆ. ಇದೀಗ ಇಡೀ ರಾಜ್ಯವೇ ಬೆಚ್ಚಿ ಬೀಳಿಸುವ ಸುದ್ದಿ ಬಯಲಾಗಿದ್ದು. ‘ಹಿಂದೂ’ ದೇವಾಲಯಗಳ ಸ್ಪೋಟಕ್ಕೆ ಉಗ್ರರು ಸ್ಕೆಚ್ ಹಾಕಿದ್ದರು ಎಂಬುದು ಬಯಲಾಗಿದೆ.. ಮಂಗಳೂರಿನ ಕುದ್ರೋಳಿ ಗೋಕರ್ಣನಾಥೇಶ್ವರ ದೇವಾಲಯ , ಮಂಗಳಾದೇವಿ ದೇವಾಲಯ, ಮಂಜುನಾಥ ಸ್ವಾಮಿ ದೇವಾಲಯಕ್ಕೂ ಉಗ್ರರು ಸ್ಕೆಚ್ ಹಾಕಿದ್ದರು ಎಂಬ ಮಾಹಿತಿ ಬಯಲಾಗಿದೆ.
ಶಾರೀಖ್ ಮೊಬೈಲ್ ತನಿಖೆ ನಡೆಸಿದ ಪೊಲೀಸರಿಗೆ ಈ ವಿಚಾರ ಗೊತ್ತಾಗಿದೆ. ಅದೇ ರೀತಿ ಮಂಗಳೂರು ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣವನ್ನು ಕೂಡ ಸ್ಪೋಟಿಸುವ ಸ್ಕೆಚ್ ಹಾಕಲಾಗಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ದೇಗುಲ ಮಾತ್ರವಲ್ಲದೇ ಸಾರ್ವಜನಿಕ ಸ್ಥಳಗಳನ್ನು ಕೂಡ ಸ್ಪೋಟಿಸುವ ಸ್ಕೆಚ್ ಹಾಕಲಾಗಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ಶಿವನ ಡಿಪಿ ಬೆನ್ನತ್ತಿದ ಪೊಲೀಸರಿಗೆ ಸ್ಪೋಟಕ ಮಾಹಿತಿ ಲಭ್ಯವಾಗಿದೆ. ಕರಾವಳಿ ಭಾಗದ ಮೂರು ದೇವಾಲಯಗಳನ್ನು ಸ್ಪೋಟಿಸುವ ಸ್ಕೆಚ್ ಹಾಕಲಾಗಿತ್ತು ಎಂಬ ಸ್ಪೋಟಕ ಮಾಹಿತಿ ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ.
ಮಂಗಳೂರು ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಸ್ಲಾಮಿಕ್ ರೆಸಿಸ್ಟೆನ್ಸ್ ಕೌನ್ಸಿಲ್ ಶಾರೀಕ್ ಬೆನ್ನಿಗೆ ನಿಂತಿದ್ದು, ಇನ್ನೊಂದು ದಾಳಿ ಮಾಡುವ ಬೆದರಿಕೆ ಒಡ್ಡಿದೆ.ಶಂಕಿ ಉಗ್ರ ಶಾರೀಕ್ ಬೆಂಬಲಿಸಿ ಇಸ್ಲಾಮಿಕ್ ರೆಸಿಸ್ಟೆನ್ಸ್ ಕೌನ್ಸಿಲ್ (Islamic Resistence Concil – IRC) ಹೇಳಿಕೆ ಬಿಡುಗಡೆ ಮಾಡಿದೆ.ಶಂಕಿತ ಉಗ್ರ ಶಾರೀಕ್ ನಮ್ಮ ಸಹೋದರ. ಮಂಗಳೂರಿನ ಕದ್ರಿ ದೇವಾಲಯದ ಮೇಲೆ ದಾಳಿಗೆ ಯತ್ನಿಸಲಾಗಿತ್ತು. ಮಂಗಳೂರು ಕೇಸರಿ ಭಯೋತ್ಪಾದಕರ ಭದ್ರಕೋಟೆಯಾಗಿದೆ. ಈ ಕಾರ್ಯಾಚರಣೆಯ ನಮ್ಮ ಉದ್ದೇಶ ಈಡೇರದಿದ್ದರೂ ರಾಜ್ಯ, ಕೇಂದ್ರ ಗುಪ್ತಚರ ಸಂಸ್ಥೆಗಳ ಕಣ್ತಪ್ಪಿಸಿ ದಾಳಿಗೆ ಸಿದ್ಧತೆ ಮಾಡಿಕೊಳ್ಳುತ್ತೇವೆ’ ಎಂದು ಉಗ್ರರು ಎಚ್ಚರಿಕೆ ನೀಡಿದ್ದಾರೆ.
ನಿಮ್ಮ ಸಂತೋಷ ಅಲ್ಪಕಾಲಿಕ, ರಾಜ್ಯದಲ್ಲಿ ಹತ್ಯೆ, ದಬ್ಬಾಳಿಕೆಯ ಕಾನೂನು ನಡೆಯುತ್ತಿದೆ ಎಂದು ಡಾರ್ಕ್ ವೆಬ್ ಮೂಲಕ ಉಗ್ರರು ಎಚ್ಚರಿಕೆ ಸಂದೇಶ ನೀಡಿದ್ದಾರೆ. ಸ್ಪೋಟದ ಹೊಣೆಯನ್ನು ಇಸ್ಲಾಮಿಕ್ ರೆಸಿಸ್ಟೆನ್ಸ್ ಹೊತ್ತಿಕೊಂಡಿದ್ದು, ಉಗ್ರ ಶಾರೀಖ್ ದುಷ್ಕ್ರೃತ್ಯವನ್ನು ಸಮರ್ಥಿಸಿಕೊಂಡಿದೆ.
BIGG NEWS : ‘ ವರಾಹ ರೂಪಂ’ ಸಂಗೀತ ನಿರ್ದೇಶಕ ‘ ಅಜನೀಶ್ ಲೋಕನಾಥ್ ‘ ಕಿಡ್ನ್ಯಾಪ್ : ಫೋಟೋ ವೈರಲ್ | Ajanish Loknath
BIGG NEWS : ರಾಜ್ಯದ ಶಾಲೆಗಳಲ್ಲಿ ‘ಮೊಬೈಲ್ ಲೆಸ್ ಡೇ’ ನಿಯಮ ಜಾರಿಗೆ ಶಿಕ್ಷಣ ಇಲಾಖೆ ಚಿಂತನೆ