ಬಿಜೀಂಗ್: ಚೀನಾದಲ್ಲಿ ಮತ್ತೆ ಕೋವಿಡ್ ಅಬ್ಬರ ಶುರುವಾಗಿದ್ದು ಪ್ರಕರಣಗಳ ಸಂಖ್ಯೆ ಏರಿಕೆ ಕಂಡಿದೆ. ದೇಶದಲ್ಲಿ ಸೋಂಕು ಹರಡುವುದನ್ನು ತಡೆಯಲು ಲಾಕ್ಡೌನ್, ಸಾಮೂಹಿಕ ಪರೀಕ್ಷೆ ಮತ್ತು ಪ್ರವಾಸ ನಿರ್ಬಂಧ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗುತ್ತಿದೆ.
BIGG NEWS: ದೇವನಹಳ್ಳಿಯಲ್ಲಿ ಪೊಲೀಸ್ ಠಾಣೆ ಮೇಲೆ ಲೋಕಾಯುಕ್ತ ದಾಳಿ; ಕಾನ್ಸ್ ಟೇಬಲ್ ವಶಕ್ಕೆ
ಬುಧವಾರ 31,454 ಹೊಸ ಸೋಂಕು ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 22,517 ಲಕ್ಷಣರಹಿತ ಸೋಂಕಿತರಿದ್ದಾರೆ ಎಂದು ನ್ಯಾಷನಲ್ ಹೆಲ್ತ್ ಬ್ಯೂರೋ ತಿಳಿಸಿದೆ. ಚೀನಾದ 1.4 ಬಿಲಿಯನ್ ಜನಸಂಖ್ಯೆಗೆ ಹೋಲಿಕೆ ಮಾಡಿ ನೋಡಿದಾಗ ಈ ಪ್ರಕರಣಗಳ ಸಂಖ್ಯೆ ಗಣನೀಯವಾಗಿದೆ. ಬೀಜಿಂಗ್ನಲ್ಲಿ ಶೂನ್ಯ ಕೋವಿಡ್ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದ್ದು, ಒಂದು ಪ್ರಕರಣ ಕಂಡು ಬಂದರೂ ಇಡೀ ನಗರವನ್ನು ಮುಚ್ಚಲಾಗುತ್ತಿದೆ. ಜೊತೆಗೆ ಸೋಂಕಿತರು ಪತ್ತೆಯಾದ ಪ್ರದೇಶವನ್ನು ಸಂಪೂರ್ಣವಾಗಿ ಸೀಜ್ ಮಾಡಿ ಜನರನ್ನು ಕ್ವಾರಂಟೈನ್ಗೆ ಒಳಪಡಿಸಲಾಗುತ್ತಿದೆ.