ಹೈದರಾಬಾದ್ : ಭಾರತ್ ರಾಷ್ಟ್ರ ಸಮಿತಿಯ (ಬಿಆರ್ಎಸ್) ಶಾಸಕರ ಖರೀದಿ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್ಐಟಿ) ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ಅವರಿಗೆ ಮತ್ತೆ ನೋಟಿಸ್ ಜಾರಿಯಾಗಿದೆ. ತೆಲಂಗಾಣ ಹೈಕೋರ್ಟ್ ಎಸ್ ಐಟಿಗೆ ನಿರ್ದೇಶನ ನೀಡಿದೆ.
ಮೈಸೂರಿನಲ್ಲಿ ಸಾವಿನಲ್ಲೂ ಒಂದಾದ ದಂಪತಿ; ಇಬ್ಬರನ್ನೂ ಅಕ್ಕಪಕ್ಕದಲ್ಲೇ ಅಂತ್ಯಕ್ರಿಯೆ
ನವೆಂಬರ್ 21 ರಂದು ವಿಚಾರಣೆಗೆ ಹಾಜರಾಗುವಂತೆ ಎಸ್ಐಟಿಯಿಂದ ಸಂತೋಷ್ ಅವರಿಗೆ ನೋಟಿಸ್ ನೀಡಿತ್ತು. ಆದರೆ ವಿಚಾರಣೆಗೆ ಅವರು ಹಾಜರಾಗಿರಲಿಲ್ಲ.ಪೂರ್ವ ನಿರ್ಧರಿತ ಪ್ರವಾಸ ಕಾರ್ಯಕ್ರಮಗಳಿಂದಾಗಿ ವಿಚಾರಣೆಗೆ ಹಾಜರಾಗಲು ಕಾಲಾವಕಾಶ ನೀಡುವಂತೆ ಸಂತೋಷ್ ಕೋರಿದ್ದಾರೆ ಎಂದು ತೆಲಂಗಾಣದ ಅಡ್ವೋಕೇಟ್ ಜನರಲ್ ಬಿ.ಎಸ್ ಪ್ರಸಾದ್ ಹೈಕೊರ್ಟ್ ಗೆ ತಿಳಿಸಿದೆ.
ಇದೀಗ ವಾದ ಆಲಿಸಿದ ನ್ಯಾಯಮೂರ್ತಿಗಳು ನವೆಂಬರ್ 29ಕ್ಕೆ ವಿಚಾರಣೆ ಮುಂದೂಡಿದ್ದಾರೆ.