ಮೈಸೂರು : ವಿಶ್ವವಿಖ್ಯಾತ KRS ಬೃಂದಾವನದಲ್ಲಿ ಚಿರತೆ ಪ್ರತ್ಯಕ್ಷವಾದ ಹಿನ್ನೆಲೆ ಜನರಲ್ಲಿ ಆತಂಕ ಮನೆ ಮಾಡಿದೆ.ಇದರಿಂದ ಮುನ್ನೆಚ್ಚರಿಕೆ ಹಿನ್ನೆಲೆ ಬೃಂದಾವನಕ್ಕೆ ಪ್ರವಾಸಿಗರ ನಿಷೇಧವನ್ನು ಮುಂದುವರೆಸಿದೆ.
ಪ್ರವಾಸಿಗರ ನಿಷೇಧ ಹಿನ್ನೆಲೆ ಕಾವೇರಿ ನೀರಾವರಿ ನಿಗಮಕ್ಕೆ ₹50 ಲಕ್ಷಕ್ಕೂ ಹೆಚ್ಚು ನಷ್ಟ ಉಂಟಾಗಿದೆ ಎನ್ನಲಾಗಿದೆ. ಬೃಂದಾವನ ಬಂದ್ ಮಾಡಿ 15 ದಿನಗಳು ಕಳೆದಿದ್ದು, ಇದರಿಂದ ನಿಗಮಕ್ಕೆ ಭಾರೀ ನಷ್ಟ ಆಗಿದೆ ಎನ್ನಲಾಗಿದೆ. ಇನ್ನೂ, ಬೃಂದಾವನಕ್ಕೆ ವಾರದ ದಿನಗಳಲ್ಲಿ 3 ಸಾವಿರಕ್ಕೂ ಹೆಚ್ಚು ಮಂದಿ ಭೇಟಿ ನೀಡುತ್ತಾರೆ. ಇನ್ನು ವೀಕೆಂಡ್ ಹಾಗು ರಜೆ ದಿನಗಳಲ್ಲಿ ಸಾವಿರಾರು ಜನರು ಭೇಟಿ ನೀಡುತ್ತಾರೆ. ಆದ್ರೆ ಬೃಂದಾವನ ಬಂದ್ ಮಾಡಿರುವುದರಿಂದ ಪ್ರವಾಸಿಗರಿಲ್ಲದೆ ಕೆ ಎರ್ ಎಸ್ ಬಿಕೋ ಎನ್ನುತ್ತಿದ್ದು, ಕಾವೇರಿ ನೀರಾವರಿ ನಿಗಮಕ್ಕೆ ₹50 ಲಕ್ಷಕ್ಕೂ ಹೆಚ್ಚು ನಷ್ಟವಾಗಿದೆ ಎನ್ನಲಾಗಿದೆ. ಅರ್ಧ ತಿಂಗಳು ಕಳೆದರೂ ಇನ್ನೂ ಕೂಡ ಚಿರತೆ ಹಿಡಿದಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಕೆಆರ್ ಎಸ್ ನಲ್ಲಿ ಚಿರತೆ ಬಂದಿರುವುದು ಗೊತ್ತಾಗಿದ್ದು, ಪ್ರವಾಸಿಗರಿಗೆ ಆತಂಕ ಶುರುವಾಗಿದೆ. ಸತತವಾಗಿ ಮೂರನೇ ಬಾರಿಗೆ ಬೃಂದಾವನದಲ್ಲಿ ಚಿರತೆ ಕಾಣಿಸಿಕೊಂಡಿದೆ. ಬೃಂದಾವನದಲ್ಲಿ ಚಿರತೆ ಸೆರೆಗೆ ಬೋನ್ ಇಟ್ಟಿದ್ದರು. ಆದರೆ ಇದುವರೆಗೂ ಚಿರತೆ ಸೆರೆಯಾಗಿಲ್ಲ.. ಅಕ್ಟೋಬರ್ 28ರಂದು ಪ್ರತ್ಯಕ್ಷವಾಗಿದ್ದ ಚಿರತೆ ಇದುವರೆಗೂ ಎಲ್ಲಿಯೂ ಸಹ ಕಾಣಿಸಿಕೊಂಡಿಲ್ಲ. . ಅರ್ಧ ತಿಂಗಳು ಕಳೆದರೂ ಇನ್ನೂ ಕೂಡ ಚಿರತೆ ಹಿಡಿದಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾಂದರ್ಭಿಕ ಚಿತ್ರ
BIG NEWS: ಕೋವಿಡ್ ಸಾಂಕ್ರಾಮಿಕದ ಬೆನ್ನಲ್ಲೇ, ʻದಡಾರʼ ಅಪಾಯ ಹೆಚ್ಚಳ ಸಾಧ್ಯತೆ: WHOನಿಂದ ಎಚ್ಚರಿಕೆ