ಪುಣೆ (ಮಹಾರಾಷ್ಟ್ರ): ಬಾಲಿವುಡ್ ಹಿರಿಯ ನಟ ವಿಕ್ರಮ್ ಗೋಖಲೆ(Vikram Gokhale) ಅವರ ಆರೋಗ್ಯ ಸ್ಥಿತಿ ಇನ್ನೂ ಗಂಭೀರವಾಗಿದೆ. ಅವರಿಗೆ ಚಿಕಿತ್ಸೆ ಮುಂದುವರೆದಿದೆ ಎಂದು ವಿಕ್ರಮ್ ಮಗಳು ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಮಹಿತಿ ನೀಡಿರುವ ದೀನಂತ್ ಮಂಗೇಶ್ಕರ್ ಆಸ್ಪತ್ರೆಯ ಡಾ ಧನಂಜಯ್ ಕೇಲ್ಕರ್, ವಿಕ್ರಮ್ ಗೋಖಲೆ ಅವರ ನಿಧನದ ವದಂತಿಗಳನ್ನು ನಿರಾಕರಿಸಿದ್ದು, ವಿಕ್ರಮ್ ಸ್ಥಿತಿ ಗಂಭೀರವಾಗಿದೆ ಎಂದಿದ್ದಾರೆ.
ಮಾಧ್ಯಮಗಳಿಗೆ ವಿಕ್ರಮ್ ಅವರ ಪುತ್ರಿ ʻಅವರು ಇನ್ನೂ ಕ್ರಿಟಿಕಲ್ ಮತ್ತು ಲೈಫ್ ಸಪೋರ್ಟ್ನಲ್ಲಿದ್ದಾರೆ. ಅವರು ಇನ್ನೂ ಸಾವನ್ನಪ್ಪಿಲ್ಲ. ವಿಕ್ರಮ್ ಸಾವನ್ನಪ್ಪಿದ್ದಾರೆ ಎಂಬುದು ಸುಳ್ಳು ಸುದ್ದಿ. ಅವರು ಚೇತರಿಸಿಕೊಳ್ಳಲೆಂದು ಅವರಿಗಾಗಿ ನಾನು ಪ್ರಾರ್ಥಿಸುತ್ತಿದ್ದೇನೆʼ ಎಂದು ಹೇಳಿದ್ದಾರೆ.
ವಿಕ್ರಮ್ ಗೋಖಲೆ ಅವರು ‘ಖುದಾ ಗವಾಹ್’, ‘ಹಮ್ ದಿಲ್ ದೇ ಚುಕೆ ಸನಮ್’, ‘ಭೂಲ್ ಭುಲೈಯಾ’, ‘ಮಿಷನ್ ಮಂಗಲ್’, ‘ದಿಲ್ ಸೇ’, ‘ದೇ ದಾನಾ ದಾನ್, ಹಿಚ್ಕಿ’ ಮುಂತಾದ ಹಲವು ಹಿಂದಿ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. 2013 ರಲ್ಲಿ, ಅವರು ಮರಾಠಿ ಚಿತ್ರ ‘ಅನುಮತಿ’ಗಾಗಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದಿದ್ದಾರೆ.
BIGG NEWS : ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ: ಹೊಸ ವರ್ಷದಿಂದ ಎಲ್ಲಾ ಆಸ್ಪತ್ರೆಗಳಲ್ಲಿ ‘ಕ್ಯಾಶ್ ಲೆಸ್’ ಚಿಕಿತ್ಸೆ
ಕರಾವಳಿಯಲ್ಲಿ ‘ಧರ್ಮ ದಂಗಲ್’ : ಕುಕ್ಕೆ ಷಷ್ಠಿ ಮಹೋತ್ಸವದಲ್ಲಿ ಹಿಂದೂಯೇತರರ ವ್ಯಾಪಾರಕ್ಕೆ ನಿಷೇಧ
ಜಮ್ಮು: ರೈಲು ಬರುತ್ತಿದ್ದನ್ನು ನೋಡಿ ಗಾಬರಿಗೊಂಡು ಸೇತುವೆ ಮೇಲಿಂದ ಜಿಗಿದ ಮಕ್ಕಳು, ಬಾಲಕಿ ಸಾವು
BIGG NEWS : ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ: ಹೊಸ ವರ್ಷದಿಂದ ಎಲ್ಲಾ ಆಸ್ಪತ್ರೆಗಳಲ್ಲಿ ‘ಕ್ಯಾಶ್ ಲೆಸ್’ ಚಿಕಿತ್ಸೆ