ಜಮ್ಮು: ಜಮ್ಮು ಹೊರವಲಯದಲ್ಲಿ ರೈಲು ಬರುತ್ತಿರುವುದನ್ನು ಕಂಡು ರೈಲ್ವೆ ಸೇತುವೆಯಿಂದ ಜಿಗಿದ ಹನ್ನೊಂದು ವರ್ಷದ ಬಾಲಕಿಯೊಬ್ಬಳು ಸಾವನ್ನಪ್ಪಿದ್ದು, ಆಕೆಯ ಇಬ್ಬರು ಸಹೋದರರು ಗಾಯಗೊಂಡಿರುವ ಘಟನೆ ಬುಧವಾರ ನಡೆದಿದೆ.
ಇಬ್ಬರು ಸಹೋದರಿಯರಾದ ಅಲಿಯಾ ಫಾತಿಮಾ ಮತ್ತು ಹಾದಿಯಾ ಫಾತಿಮಾ ಮತ್ತು ಅವರ ಸಹೋದರ ಮೊಹಿಯುದ್ದೀನ್ (12) ಶಾಲೆಗೆ ಹೋಗುತ್ತಿದ್ದಾಗ ಈ ದುರಂತ ಸಂಭವಿಸಿದೆ.
ಜಮ್ಮುವಿನಿಂದ ಉಧಂಪುರಕ್ಕೆ ರೈಲು ಬರುತ್ತಿರುವುದನ್ನು ನೋಡಿ ಸುಮಾರು 35-30 ಅಡಿ ಎತ್ತರದ ಸೇತುವೆಯಿಂದ ಜಿಗಿದ ಮೂವರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದರು. ಅಪಘಾತದ ಬಗ್ಗೆ ಮಾಹಿತಿ ಪಡೆದ ಬಜಲತಾ ಪೊಲೀಸರು ಮತ್ತು ಸ್ಥಳೀಯರು ಸ್ಥಳಕ್ಕೆ ಧಾವಿಸಿ ಗಾಯಗೊಂಡ ಮೂವರು ಮಕ್ಕಳನ್ನು ಜಮ್ಮು ಆಸ್ಪತ್ರೆಗೆ ಸ್ಥಳಾಂತರಿಸಿದರು. ಆದ್ರೆ, ಹಾದಿಯಾ ಫಾತಿಮಾ ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿದ್ದಾರೆ.
ರೈಲು ಬರುತ್ತಿರುವುದನ್ನು ಗಮನಿಸಿದ ಮಕ್ಕಳು ಗಾಬರಿಗೊಂಡು ಸೇತುವೆಯಿಂದ ಜಿಗಿದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
BIGG NEWS : ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ: ಹೊಸ ವರ್ಷದಿಂದ ಎಲ್ಲಾ ಆಸ್ಪತ್ರೆಗಳಲ್ಲಿ ‘ಕ್ಯಾಶ್ ಲೆಸ್’ ಚಿಕಿತ್ಸೆ
BIGG NEWS : ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ: ಹೊಸ ವರ್ಷದಿಂದ ಎಲ್ಲಾ ಆಸ್ಪತ್ರೆಗಳಲ್ಲಿ ‘ಕ್ಯಾಶ್ ಲೆಸ್’ ಚಿಕಿತ್ಸೆ