ಜಲಂಧರ್ : ಪಂಜಾಬ್’ನ ಜಲಂಧರ್’ನಲ್ಲಿ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ನಾಲ್ವರು ಯುವತಿಯರು, ಯುವಕನೊಬ್ಬನಿಗೆ ಬಲವಂತವಾಗಿ ಮದ್ಯ ಕುಡಿಸಿ, ಅತ್ಯಾಚಾರ ಮಾಡಿರುವ ಘಟನೆ ವರದಿಯಾಗಿದೆ.
ಕಳೆದ ರಾತ್ರಿ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದ್ದು, ಯುವಕ ತಾನು ಕಾರ್ಖಾನೆಯಲ್ಲಿ ಕೆಲಸ ಮಾಡಿ ಮನೆಗೆ ಹೋಗುತ್ತಿದ್ದಾಗ ಮಾರ್ಗ ಮಧ್ಯೆ ಈ ಘಟನೆ ನಡೆದಿದೆ ಎಂದು ಹೇಳಿಕೊಂಡಿದ್ದಾನೆ.
ಯುವಕನನ್ನ ಕಾರಿನೊಳಗೆ ಎಳೆದುಕೊಂಡು ಹೋದ ಯುವತಿಯರು.!
ಯುವಕ ಹೇಳುವಂತೆ, ನಾನು ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ತನ್ನ ಬಳಿ ಕಾರು ಬಂದು ನಿಂತಿತು. ಕಾರಿನೊಳಗಿದ್ದ ಯುವತಿಯೊಬ್ಬಳು ಸ್ಲಿಪ್ ತೋರಿಸಿ ಈ ವಿಳಾಸ ಎಲ್ಲಿದೆ ಎಂದು ವಿಚಾರಿದ್ರು. ನಂತ್ರ ಇದ್ದಕ್ಕಿದ್ದಂತೆ ನನ್ನ ಕಣ್ಣುಗಳಿಗೆ ಪೆಪ್ಪರ್ ಸ್ಪ್ರೇ ಹೊಡೆದು, ಕಾರಿನೊಳಗೆ ಎಳೆದುಕೊಂಡು ಹೋಗಿ ಕೈ- ಕಾಲುಗಳನ್ನ ಕಟ್ಟಿದರು. ಹಾಗಾಗಿ ನಾನು ಏನನ್ನೂ ಮಾಡುವ ಸ್ಥಿತಿಯಲ್ಲಿ ಇರಲಿಲ್ಲ ಎಂದು ಹೇಳಿಕೊಂಡಿದ್ದಾನೆ.
ಯುವತಿಯರು, ಇಂಗ್ಲಿಷ್ ಮತ್ತು ಪಂಜಾಬಿ ಭಾಷೆಯಲ್ಲಿ ಪರಸ್ಪರ ಮಾತನಾಡುತ್ತಿದ್ದರು ಮತ್ತು ಅವರು ಕುಡಿದಿದ್ದರು, ನನಗೂ ಬಲವಂತವಾಗಿ ಮದ್ಯ ಸೇವಿಸುವಂತೆ ಮಾಡಿದರು ಮತ್ತು ಕುಡಿದಾಗ ನನ್ನೊಂದಿಗೆ ಲೈಂಗಿಕ ಕ್ರಿಯೆ ನಡೆಸಿದರು ಎಂದು ಯುವಕ ಆರೋಪಿಸಿದ್ದಾನೆ.
ಆದಾಗ್ಯೂ, ಈ ಘಟನೆಯ ನಂತ್ರ ಪೊಲೀಸ್ ಠಾಣೆಗೆ ದೂರು ನೀಡಲು ಸಂತ್ರಸ್ತ ನಿರಾಕರಿಸಿದ್ದು, ಆತನ ಕುಟುಂಬ ಸದಸ್ಯರು ತುಂಬಾ ಭಯಭೀತರಾಗಿದ್ದಾರೆ. ಇನ್ನು ದೂರು ಸ್ವೀಕರಿಸಿದ ನಂತ್ರ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಹೇಳಿದ್ರೂ, ಈ ವಿಷಯವನ್ನ ಗುಪ್ತಚರ ರೀತಿಯಲ್ಲಿ ತನಿಖೆ ನಡೆಸುತ್ತಿದ್ದಾರೆ.
ರಾಜ್ಯದ 4 ಕೋಟಿ ಜನರಿಗೆ ಆರೋಗ್ಯ ಕಾರ್ಡ್ ವಿತರಣೆ – ಸಿಎಂ ಬಸವರಾಜ ಬೊಮ್ಮಾಯಿ
Good News: ರಾಜ್ಯದಲ್ಲಿನ 33 ಸಾವಿರ ಸಂಘಗಳಿಗ 5 ಲಕ್ಣ ರೂ ಸಹಾಯಧನ – ಸಿಎಂ ಬೊಮ್ಮಾಯಿ ಘೋಷಣೆ