ಉಕ್ರೇನ್ : ಉಕ್ರೇನ್ ರಾಜಧಾನಿ ಕೈವ್ ಮೇಲೆ ರಷ್ಯಾ ಕ್ಷಿಪಣಿ ದಾಳಿ ನಡೆಸಿದ್ದು, ಮೂವರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಆರು ಮಂದಿ ಗಾಯಗೊಂಡಿದ್ದಾರೆ. ಈ ಕುರಿತಂತೆ ವಿದೇಶಾಂಗ ವ್ಯವಹಾರಗಳ ಮೊದಲ ಉಪ ಮಂತ್ರಿ ಎಮಿನ್ ಡಿಜೆಪ್ಪರ್ ಟ್ವಿಟರ್ ಮೂಲಕ ಮಾಹಿತಿ ನೀಡಿದ್ದಾರೆ.
Another massive missile attack by #russian terrorists on #Ukrainian cities, including #Kyiv. Critical infrastructure facilities and residential buildings damaged. Major energy disruptions around Ukraine. Many cities are left without electricity. There are victims among civilians. pic.twitter.com/AYtKBkQWQu
— Emine Dzheppar (@EmineDzheppar) November 23, 2022
ಕೈವ್ ಸೇರಿದಂತೆ #ಉಕ್ರೇನಿಯನ್ ನಗರಗಳ ಮೇಲೆ ರಷ್ಯಾ ಭಯೋತ್ಪಾದಕರು ನಡೆಸಿದ ಮತ್ತೊಂದು ಬೃಹತ್ ಕ್ಷಿಪಣಿ ದಾಳಿ ನಡೆಸಿದೆ. ದಾಳಿಗೆ ನಿರ್ಣಾಯಕ ಮೂಲಸೌಕರ್ಯ ಸೌಲಭ್ಯಗಳು ಮತ್ತು ವಸತಿ ಕಟ್ಟಡಗಳು ಹಾನಿಗೊಳಗಾಗಿವೆ. ಉಕ್ರೇನ್ ಅನೇಕ ನಗರಗಳು ವಿದ್ಯುತ್ ಇಲ್ಲದೆ ಪರದಾಡುತ್ತಿವೆ. ದಾಳಿಗೆ ನಾಗರೀಕರು ಪಲಿಪಶುಗಳಾಗುತ್ತಿದ್ದಾರೆ ಎಂದು ಡಿಜೆಪ್ಪರ್ ಟ್ವೀಟಿ ಮಾಡಿದ್ದಾರೆ.
ಇನ್ನೂ ಘಟನೆ ಸಂಬಂಧ ಹೆಚ್ಚಿನ ಮಾಹಿತಿಯನ್ನು ಡಿಜೆಪ್ಪರ್ ನೀಡಿಲ್ಲ.
ಏತನ್ಮಧ್ಯೆ, ರಷ್ಯಾದ ದಾಳಿಯ ನಂತರ ಕೈವ್ ಮತ್ತು ನೆರೆಯ ಮೊಲ್ಡೊವಾ ಸೇರಿದಂತೆ ಹಲವಾರು ಉಕ್ರೇನಿಯನ್ ನಗರಗಳಲ್ಲಿ ವಿದ್ಯುತ್ ಕಡಿತವನ್ನು ಅಧಿಕಾರಿಗಳು ವರದಿ ಮಾಡಿದ್ದಾರೆ.
ರಾಜ್ಯದ 4 ಕೋಟಿ ಜನರಿಗೆ ಆರೋಗ್ಯ ಕಾರ್ಡ್ ವಿತರಣೆ – ಸಿಎಂ ಬಸವರಾಜ ಬೊಮ್ಮಾಯಿ