ಚಾಮರಾಜನಗರ: ದಾದಿಯರು ಕೊಟ್ಟ ಚುಚ್ಚುಮದ್ದಿನ ಬಳಿಕ ಶಿಶು ಮೃತಪಟ್ಟಿದೆ ಎಂದು ಆರೋಪಿಸಿ ವ್ಯಕ್ತಿಯೊಬ್ಬ ಚಾಮರಾಜನಗರ ಜಿಲ್ಲಾಸ್ಪತ್ರೆಯ ಮುಂಭಾಗ ಪ್ರತಿಭಟನೆ ಮಾಡಿದ ಘಟನೆ ನಡೆದಿದೆ.
ಚಾಮರಾಜನಗರ ತಾಲೂಕಿನ ಮುರುಟಿಪಾಳ್ಯ ಗ್ರಾಮದ ಶಿವರುದ್ರಮ್ಮ, ಅಶ್ವಥ್ ದಂಪತಿಯ 9 ತಿಂಗಳ ಶಿಶು ಮೃತ ದುರ್ದೈವಿಯಾಗಿದೆ. ಜ್ವರ, ಕೆಮ್ಮು ಎಂದು ಇಂದು ಬೆಳಗ್ಗೆ ಆಸ್ಪತ್ರೆಗೆ ಕರೆತಂದ ವೇಳೆ ದಾದಿಯರು ವಾರ್ಡಿಗೆ ಕರೆದೊಯ್ದ ವೇಳೆಯಲ್ಲಿ ಎರಡು- ಮೂರು ಚುಚ್ಚುಮದ್ದು ಕೊಟ್ಟಿದ್ದಾರೆ ಎನ್ನಲಾಗಿದೆ. ಬಳಿಕ, ಶಿಶು ತೀವ್ರವಾಗಿ ಅಸ್ವಸ್ಥಗೊಂಡಿದ್ದು ಮೈಸೂರಿಗೆ ಕರೆದೊಯ್ಯಿರಿ ಎಂದಿದ್ದಾರೆ ಅಂತ ಹೇಳಿದ್ದರಂತೆ.
ಆ್ಯಂಬುಲೆನ್ಸ್ ಹುಡುಕಾಡುವಾಗ ಜೀವ ಇದೆ ಬನ್ನಿ ಎಂದು ಮತ್ತೇ ಕರೆದು ಚೀಟಿಗಳನ್ನು ಪಡೆದುಕೊಂಡು ಮಗು ಮೃತಪಟ್ಟಿದೆ ಎಂದಿದ್ದಾರೆ ಎಂದು ಶಿಶುವಿನ ಅಜ್ಜ ತಿಬ್ಬೇಗೌಡ ದೂರಿದ್ದಾರೆ. ಇನ್ನು,ಪಕ್ಕದ ಬೆಡ್ ಅಲ್ಲಿದ್ದ ವ್ಯಕ್ತಿಯೊಬ್ಬ ರೊಚ್ಚಿಗೆದ್ದ ಶವದೊಟ್ಟಿಗೆ ಕುಟುಂಬದವರೊಡಗೂಡಿ ಪ್ರತಿಭಟನೆ ನಡೆಸಿ ಜಿಲ್ಲಾಸ್ಪತ್ರೆಯ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.