ಬೆಂಗಳೂರು: ಚಿಲುಮೆ ವೋಟರ್ ಐಡಿ ಅಕ್ರಮ ಪ್ರಕರಣದ ತನಿಖೆಗೆ ಒತ್ತಾಯಿಸಿ ಜೆಡಿಎಸ್ ಇಂದು ಪ್ರತಿಭಟನೆ ನಡೆಸಿದರು.
ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ನೇತೃತ್ವದಲ್ಲಿ, ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ನಡೆಸಲಾಯಿತು.
BIGG NEWS: ಕಾಂಗ್ರೆಸ್ ನಲ್ಲಿ ಕೇಳಿದ್ರೆ ನಮ್ಮ ಮನೆಗೆ 4 ಟಿಕೆಟ್ ಬೇಕಾದ್ರೂ ಕೊಡ್ತಾರೆ: ಶಾಮನೂರು ಶಿವಶಂಕರಪ್ಪ
ಸರ್ಕಾರದ ವಿರುದ್ಧ ಭಿತ್ತಿಪತ್ರ ಹಿಡಿದು, ಘೋಷಣೆ ಕೂಗಿ ಜೆಡಿಎಸ್ ಕಾರ್ಯಕರ್ತರು ಆಕ್ರೋಶ ಹೊರಹಾಕಿದರು. ಬಳಿಕ ಚುನಾವಣೆ ಆಯೋಗಕ್ಕೆ ಪಾದಯಾತ್ರೆ ಮೂಲಕ ತೆರಳಿ ದೂರು ನೀಡಿದರು.
ಚುನಾವಣೆ ಆಯೋಗಕ್ಕೆ ದೂರು ನೀಡಿದ ಬಳಿಕ ಮಾತನಾಡಿದ ಸಿಎಂ ಇಬ್ರಾಹಿಂ, ಚಿಲುಮೆ ಅಕ್ರಮಕ್ಕೆ ಕಾರಣ ಯಾರು ಅಂತ ಸೂಕ್ತ ತನಿಖೆ ಆಗಬೇಕು. ಎಷ್ಟು ಲಕ್ಷ ವೋಟರ್ ಕಾರ್ಡ್ ಡಿಲೀಟ್ ಆಗಿವೆ ಅಂತ ಮಾಹಿತಿ ನೀಡಬೇಕು. ಇನ್ನು ಮುಂದೆ ಚುನಾವಣೆ ವೇಳೆ ರಿಟರ್ನಿಂಗ್ ಆಫೀಸ್ಗಳ ಬಳಿ ಇರುವ ಪಟ್ಟಿ ಹಾಗೂ ಅಭ್ಯರ್ಥಿಗಳ ಇರೋ ಪಟ್ಟಿ ಒಂದೇ ಇರುವಂತೆ ನೋಡಿಕೊಳ್ಳಬೇಕು ಎಂದರು. ಅಲ್ಲದೆ ಚುನಾವಣೆ ವೇಳೆ ಅಕ್ರಮ ಮಾಡಿದ ಅಭ್ಯರ್ಥಿಗಳ ನಾಮಪತ್ರ ಅಂಗೀಕಾರ ಮಾಡಬಾರದು ಎಂದು ಮನವಿ ಮಾಡಿದರು.