ಬೆಂಗಳೂರು: ರಂಗಾಯಣ ನಿರ್ದೇಶಕ ಅಡ್ಡಾಂಡ ಕಾರ್ಯಪ್ಪ ಅವರು ರಚಿಸಿರುವ ‘ಟಿಪ್ಪು ನಿಜ ಕನಸುಗಳು’ ಕೃತಿ ಮಾರಾಟ ಮಾಡುವುದಕ್ಕೆ ಬೆಂಗಳೂರು: 14 ನೇ ಹೆಚ್ಚುವರಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಧೀಶ ಜೆ.ಎನ್. ಮೆಂಡೋನ್ಕಾ ಅವರು ನಿರ್ಬಂಧ ವಿಧಿಸಿ ಆದೇಶ ಹೊರಡಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಬಿ.ಎಸ್.ರಫಿವುಲ್ಲಾ ಎಂಬುವರು ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಪೀಠ, ಮುಂದಿನ ವಿಚಾರಣೆಯವರೆಗೂ ಪುಸ್ತಕವನ್ನು ಅಂಗಡಿಗಳಲ್ಲಿ ಅಥವಾ ಸಾಮಾಜಿಕ ಜಾಲತಾಣಗಳಲ್ಲಿಯೂ ಕೂಡ ಮಾರಾಟ ಮಾಡದಂತೆ ಸೂಚನೆ ನೀಡಿದೆ.
ಅರ್ಜಿದಾರರ ಪರ ವಕೀಲರು ನ್ಯಾಯಾಪೀಠದ ಮುಂದೆ ಪುಸ್ತಕದಲ್ಲಿ ಉಲ್ಲೇಖ ಮಾಡಿರುವ ಮಾಹಿತಿಗಳ ಬಗ್ಗೆ ತಕರಾರು ಎತ್ತಿದ್ದರು, ಇದಲ್ಲದೇ ಪುಸ್ತಕದಲ್ಲಿ ಒದಗಿಸಿರುವ ಪುಸ್ತಕದಲ್ಲಿ ಯಾವುದೇ ಮಾಹಿತಿಗಳ ಬಗ್ಗೆ ಪುರಾವೆಗಳಿಲ್ಲ, ಬರಹಗಾರರು ದಾಖಲೆಗಳನ್ನು ಎಲ್ಲಿಂದ ಪಡೆದುಕೊಂಡಿದ್ದಾರೆ ಎನ್ನುವ ಬಗ್ಗೆ ತಿಳಿಸಿಲ್ಲ. ಪುಸ್ತಕ ಜನರಿಗೆ ತಲುಪಿದಲ್ಲಿ ಸಮಾಜದಲ್ಲಿ ಅಶಾಂತಿ ಉಂಟಾಗಲಿದೆ. ಇದಲ್ಲದೇ , ತುರುಕರು ಎಂಬ ಪದವನ್ನು ಕೂಡ ಪುಸ್ತಕದಲ್ಲಿ ಉಲ್ಲೇಖ ಮಾಡಲಾಗಿದ್ದು, ಈ ನಡುವೆ ಮುಸ್ಲಿಂರ ಅಜಾನನ್ನು ಬಗ್ಗೆ ಕೂಡ ತಪ್ಪಾಗಿ ಉಲ್ಲೇಖ ಮಾಡಲಾಗಿದೆ ಅಂತ ವಾದ ಮಂಡಿಸಿದ್ದರು, ಇದೇ ವೇಳೆ ವಾದವನ್ನು ಆಲಿಸಿದ ನ್ಯಾಯಾಪೀಠ ಪುಸ್ತಕ ಮಾರಾಟಕ್ಕೆ ನಿರ್ಬಂಧ ವಿಧಿಸಿ, ಪ್ರತಿವಾದಿಗಳಾದ ಲೇಖಕರು, ಪ್ರಕಾಶಕರಿಗೆ ತುರ್ತು ನೋಟಿಸ್ ಜಾರಿ ಮಾಡಿರುವ ನ್ಯಾಯಧೀಶರು ವಿಚಾರಣೆ ಮುಂದೂಡಿದರು.