ಚಿಕ್ಕಬಳ್ಳಾಪುರ: ಮಗಳು ಚೆನ್ನಾಗಿರಲಿ ಅಂತ ಆಕೆಯ ತಂದೆ ತಾಯಿ 50 ಲಕ್ಷ ರೂಪಾಯಿ ಮೌಲ್ಯದ ಜಮೀನು ಮಾರಿ, ಅದ್ದೂರಿಯಾಗಿ ಮದುವೆ ಮಾಡಿ ಕೊಟ್ಟಿದ್ದರು.
ಆದ್ರೆ ಕೈಹಿಡಿದ ಗಂಡ , ತನ್ನ ಪತ್ನಿಯ ಬದಲು, ಬೇರೆ ಮಹಿಳೆಯ ಜೊತೆ ಅನೈತಿಕ ಸಂಬಂಧ ಬೆಳೆಸಿ, ಪತ್ನಿಗೆ ಕಿರುಕುಳ ನೀಡ್ತಿದ್ದನಂತೆ. ಇದರಿಂದ ಮನನೊಂದ ಆ ಗೃಹಿಣಿ ಗಂಡನ ಮನೆಯಲ್ಲೆ ನೇಣಿಗೆ ಶರಣಾಗಿರುವ ಹೃದಯವಿದ್ರಾವಕ ಘಟನೆ ನಡೆದಿದೆ.
ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲೂಕಿನ ಎಸ್ ಗುಂಡ್ಲುಹಳ್ಳಿ ಗ್ರಾಮದ ರಾಮಕೃಷ್ಣಪ್ಪ ಹಾಗೂ ಅನಸೂಯಮ್ಮ ರೈತ ದಂಪತಿ, ತಾವು ಕಷ್ಟಪಟ್ಟಂತೆ ತಮ್ಮ ಮಗಳು ಮೋನಿಕಾ ಕಷ್ಟ ಪಡಬಾರದು ಎಂದೆಣೆಸಿ ಜಿಲ್ಲೆಯ ಬಾಗೇಪಲ್ಲಿ ಪಟ್ಟಣದ ಸಂತೇ ಬೀದಿ ಬಡಾವಣೆಯ ಗುರುಮೂರ್ತಿ ಎನ್ನುವವರಿಗೆ ಮದುವೆ ಮಾಡಿ ಕೊಟ್ಟಿದ್ರು. ಮಗಳ ಸಂತೋಷಕ್ಕಾಗಿ ಇರೊ 50 ಲಕ್ಷ ರೂಪಾಯಿ ಮೌಲ್ಯದ ಜಮೀನನನ್ನು ಮಾರಾಟ ಮಾಡಿ, ಮಗಳು ಹಾಗೂ ಆಳಿನ ಮೈಮೇಲೆ ಚಿನ್ನ ಹಾಕಿ ಅದ್ದೂರಿಯಾಗಿ ಮದುವೆ ಮಾಡಿದ್ದರು.