ಮಂಗಳೂರು: ಕುಕ್ಕರ್ ಬಾಂಬ್ ಬ್ಲಾಸ್ಟ್ ಕೇಸ್ಗೆ ಸಂಬಂಧಿಸಿದಂತೆ ತಮಿಳುನಾಡು , ಕೇರಳ ಎಲ್ಲಾ ಕಡೆಗಳಲ್ಲೂ ತನಿಖೆ ಚುರುಕುಗೊಳಿಸಲಾಗಿದೆ ಎಂದು ಡಿಜಿಪಿ ಪ್ರವೀಣ್ ಸೂದ್ ಹೇಳಿದ್ದಾರೆ.
BIGG NEWS : ಮಂಗಳೂರು ಸ್ಪೋಟ ಪ್ರಕರಣ ‘NIA’ ತನಿಖೆಗೆ : ಸಚಿವ ಆರಗ ಜ್ಞಾನೇಂದ್ರ ಹೇಳಿದ್ದೇನು..?
ಮಂಗಳೂರು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾರೀಕ್ (Shariq) ಕೃತ್ಯಕ್ಕೆ ಹಣದ ಮೂಲದ ಬಗ್ಗೆ ತನಿಖೆ ನಡೆಯುತ್ತಿದೆ. ಆದರೆ ಈಗಲೇ ಎಲ್ಲ ಮಾಹಿತಿಗಳನ್ನು ಬಹಿರಂಗಗೊಳಿಲು ಸಾಧ್ಯವಿಲ್ಲ.
BIGG NEWS : ಮಂಗಳೂರು ಸ್ಪೋಟ ಪ್ರಕರಣ ‘NIA’ ತನಿಖೆಗೆ : ಸಚಿವ ಆರಗ ಜ್ಞಾನೇಂದ್ರ ಹೇಳಿದ್ದೇನು..?
ಸದ್ಯ ಆರೋಪಿಯ ಪ್ರಾಣ ಉಳಿಸಬೇಕು, ಅದು ನಮಗೆ ಅತೀ ಅಗತ್ಯ. ಅವನ ವಿಚಾರಣೆ ಬಳಿಕ ಮತ್ತಷ್ಟು ಸತ್ಯ ಹೊರಗೆ ಬರುತ್ತೆ. ಈಗಲೇ ಎಲ್ಲ ಮಾಹಿತಿಯನ್ನು ಬಹಿರಂಗಗೊಳಿಸಿದ್ರೆ ಮುಂದಿನ ವಿಚಾರಣೆಗೆ ತೊಂದರೆಯಾಗುತ್ತದೆ ಎಂದು ತಿಳಿಸಿದರು.
ಎನ್ಐಎ (NIA) ಮತ್ತು ಕೇಂದ್ರದ ತನಿಖಾ ಸಂಸ್ಥೆಗಳು ನಮ್ಮ ಜೊತೆ ಇದೆ. ಸದ್ಯದಲ್ಲೇ ಸದ್ಯದಲ್ಲೇ ಅಧಿಕೃತವಾಗಿ ಈ ಪ್ರಕರಣ ಎನ್ಐಎಗೆ ಹಸ್ತಾಂತರ ಆಗಲಿದೆ. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ.
BIGG NEWS : ಮಂಗಳೂರು ಸ್ಪೋಟ ಪ್ರಕರಣ ‘NIA’ ತನಿಖೆಗೆ : ಸಚಿವ ಆರಗ ಜ್ಞಾನೇಂದ್ರ ಹೇಳಿದ್ದೇನು..?
ತಮಿಳುನಾಡು, ಕೇರಳ ಎಲ್ಲಾ ಕಡೆಗಳಲ್ಲೂ ನಮ್ಮ ತನಿಖೆ ಆಗ್ತಿದೆ. ನಮ್ಮ ಪೊಲೀಸರು ಕೂಡ ಈ ಬಗ್ಗೆ ವಿಚಾರಣೆ ಮುಂದುವರಿಸುತ್ತಾರೆ. ಪ್ರತಿಯೊಬ್ಬರ ಸಹಕಾರಕ್ಕಾಗಿ ನಾವು ಹಲವು ಜನರನ್ನ ವಿಚಾರಣೆ ಮಾಡುತ್ತೇವೆ. ಅವರನ್ನು ನಾವು ಅರೆಸ್ಟ್ ಮಾಡ್ತಿಲ್ಲ. ವಿಚಾರಣೆಗೆ ಮಾತ್ರ ಕರೆದು ತರ್ತೀವಿ ಅಷ್ಟೇ ಹೊರತು ಅವರು ಅಪರಾಧಿಗಳಾಗಿರುವುದಿಲ್ಲ. ಅವರನ್ನು ಅಪರಾಧಿಗಳಂತೆ ಬಿಂಬಿಸುವುದನ್ನು ಬಿಡಬೇಕು ಎಂದು ಮನವಿ ಮಾಡಿದ್ದಾರೆ.
BIGG NEWS : ಮಂಗಳೂರು ಸ್ಪೋಟ ಪ್ರಕರಣ ‘NIA’ ತನಿಖೆಗೆ : ಸಚಿವ ಆರಗ ಜ್ಞಾನೇಂದ್ರ ಹೇಳಿದ್ದೇನು..?
ಈಗಾಗಲೇ ಬೆಂಗಳೂರು ಸೇರಿ 8 ಕಡೆ ದಾಳಿ ನಡೆಸಿ, 4 ಜನರನ್ನ ವಶಕ್ಕೆ ಪಡೆದು ವಿಚಾರಣೆ ಮಾಡ್ತಿದ್ದೇವೆ. ಆದರೆ ಆರೋಪಿಗಳು ಅಂತ ಯಾರನ್ನೂ ಕರೆತಂದಿಲ್ಲ. ಒಬ್ಬರನ್ನು ಹಿಡಿಯುವ ಪ್ರಶ್ನೆಯಲ್ಲ, ಕೃತ್ಯದ ಹಿಂದಿರುವವರೂ ನಮಗೆ ಬೇಕು. ಅದಕ್ಕಾಗಿ ನಾವು ಎಲ್ಲಾ ರೀತಿಯಿಂದಲೂ ತನಿಖೆ ಮಾಡ್ತಾ ಇದೀವಿ ಎಂದು ಮಾಹಿತಿ ನೀಡಿದ್ದಾರೆ.