ಬೆಂಗಳೂರು : ಬೆಲೆ ಏರಿಕೆಯಿಂದ ತತ್ತರಿಸಿರುವ ಗ್ರಾಹಕರಿಗೆ ಮತ್ತೊಂದು ಶಾಕ್ ಎದುರಾಗಿದ್ದು, ನಂದಿನ ಹಾಲಿನ ದರವನ್ನು 3 ರೂ. ಬದಲಾಗಿ 2 ರೂ.ಗೆ ಹೆಚ್ಚಳವಾಗುವ ಸಾಧ್ಯತೆ ಇದೆ.
ಹಾಲು, ಮೊಸರಿನ ಹೆಚ್ಚಳ ಸಂಬಂಧ ಇಂದು ಕೆಎಂಎಫ್ ಮಹತ್ವದ ಸಭೆ ನಡೆಸಲಿದೆ. ಇಂದು ಮಧ್ಯಾಹ್ನ 3:30 ಕ್ಕೆ ಬೆಂಗಳೂರಿನ ಕೆಎಂಎಫ್ ಕಚೇರಿಯಲ್ಲಿ ಹಾಲು ಒಕ್ಕೂಟಗಳ ಜೊತೆ ಕೆಎಂಎಫ್ ಸಭೆ ನಡೆಸಲಿದೆ ಎಂದು ತಿಳಿದು ಬಂದಿದೆ.
ನಂದಿನ ಹಾಲಿನ ದರವನ್ನು 3 ರೂ. ಬದಲಾಗಿ 2 ರೂ.ಗೆ ಹೆಚ್ಚಳ ಮಾಡುವ ಸಾಧ್ಯತೆಯಿದ್ದು, ಈ ಬಗ್ಗೆ ಕೆಎಂಎಫ್ ಸಭೆಯಲ್ಲಿ ಚರ್ಚಿಸಿ ಸರ್ಕಾರಕ್ಕೆ ಹೊಸ ಪ್ರಸ್ತಾವನೆ ಸಲ್ಲಿಸಲಿದೆ ಎಂದು ತಿಳಿದು ಬಂದಿದೆ.ಗ್ರಾಹಕರಿಗೆ ಹೊರೆಯಾಗದಂತೆ ಹಾಗೂ ರೈತರಿಗೆ ಅನುಕೂಲವಾಗುವಂತೆ ಸೂತ್ರವೊಂದನ್ನು ಎರಡು ದಿನದೊಳಗೆ ರೂಪಿಸಿಕೊಂಡು ಬರುವಂತೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಕರ್ನಾಟಕ ಹಾಲು ಮಹಾಮಂಡಲಕ್ಕೆ ಸೂಚನೆ ನೀಡಿದ್ದು, ಈ ಮೂಲಕ ನಂದಿನಿ ಹಾಲಿನ ದರ ಹೆಚ್ಚಳ ವಿಚಾರ ಮುಂದೂಡಿಕೆ ಕಂಡಿದೆ.
ಹಾಲು ಹಾಗೂ ಮೊಸರಿನ ದರವನ್ನು 3 ರೂ. ಹೆಚ್ಚಳಕ್ಕೆ ಬದಲಾಗಿ 2 ರೂ.ಗೆ ಹೆಚ್ಚಳ ಮಾಡುವಂತೆ ಸರ್ಕಾರಕ್ಕೆ ಶಿಫಾರಸು ಮಾಡುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.ನಾಳೆ ಕೆಎಂಎಫ್ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಿದೆ ಎನ್ನಲಾಗಿದೆ.
BIGG NEWS : ‘ಚಿಲುಮೆ ‘ವೋಟರ್ ಐಡಿ ಹಗರಣ : ರವಿಕುಮಾರ್ ಗೆ ಮುಂದುವರೆದ ‘ಖಾಕಿ’ ಗ್ರಿಲ್
BIGG NEWS: ಬಳ್ಳಾರಿ ನಗರದ ಕ್ಷೇತ್ರದ ಟಿಕೆಟ್ ಗಾಗಿ ಬಿಗ್ ಫೈಟ್; ಬರೋಬ್ಬರಿ 20 ಆಕಾಂಕ್ಷಿ ಅರ್ಜಿ ಸಲ್ಲಿಕೆ