ಬೆಂಗಳೂರು: ಇತ್ತೀಚೆಗಷ್ಟೇ (ನ.11ರಂದು) ಪ್ರಧಾನಿ ನರೇಂದ್ರ ಮೋದಿ ಅವರಿಂದ ಅದ್ಧೂರಿಯಾಗಿ ಚಾಲನೆ ಪಡೆದ ಕಾಶಿಯಾತ್ರೆಗೆಂದೇ ವಿಶೇಷವಾಗಿ ವಿನ್ಯಾಸಗೊಂಡಿರುವ ‘ಕರ್ನಾಟಕ-ಭಾರತ್ ಗೌರವ್ ಕಾಶಿ ದರ್ಶನ ರೈಲು’ ಡಿಸೆಂಬರ್ ಮತ್ತು ಜನವರಿಯಲ್ಲಿ ಸ್ಥಗಿತಗೊಳ್ಳಲಿದೆ.
BIGG NEWS: ಬೆಳ್ಳಂಬೆಳಗ್ಗೆ ಪೊಲೀಸರ ಭರ್ಜರಿ ಕಾರ್ಯಾಚರಣೆ; ರೌಡಿಶೀಟರ್ಗಳ ಮನೆ ಮೇಲೆ ದಾಳಿ
ಚಾರ್ಧಾಮ್ ಮತ್ತು ಮಾನಸ ಸರೋವರ ಯಾತ್ರೆ ಯೋಜನೆಗೆ ಮೀಸಲಾಗಿಟ್ಟದ್ದ ಹಣವನ್ನು ಕಾಶಿಯಾತ್ರೆ ಯೋಜನೆಗೆ ಬಳಸಿಕೊಳ್ಳಲಾಗಿದೆ. ಅಲ್ಲದೆ ‘ಕರ್ನಾಟಕ-ಭಾರತ್ ಗೌರವ್ ಕಾಶಿ ದರ್ಶನ’ ರೈಲಿಗೆ ತರಾತುರಿಯಲ್ಲಿ ಚಾಲನೆ ನೀಡಲಾಯಿತು. ಆದರೆ, ಈ ರೈಲಿನ ಕಿಚನ್ ಬೋಗಿ ಮತ್ತಿತರ ಕೆಲವು ವ್ಯವಸ್ಥೆಗಳು ಪ್ರಯಾಣಿಕರಿಗೆ ಸಮರ್ಪಕವಾಗಿಲ್ಲದ ಕಾರಣ ರೈಲಿಗೆ ಮತ್ತಷ್ಟು ಕಾಯಕಲ್ಪ ಕಲ್ಪಿಸಬೇಕಾಗಿದೆ.
BIGG NEWS: ಬೆಳ್ಳಂಬೆಳಗ್ಗೆ ಪೊಲೀಸರ ಭರ್ಜರಿ ಕಾರ್ಯಾಚರಣೆ; ರೌಡಿಶೀಟರ್ಗಳ ಮನೆ ಮೇಲೆ ದಾಳಿ
ಹೀಗಾಗಿ, ರೈಲನ್ನು ಡಿಸೆಂಬರ್-ಜನವರಿಯಲ್ಲಿ ಕಾಶಿ ಯಾತ್ರೆಗೆ ಕಳುಹಿಸದಿರಲು ಇಂಡಿಯನ್ ರೈಲ್ವೆ ಕೇಟರಿಂಗ್ ಆ್ಯಂಡ್ ಟೂರಿಸಮ್ ಕಾರ್ಪೊರೇಷನ್ ಮತ್ತು ರಾಜ್ಯ ಮುಜರಾಯಿ ಇಲಾಖೆಗಳು ನಿರ್ಧರಿಸಿವೆ. ಜತೆಗೆ, ಉತ್ತರ ಭಾರತದಲ್ಲಿಈ ಬಾರಿ ಚಳಿಯ ಪ್ರಮಾಣ ಹೆಚ್ಚಾಗಿರುತ್ತದೆ. ಅದರಲ್ಲೂ ಡಿಸೆಂಬರ್ ಮತ್ತು ಜನವರಿ ತಿಂಗಳಲ್ಲಿ ಚಳಿಯ ತೀವ್ರತೆ ತುತ್ತ ತುದಿಯಲ್ಲಿರುತ್ತದೆ. ಹೀಗಾಗಿ, ದಕ್ಷಿಣ ಭಾರತದ ಪ್ರವಾಸಿಗರು ಅದನ್ನು ತಡೆದುಕೊಳ್ಳುವುದು ಕಷ್ಟ. ಹೀಗಾಗಿ, ಈ ಅವಧಿಯಲ್ಲಿಸಂಚಾರ ಸೇವೆ ಸ್ಥಗಿತಗೊಳಿಸಲಾಗುವುದು ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
BIGG NEWS: ಬೆಳ್ಳಂಬೆಳಗ್ಗೆ ಪೊಲೀಸರ ಭರ್ಜರಿ ಕಾರ್ಯಾಚರಣೆ; ರೌಡಿಶೀಟರ್ಗಳ ಮನೆ ಮೇಲೆ ದಾಳಿ
ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ‘ಕಾಶಿ ದರ್ಶನ ರೈಲು ಪ್ಯಾಕೇಜ್ ಟೂರ್’ಗೆ ಪ್ರಧಾನಿ ನರೇಂದ್ರ ಮೋದಿ ಅವರ ಅಮೃತ ಹಸ್ತದಿಂದ ಚಾಲನೆ ಸಿಕ್ಕಿತ್ತು. ಐಆರ್ಸಿಟಿಸಿ ಸಹಭಾಗಿತ್ವದ ಈ ಟೂರ್ ಪ್ಯಾಕೇಜ್ನ ದರ 20 ಸಾವಿರ ರೂಪಾಯಿಗಳಾಗಿದ್ದು, ಪ್ರಯಾಣಿಕರು ಕೇವಲ 15 ಸಾವಿರ ರೂಪಾಯಿಗಳನ್ನು ನೀಡಿದರೆ ಸಾಕು.
BIGG NEWS: ಬೆಳ್ಳಂಬೆಳಗ್ಗೆ ಪೊಲೀಸರ ಭರ್ಜರಿ ಕಾರ್ಯಾಚರಣೆ; ರೌಡಿಶೀಟರ್ಗಳ ಮನೆ ಮೇಲೆ ದಾಳಿ
ಉಳಿದ 5 ಸಾವಿರ ರೂ.ಗಳನ್ನು ರಾಜ್ಯ ಸರಕಾರ ಸಹಾಯಧನದ ರೂಪದಲ್ಲಿ ನೀಡಲಿದೆ. ಭವ್ಯ ಕಾಶಿ-ದಿವ್ಯ ಕಾಶಿಗೆ ರಾಜ್ಯದ ಜನರು ಕಡಿಮೆ ವೆಚ್ಚದಲ್ಲಿ ಹೋಗಿ ಬರಲಿ ಎಂಬ ಉದ್ದೇಶದಿಂದ ಈ ರೈಲು ಪ್ರವಾಸವನ್ನು ಆಯೋಜಿಸಲಾಗಿತ್ತು. (ಕಾಶಿ, ಅಯೋಧ್ಯೆ ಮತ್ತು ಪ್ರಯಾಗರಾಜ್ಗೆ ಪ್ರವಾಸ) ಉದ್ಘಾಟನೆಯ ದಿನ ಒಂದು ತಂಡ ಯಶಸ್ವಿ ಪ್ರವಾಸ ಪೂರೈಸಿ ಬಂತು. ಎರಡನೇ ತಂಡವನ್ನು ನ.23ರಂದು ಕಾಶಿ ಯಾತ್ರೆಗೆ ಕರೆದೊಯ್ಯಲಾಗುತ್ತಿದೆ. ಅದಾದ ನಂತರ ಸದ್ಯ ರೈಲು ಸಂಚಾರವನ್ನು ಅನಿರ್ದಿಷ್ಟ ಕಾಲ ನಿಲ್ಲಿಸಲು ನಿರ್ಧರಿಸಲಾಗಿದೆ.