ಬೆಂಗಳೂರು : ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಸ್ವತಂರ್ತ್ಯವಾಗಿ ಅಧಿಕಾರಕ್ಕೆ ಬಂದರೆ ಮುಸ್ಲಿಂ ಸಮುದಾಯದವರಿಗೆ ಮಂತ್ರಿ ಸ್ಥಾನ ನೀಡುತ್ತೇವೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಘೋಷಿಸಿದ್ದಾರೆ.
ಮಂಗಳವಾರ ಕೋಲಾರ ತಾಲೂಕಿನ ಕ್ಯಾಲನೂರಿನ ಗ್ರಾಮ ವಾಸ್ತವ್ಯದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಕುಮಾರಸ್ವಾಮಿ ಮುಸ್ಲಿಂ ಸಮುದಾಯದವರಿಗೆ ಮಂತ್ರಿ ಸ್ಥಾನ ನೀಡುವ ಮುಕ್ತ ಅವಕಾಶ ನಮ್ಮ ಪಕ್ಷದಲ್ಲಿದೆ ಎಂದು ಹೇಳಿದ್ದಾರೆ.
ಈ ರೀತಿಯ ಚರ್ಚೆಯ ಮುಕ್ತ ಅವಕಾಶ ಇರುವುದು ನಮ್ಮ ಜೆಡಿಎಸ್ ಪಕ್ಷದಲ್ಲಿ ಮಾತ್ರ, ಮುಸ್ಲಿಮರು ನಮ್ಮವರೇ,ಅವರೂ ಕನ್ನಡಿಗರು ಎಂದು ಹೆಚ್ಡಿಕೆ ಹೇಳಿದರು.
ಮಹಿಳೆಯರ ಪ್ರಾಮಾಣಿಕ ಅಭಿವೃದ್ಧಿಗೆ ಜೆಡಿಎಸ್ ಬದ್ಧವಾಗಿದೆ. ಹೀಗಾಗಿ ಅಧಿಕಾರಕ್ಕೆ ಬಂದ್ರೆ ಮಹಿಳೆಯರನ್ನ ಡಿಸಿಎಂ ಮಾಡುಲು ಸಿದ್ದವಿದ್ದೆವೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.ಅವಕಾಶ ಬಂದರೇ ಮುಸ್ಲಿಂ ಸಮುದಾಯದವರು ಸಿಎಂ ಆಗಬಹುದು.ಅವರು ಯಾಕೆ ಆಗಬಾರದು?ನಿನ್ನೆ ಶಾಲೆಗೆ ಹೋಗುವ ಮಕ್ಕಳು ಬಂದು ನೀವು ಸಿಎಂ ಆಗ್ಬೇಕು ಎಂದರು. ಆರತಿ ಮಾಡಿದಾಗ ದಕ್ಷಣೆ ಕೊಟ್ಟಾಗ ದುಡ್ಡು ಬೇಡ ಒಳ್ಳೆ ಶಾಲೆ ಮಾಡಿ ಅಂತ ಮಕ್ಕಳು ಹೇಳಿದ್ರು.ಮುಂದೆ ದುಡ್ಡು ಕೊಟ್ಟು ಮತ ಪಡೆಯೋದನ್ನ ಜನ ನಿಷೇಧ ಮಾಡಿದ್ದಾರೆ ಎಂದರು.
ಐದು ವರ್ಷಗಳ ಆಡಳಿತ ಸಿಕ್ಕರೆ ಇನ್ಮುಂದೆ ಜನರು ಹಣವನ್ನು ಪಡೆಯಬಾರದು. ಈ ರೀತಿಯ ಜನರ ಅಭಿವೃದ್ಧಿ ಮಾಡುತ್ತೆನೆ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಗೆ ಎಚ್ ಡಿ ಕೆ ಟಾಂಗ್ ನೀಡಿದ್ದಾರೆ. ಒಬ್ರು ಮೂರು ತಲೆಮಾರಿಗಾಗುವಷ್ಟು ದುಡ್ಡು ಮಾಡಿದ್ರು ಅಂತ ಹೇಳಿದ್ರು.ಈ ಹಣ ಯಾವುದು ಅಂದ್ರೆ ಕೆಸಿ ವ್ಯಾಲಿ ,ಎತ್ತಿನಹೊಳೆ ಹಣ ಈ ಮಾತು ಹೇಳಿದಾಗ ಕೂದಲು ಸ್ವಲ್ಲ ಇತ್ತು. ಇದೀಗ ಅದು ಉದುರಿಹೋಗಿದೆ.ಅಷ್ಟಿದ್ರೆ ಚುನಾವಣೆ ಮುಗಿಯೂದ್ರೊಳಗೆ ಎತ್ತಿನ ಹೊಳೆ ಮುಗಿಸಲಿ ಎಂದು ಕುಮಾರಸ್ವಾಮಿ ಸವಾಲ್ ಹಾಕಿದ್ದಾರೆ.
ಬೆಣ್ಣೆ ನಗರಿ ದಾವಣಗೆರೆಯಲ್ಲಿ ಇಂದು ಬಿಜೆಪಿಯಿಂದ ಭರ್ಜರಿ ಶಕ್ತಿ ಪ್ರದರ್ಶನ |Jana Sankalpa Yatra
ಮುಂಬೈ: ಆತ್ಮಹತ್ಯೆಗೆಂದು ಹಳಿ ಮೇಲೆ ಮಲಗಿದ್ದ ಮಹಿಳೆಯ ಕಂಡು ಮೋಟರ್ಮ್ಯಾನ್ ಮಾಡಿದ್ದೇನು ಗೊತ್ತಾ?