ಬೆಂಗಳೂರು: ಆಸ್ತಿ ನೊಂದಣಿಯಾದ 7 ದಿನಗಳಲ್ಲೇ ಖಾತೆ ಮಾಡಲು ಅವಕಾಶ ಕಲ್ಪಿಸುವ ಮತ್ತೊಂದು ಜನಸ್ನೇಹಿ ತೀರ್ಮಾನವನ್ನು ರಾಜ್ಯ ಸರ್ಕಾರ ಕೈಗೊಂಡಿದೆ.
ಹೌದು, ನೊಂದಣಿಯಾದ ಆಸ್ತಿ ನೀಡಲು ಸದ್ಯಕ್ಕೆ ಕನಿಷ್ಟ 34 ದಿನಗಳ ಕಾಲ ಕಾಲಾವಕಾಶ ಇದೆ. ಇದನ್ನು 7 ದಿನಕ್ಕೆ ಇಳಿಸಲು ನಿರ್ಧರಿಸಲಾಗಿದೆ ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿದರು.
ಆಸ್ತಿ ನೊಂದಣಿ ಮಾಡಿಸಿಕೊಂಡವರು ಖಾತೆ ಪಡೆಯಲು ತಿಂಗಳುಗಟ್ಟಲೇ ಕಚೇರಿಗಳಿಗೆ ಅಲೆಯುವದನ್ನು ತಪ್ಪಿಸಲು ಈ ತೀರ್ಮಾನ ಮಾಡಲಾಗಿದೆ, ಇದರಿಂದ ಆಸ್ತಿ ಮೇಲೆ ಸಭಲಭ್ಯ ಪಡೆಯಲು ಜನರಿಂದ ಬಹಳಷ್ಟು ಅನುಕೂಲವಾಗಲಿದೆ.ರಾಜ್ಯದಲ್ಲಿ ಲಕ್ಷಾಂತರ ಕಂದಾಯ ನಿವೇಶನಗಳನ್ನು ಭೂ ಪರಿವರ್ತನೆ ವ್ಯಾಪ್ತಿಗೆ ತರಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.
ಭೂ ಪರಿವರ್ತನೆ ವಿಧೇಯಕ
ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಕಂದಾಯ ಜಾಗಗಳಲ್ಲಿನ ಅನಧಿಕೃತ ಮನೆ, ನಿವೇಶನ ಮತ್ತಿತರ 40 ಲಕ್ಷಕ್ಕೂ ಅಧಿಕ ಆಸ್ತಿಗಳನ್ನು ಸಕ್ರಮ ಮಾಡಲು ಸರಕಾರ ಹೊಸ ಮಾರ್ಗ ಹುಡುಕಿದೆ. ಭೂ ಪರಿವರ್ತನೆಯಲ್ಲಿ ಪಾರದರ್ಶಕತೆಗಾಗಿ ಸುಗ್ರೀವಾಜ್ಞೆ ಮೂಲಕ ಜಾರಿ ಮಾಡಲಾಗುತ್ತಿರುವ ನೂತನ ವ್ಯವಸ್ಥೆಯಲ್ಲಿ ಕಂದಾಯ ನಿವೇಶನಗಳ ಆಸ್ತಿಗಳ ಸಕ್ರಮಕ್ಕೂ ಅನುವು ಮಾಡಿಕೊಡಲು ಸರಕಾರ ಚಿಂತನೆ ನಡೆಸಿದೆ.
ಯೋಜನಾ ಪ್ರಾಧಿಕಾರ ವ್ಯಾಪ್ತಿಯ ಒಳಪಟ್ಟ ಕೃಷಿ ಭೂಮಿ, ಕೃಷಿಯೇತರ ಚಟುವಟಿಕೆಗಳಿಗೆ ಬಳಸಿಕೊಳ್ಳಲು ಭೂ ಪರಿವರ್ತನೆ ಮಾಡಿಕೊಡಲು ಮುಂದಾಗಿರುವ ಸರ್ಕಾರ, ಸಾರ್ವಜನಿಕರ ಅನುಕೂಲಕ್ಕಾಗಿ ಸುಗ್ರೀವಾಜ್ಞೆ ಮೂಲಕ ರಾಜ್ಯದಲ್ಲಿ ಜಾರಿಗೊಳಿಸಲಾಗುತ್ತದೆ.ಬೆಳಗಾವಿ ಅಧಿವೇಶನದಲ್ಲಿ ಈ ವಿಚಾರ ಕುರಿತು ವಿಧೇಯಕ ಮಂಡಿಸಲು ನಿರ್ಧರಿಸಲಾಗಿದೆ.
ಇದರಿಂದ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಲಕ್ಷಾಂತರ ಕಂದಾಯ ನಿವೇಶನಗಳನ್ನು ಭೂ ಪರಿವರ್ತನೆ ವ್ಯಾಪ್ತಿಗೆ ತರಲು ಸಹಕಾರಿಯಾಗಲಿದೆ. ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಕ್ಕಾಗಿ ಭೂ ಪರಿವರ್ತನೆ ಮಾಡಿಸಿಕೊಳ್ಳದ ಇಂತಹ ನಿವೇಶನಗಳ ಭೂ ದಂಡ ಶುಲ್ಕದೊಂದಿಗೆ ಭೂ ಪರಿವರ್ತನೆ ಸಾಧ್ಯವಾದರೆ ಜನರಿಗೆ ಅನುಕೂಲವಾಗುತ್ತದೆ.