ಬೆಂಗಳೂರು : ರಾಜ್ಯ ಸರ್ಕಾರವು ರಾಜ್ಯದ ಶಾಲಾ ಮಕ್ಕಳಿಗೆ ಶೀಘ್ರವೇ ಶಾಲಾ ಮಕ್ಕಳ ಬಿಸಿಯೂಟದಲ್ಲಿ ರಾಗಿಮುದ್ದೆ ಮತ್ತು ಜೋಳದ ರೊಟ್ಟಿ ನೀಡಲು ಸರ್ಕಾರ ನಿರ್ಧರಿಸಿದೆ ಎನ್ನಲಾಗಿತ್ತು, ಆದರೆ ಮಕ್ಕಳಿಗೆ ಸದ್ಯಕ್ಕೆ ರಾಗಿಮುದ್ದೆ ಮತ್ತು ಜೋಳದ ರೊಟ್ಟಿ ಭಾಗ್ಯ ಇಲ್ಲ.
ಹೌದು, ಈ ಯೋಜನೆ ಮುಂದಿನ ವರ್ಷದಿಂದ ಜಾರಿಗೆ ತರಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಕುರಿತು ಸಾರ್ವಜನಿಕ ಶಿಕ್ಷಣ ಇಲಾಖೆಯ ಮಧ್ಯಾಹ್ನದ ಬಿಸಿಯೂಟ ಊಟ ಯೋಜನೆಯ ಮುಖ್ಯ ಅಧಿಕಾರಿ ಅನಿತಾ ನಜರೆ ಮಾಹಿತಿ ನೀಡಿದ್ದು, ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದಲ್ಲಿ ಲಭ್ಯವಿರುವ ಆಹಾರ ಧಾನ್ಯಗಳು ಕಳಪೆ ಗುಣಮಟ್ಟದ್ದಾಗಿದೆ. ಹೀಗಾಗಿ ಈ ವರ್ಷ ರಾಗಿ ಮುದ್ದೆ ಮತ್ತು ಜೋಳದ ರೊಟ್ಟಿ ನೀಡುವ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಆಗುವುದಿಲ್ಲ ಎಂದು ಹೇಳಿದ್ದಾರೆ. ಈ ಮೂಲಕ ಮಕ್ಕಳಿಗೆ ಸದ್ಯಕ್ಕೆ ರಾಗಿಮುದ್ದೆ ಮತ್ತು ಜೋಳದ ರೊಟ್ಟಿ ಭಾಗ್ಯ ಇಲ್ಲ.
ಬಿಸಿಯೂಟದ ಯೋಜನೆಗೆ ರಾಗಿ ಮುದ್ದೆ ಮತ್ತು ಜೋಳದ ರೊಟ್ಟಿ ನೀಡಲು ದೊಡ್ಡ ಪ್ರಮಾಣದಲ್ಲಿ ರಾಗಿ ಮತ್ತು ಜೋಳ ಉತ್ಪಾದನೆಯ ಅಗತ್ಯವಿತ್ತು. ಈಗ ಸಂಗ್ರಹವಾಗುತ್ತಿರುವ ಆಹಾರ ಧಾನ್ಯಗಳು ಚೆನ್ನಾಗಿಲ್ಲ, ಜೊತೆಗೆ ಅವುಗಳ ಪೌಷ್ಟಿಕಾಂಶ ಕಳಪೆಯಾಗಿತ್ತು. ಆದ್ದರಿಂದ ಈ ಯೋಜನೆ ಮುಂದಿನ ವರ್ಷದಿಂದ ಜಾರಿಗೆ ತರಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಮಾನ ಮರ್ಯಾದೆ ಇದ್ದರೆ ಡಿ.ಕೆ ಶಿವಕುಮಾರ್ ರಾಜೀನಾಮೆ ನೀಡಲಿ : K.S ಈಶ್ವರಪ್ಪ ಸವಾಲ್
ಶಿಷ್ಯ ವೇತನದ ಕುರಿತು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ |Scholarship