ವಿಶ್ವಸಂಸ್ಥೆ: 11 ನಿಮಿಷಗಳಿಗೊಮ್ಮೆ ಒಬ್ಬ ಮಹಿಳೆಯನ್ನು ಆಪ್ತ ಸಂಗಾತಿ ಅಥವಾ ಕುಟುಂಬ ಸದಸ್ಯರು ಕೊಲ್ಲುತ್ತಾರೆ. ಅವರ ವಿರುದ್ಧದ ಇಂತಹ ಹಿಂಸಾಚಾರವು ವಿಶ್ವದಲ್ಲಿ ಅತ್ಯಂತ ಪ್ರಚಲಿತದಲ್ಲಿರುವ “ಮಾನವ ಹಕ್ಕುಗಳ ಉಲ್ಲಂಘನೆ” ಎಂದು ವಿಶ್ವಸಂಸ್ಥೆಯ ಮುಖ್ಯಸ್ಥ ಆಂಟೋನಿಯೊ ಗುಟೆರಸ್ ಹೇಳಿದ್ದಾರೆ.
ಇದೇ ವೇಳೆ ಅವರು ಈ ದುರದೃಷ್ಟವನ್ನು ನಿಭಾಯಿಸಲು ರಾಷ್ಟ್ರೀಯ ಕ್ರಿಯಾ ಯೋಜನೆಗಳನ್ನು ಜಾರಿಗೆ ತರುವಂತೆ ಗುಟೆರಸ್ ಸರ್ಕಾರಗಳಿಗೆ ಕರೆ ನೀಡಿದರು ಮತ್ತು 2026 ರ ವೇಳೆಗೆ ಮಹಿಳಾ ಹಕ್ಕುಗಳ ಸಂಘಟನೆಗಳು ಮತ್ತು ಆಂದೋಲನಗಳಿಗೆ ಶೇಕಡಾ 50 ರಷ್ಟು ಅನುದಾನವನ್ನು ಹೆಚ್ಚಿಸುವಂತೆ ಎಲ್ಲಾ ಸರ್ಕಾರಗಳನ್ನು ಒತ್ತಾಯಿಸಿದರು. ನವೆಂಬರ್ 25 ರಂದು ಆಚರಿಸಲಾಗುವ ‘ಮಹಿಳೆಯರ ಮೇಲಿನ ದೌರ್ಜನ್ಯ ನಿರ್ಮೂಲನೆಗಾಗಿ ಅಂತರಾಷ್ಟ್ರೀಯ ದಿನದಂದು ಪ್ರಧಾನ ಕಾರ್ಯದರ್ಶಿ ಗೆಟ್ರೆಸ್ ಈ ಹೇಳಿಕೆ ನೀಡಿದ್ದಾರೆ.
ಮಹಿಳೆಯರ ಹಕ್ಕುಗಳ ಕುರಿತು ಮಾತನಾಡಿದ ಅವರು “ಮಹಿಳೆಯರು ಮತ್ತು ಹುಡುಗಿಯರ ಮೇಲಿನ ದೌರ್ಜನ್ಯವು ವಿಶ್ವದ ಅತ್ಯಂತ ವ್ಯಾಪಕವಾದ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ಪ್ರತಿ 11 ನಿಮಿಷಗಳಿಗೊಮ್ಮೆ, ಒಬ್ಬ ಮಹಿಳೆ ಅಥವಾ ಹುಡುಗಿಯನ್ನು ನಿಕಟ ಪಾಲುದಾರ ಅಥವಾ ಕುಟುಂಬದ ಸದಸ್ಯರಿಂದ ಕೊಲ್ಲಲಾಗುತ್ತದೆ ಮತ್ತು COVID-19 ಸಾಂಕ್ರಾಮಿಕದಿಂದ ಆರ್ಥಿಕ ಪ್ರಕ್ಷುಬ್ಧತೆಯವರೆಗಿನ ಇತರ ಒತ್ತಡಗಳು ಅನಿವಾರ್ಯವಾಗಿ ಇನ್ನಷ್ಟು ದೈಹಿಕ ಮತ್ತು ಮೌಖಿಕ ನಿಂದನೆಗೆ ಕಾರಣವಾಗುತ್ತವೆ ಎಂದು ನಮಗೆ ತಿಳಿದಿದೆ ಅಂತ ತಿಳಿಸಿದರು, ಮಹಿಳೆಯರು ಆನ್ಲೈನ್ನಲ್ಲಿ ಲೈಂಗಿಕ ದೌರ್ಜನ್ಯ, ಸ್ತ್ರೀದ್ವೇಷ ದ್ವೇಷದ ಮಾತು, ಇಮೇಜ್ ನಿಂದನೆ ಮತ್ತು ದುಷ್ಕರ್ಮಿಗಳಿಂದ ಅವರು ಅಪಮಾನಕ್ಕೆ ಒಳಗಾಗುತ್ತಾರೆ ಎಂದು ಅವರು ಹೇಳಿದರು.