ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ : ಐದು ವರ್ಷ ಪೂರೈಸಿದ ಸಿಬ್ಬಂದಿಗಳ ಸಾರ್ವತ್ರಿಕ ವರ್ಗಾವಣೆ ಮಾಡೊದು ಪೊಲೀಸ್ ಇಲಾಖೆ ಸಾಮಾನ್ಯ ಕೆಲಸ. ಅದರಂತೆ ಚಾಮರಾಜನಗರದಲ್ಲೂ ಜೂನ್ ಜುಲೈ ತಿಂಗಳಿನಲ್ಲಿ ವರ್ಗಾವಣೆ ಮಾಡಲಾಯಿತು.ಆದರೂ ಅಂದು ಅವರ ಆದೇಶ ಕ್ಯಾರೆ ಎನ್ನದೆ ಕೆಲವರು ಸ್ವಲ್ಪ ದಿನಗಳ ಕಾಲ ಮೌನವಾದರು.
ಎಸ್ಪಿ ಆದೇಶ ಪರಿಗಣಿಸದೆ ಇರೊವ್ರಿಗೆಲ್ಲ ವರ್ಗಾವಣೆ ಆದ ದಿನದ ಮರುದಿನವೆ ಖಡಕ್ ವಾರ್ನಿಂಗ್ ನಿಸ್ತಂತು ಮೂಲಕ ಕೊಟ್ಟಿದ್ದರಿಂದ ರಾತ್ರೋ ರಾತ್ರಿ ಬೇರೆಡೆಗೆ ವರ್ಗಾವಣೆ ಮಾಡಿದರೆ ಕಷ್ಟ ಅಂತ ಮರುದಿನವೆ ಕರ್ತವ್ಯಕ್ಕೆ ನಿಯೋಜನೆ ಆಗಿಬಿಟ್ಟರು.
ನಂತರ ಎಸ್ಪಿ ಶಿವಕುಮಾರ್ ಅವರು ನನ್ನ ಆದೇಶ ಪಾಲಿಸಿದ್ದಾರೆ , ಅವರವರು ನಿಯೋಜಿಸಿದ ಸ್ಥಳಗಳಿಗೆ ತೆರಳಿದ್ದಾರೆ ಎಂದು ವರ್ಗಾವಣೆ ನೀತಿಯನ್ನೆ ಮರೆತು ಬಿಟ್ಟರು. ವರ್ಗಾವಣೆ ಮಾಡಿ ಐದು ತಿಂಗಳಾದರೂ ಪೇದೆಯೊಬ್ಬರು ಠಾಣೆಯೊಂದರಿಂದ ಕಾಲ್ಕಿತ್ತಿಲ್ಲ. ಏಳು ವರ್ಷ ಪೂರೈಸಿದ ನಂತರ ಠಾಣೆಯೊಂದರಿಂದ ಕೊಳ್ಳೆಗಾಲಕ್ಕೆ ವರ್ಗಾವಣೆ ಮಾಡಲಾಯಿತು. ನಂತರ ಯಾವುದೋ ಪ್ರಲೋಭನೆಗೆ ಒಳಪಟ್ಟು ಕೊಳ್ಳೇಗಾಲದಿಂದ ಚಾಮರಾಜನಗರ ಸಂಚಾರ ಠಾಣೆಗೆ ವರ್ಗಾವಣೆ ಮಾಡಲಾಯಿತು. ಆದರೆ ಆ ಸಿಬ್ಬಂದಿ ಮಾತ್ರ ವರ್ಗಾವಣೆಯಾದ ಎರಡೂ ಠಾಣೆಗೂ ಹೋಗಿ ವರದಿ ಮಾಡಿಕೊಳ್ಳದೆ ಮೂಲ ಸ್ಥಳದಲ್ಲೇ ಗೂಟ ಹೊಡೆದುಕೊಂಡು ಸುಮ್ಮನಿದ್ದಾರೆ ಎಂದರೆ ಎಸ್ಪಿ ಅವರ ಆದೇಶ ಕಾಲಕಸವಾಗಿದೆ ಎಂದರೆ ತಪ್ಪಾಗಲಾರದು.
ಠಾಣೆಯಲ್ಲಿ ಬೀಳ್ಕೊಡುವಂತೆ ಅಂದೆ ಆದೇಶ ಮಾಡಿದ್ದರು ಠಾಣೆಯ ಇನ್ಸ್ ಪೆಕ್ಟರ್ ಬೀಳ್ಕೊಟ್ಟಿಲ್ಲ..ಕರ್ತವ್ಯಕ್ಕೆ ಹಾಜರಾಗಬೇಕಾದ ಠಾಣೆಯವರು ಯಾಕೆ ಆ ಸಿಬ್ಬಂದಿ ಬರಲಿಲ್ಲ ಅಂತ ಕೇಳಲು ಹೋಗಿಲ್ಲ..ಜೊತೆಗೆ ಮೇಲಾದಿಕಾರಿಗೆ ವರದಿ ಕೂಡ ಮಾಡದೆ ಮೌನವಾಗಿದ್ದಾರೆ.
ಈಗಾಗಲೆ ಎಸ್ಪಿ ಅವರ ಶಿರಸ್ತ್ರಾಣ ಆದೇಶ ಕಾಲಕಸವಾಗಿ, ಯಥಾವಥ್ ನಿಯಮಗಳನ್ನ ಪೊಲೀಸರೇ ಉಲ್ಲಂಘಿಸುತ್ತಿದ್ದಾರೆ ಈಗ ವರ್ಗಾವಣೆ ಆದೇಶ ಕೂಡ ಕಾಲಿಗೆ ಕಸದಂತೆ ಇಲಾಖೆ ಸಿಬ್ಬಂದಿಗಳಿಗೆ ಕಾಣುತ್ತಿರೋದು ನೋಡಿದರೆ ಎಸ್ಪಿ ಅವರ ಮೇಲೆ ಯಾವುದೇ ಭಯ,ಗೌರವ ಇರೋದು ಕಾರಣವಾಗಿದೆ ಎಂದರೆ ತಪ್ಪಾಗಲಾರದು. ಈ ಬಗ್ಗೆ ಅಧಿಕಾರಿಗಳ ಸ್ಪಷ್ಟನೆಗಾಗಿ ಸಂಪರ್ಕಿಸಲು ಮುಂದಾದಾಗ ಕ್ರೀಡಾಕೂಟದ ಬ್ಯುಸಿ ಇರುವುದರಿಂದ ಮಾಹಿತಿ ಲಭ್ಯವಾಗಿಲ್ಲ.
BREAKING NEWS : ಬೆಂಗಳೂರಿನಲ್ಲಿ ‘BMTC’ ಬಸ್ ಹರಿದು ಬಾಲಕಿ ಬಲಿ : ಚಾಲಕ ಅರೆಸ್ಟ್