ನವದೆಹಲಿ: ಪಾಕ್ ಆಕ್ರಮಿತ ಕಾಶ್ಮೀರವನ್ನ (PoK and Gilgit-Baltistan) ಹಿಂಪಡೆಯಲು ಭಾರತ ಸಿದ್ಧವಾಗಿದೆ ಎಂದು ಸೇನೆ ಹೇಳಿದೆ. ಈ ಕುರಿತು ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಹೇಳಿಕೆ ನೀಡಿದ್ದಾರೆ. ಹೀಗಾಗಿ ಪಾಕ್ ಆಕ್ರಮಿತ ಕಾಶ್ಮೀರವನ್ನ ಭಾರತ ವಾಪಸ್ ಪಡೆಯಲು ಮುಂದಾಗಿದೆ ಎಂಬ ಚರ್ಚೆ ನಡೆಯುತ್ತಿದೆ. ಪಾಕ್ ಆಕ್ರಮಿತ ಕಾಶ್ಮೀರದ ಸಮಸ್ಯೆ ಕಳೆದ ಹಲವು ವರ್ಷಗಳಿಂದ ಬಾಕಿ ಉಳಿದಿದ್ದು, ಭಾರತ ಮತ್ತು ಪಾಕಿಸ್ತಾನದ ನಡುವೆ ನಿರಂತರ ಉದ್ವಿಗ್ನ ವಾತಾವರಣವಿದೆ.
ಈ ಬಗ್ಗೆ ಭಾರತೀಯ ಸೇನೆಯ ಉಪೇದ್ರಾ ದ್ವಿವೇದಿ ಹೇಳಿಕೆ ನೀಡಿದ್ದು, ಪಾಕ್ ಆಕ್ರಮಿತ ಕಾಶ್ಮೀರದ ವಿರುದ್ಧ ಕ್ರಮ ಕೈಗೊಳ್ಳಲು ಭಾರತೀಯ ಸೇನೆ ಸಂಪೂರ್ಣ ಸನ್ನದ್ಧವಾಗಿದೆ ಎಂದು ಹೇಳಿದ್ದಾರೆ. ಭಾರತ ಸರ್ಕಾರ ನಮಗೆ ಆದೇಶ ನೀಡಿದ್ರೆ, ಭಾರತೀಯ ಸೇನೆ ಯಾವುದೇ ಕ್ರಮಕ್ಕೆ ಸಿದ್ಧವಾಗಿದೆ ಎಂದರು.
ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಯಾವ ಭಾಗವಾಗಿದೆ?
ಗಿಲ್ಗಿಟ್ ಬಾಲ್ಟಿಸ್ತಾನ್ ಭಾರತದ ಉತ್ತರದ ಭಾಗವಾಗಿದೆ. ಸ್ವಾತಂತ್ರ್ಯದ ನಂತ್ರ ಈ ಪ್ರದೇಶವನ್ನ ಪಾಕಿಸ್ತಾನ ಸೇನೆ ಮತ್ತು ನುಸುಳುಕೋರರು ವಶಪಡಿಸಿಕೊಂಡರು ಮತ್ತು ಅಂದಿನಿಂದ ಈ ಪ್ರದೇಶವು ಪಾಕಿಸ್ತಾನದ ನಿಯಂತ್ರಣದಲ್ಲಿದೆ. ಈ ಪ್ರದೇಶವು ಭಾರತ ಮತ್ತು ಪಾಕಿಸ್ತಾನದ ಹಕ್ಕುಗಳನ್ನ ಹೊಂದಿದೆ.
BREAKING NEWS : ನೈಕಾ ಸಿಎಫ್ಒ ‘ಅರವಿಂದ್ ಅಗರ್ವಾಲ್’ ರಾಜೀನಾಮೆ |Nykaa CFO Arvind Agrawal resigns
BIGG NEWS : ಭಾರತ-ಆಸ್ಟ್ರೇಲಿಯಾ ಮುಕ್ತ ವ್ಯಾಪಾರ ಒಪ್ಪಂದ ; “ಇದು ಎರಡು ದೇಶಗಳಿಗೆ ಮಹತ್ವದ ಕ್ಷಣ” : ಪಿಯೂಷ್ ಗೋಯಲ್
HEALTH TIPS: ಮುಟ್ಟಿನ ನೋವು ನಿವಾರಣೆಗೆ ಸರಳ ಮನೆ ಮದ್ದು? ಇಲ್ಲಿದೆ ಟಿಪ್ಸ್