ಗದಗ : ಲಕ್ಷ್ಮೇಶ್ವರ ತಾಲೂಕು ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದಿಂದ ಡಿಸೆಂಬರ್ 4 ರಂದು ಪಂಚಮಸಾಲಿ ಸಮಾವೇಶ ನಡೆಯಲಿದೆ ಎಂದು ವಚನಾನಂದ ಶ್ರೀಗಳು ಹೇಳಿದರು.
ಅಕ್ರಮ ವೋಟರ್ ಐಡಿ ಕೇಸ್ : ರಾಜ್ಯ ಮುಖ್ಯ ಚುನಾವಣಾಧಿಕಾರಿ ಭೇಟಿ ಮಾಡಿದ ಕೇಂದ್ರ ಚುನಾವಣಾ ಆಯೋಗ
ಡಿಸೆಂಬರ್ 4 ರಂದು ಬೆಳಗ್ಗೆ 10:30ಕ್ಕೆ ಪಟ್ಟಣದ ಸೋಮೇಶ್ವರ ತೇರಿನಮನೆ ಆವರಣದಲ್ಲಿ ಸಮಾವೇಶ ನಡೆಯಲಿದೆ. ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ, ಕೇಂದ್ರದ ಓಬಿಸಿ ಮೀಸಲಾತಿಗಾಗಿ ಬೃಹತ್ ಜನಜಾಗೃತಿ ಸಮಾವೇಶ ನಡೆಸಲಾಗುತ್ತದೆ ಎಂದರು.
ಇದರ ಜೊತೆಗೆ ವೀರರಾಣಿ ಕಿತ್ತೂರು ಚನ್ನಮ್ಮರ 199 ನೇ ವಿಜಯೋತ್ಸವ ಮತ್ತು 244 ನೇ ಜಯಂತೋತ್ಸವ ಸಮಾರಂಭ ಏರ್ಪಡಿಸಲಾಗಿದೆ ಎಂದು ಹರಿಹರ ಪಂಚಮಸಾಲಿ ಪೀಠದ ಜಗದ್ಗುರು ವಚನಾನಂದ ಶ್ರೀ ಮಾಹಿತಿ ನೀಡಿದರು.
ಅಕ್ರಮ ವೋಟರ್ ಐಡಿ ಕೇಸ್ : ರಾಜ್ಯ ಮುಖ್ಯ ಚುನಾವಣಾಧಿಕಾರಿ ಭೇಟಿ ಮಾಡಿದ ಕೇಂದ್ರ ಚುನಾವಣಾ ಆಯೋಗ
ಸಮಾವೇಶದ ಹಿನ್ನೆಲೆ ಗದಗನಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ ‘ಸಮಾವೇಶದಲ್ಲಿ ರಾಜ್ಯ ಸರ್ಕಾರದ ಸಚಿವರು, ಶಾಸಕರು, ರಾಜ್ಯ ಸಂಘದ ಎಲ್ಲ ಪದಾಧಿಕಾರಿಗಳು, ಪಂಚಮಸಾಲಿ, ಇತರೇ ಸಮಾಜದ ಹಿರಿಯರು, ಗಣ್ಯರು ಪಾಲ್ಗೊಳ್ಳಲಿದ್ದಾರೆ. ನಮ್ಮ ಹಕ್ಕು ಪಡೆಯಲು ಗಮನ ಸೆಳೆಯುವುದು ಸಮಾವೇಶ ಉದ್ದೇಶ.
ಅಕ್ರಮ ವೋಟರ್ ಐಡಿ ಕೇಸ್ : ರಾಜ್ಯ ಮುಖ್ಯ ಚುನಾವಣಾಧಿಕಾರಿ ಭೇಟಿ ಮಾಡಿದ ಕೇಂದ್ರ ಚುನಾವಣಾ ಆಯೋಗ
ಸಮಾವೇಶಕ್ಕೆ ವಿವಿಧ ಜಿಲ್ಲೆ, ತಾಲೂಕುಗಳಿಂದ ಸಾವಿರಾರು ಜನ ಸೇರಲಿದ್ದಾರೆ” ಎಂದರು. ಪಂಚಮಸಾಲಿ ಸಮಾಜಕ್ಕೆ ಮೀಸಲಾತಿಯಿಂದ ಸಮಾಜದ ಜನರ ಕಲ್ಯಾಣ ಸಾಧ್ಯ. ಸಮಾವೇಶದಲ್ಲಿ ಸಮಾಜದವರು ಪಾಲ್ಗೊಂಡು ಸರ್ಕಾರದ ಗಮನ ಸೆಳೆಯಬೇಕು ಎಂದರು. ಪಂಚಮಸಾಲಿ ಸಂಘದ ರೈತ ಘಟಕ, ಯುವ ಘಟಕ, ಮಹಿಳಾ ಘಟಕ, ನಗರ ಘಟಕ, ವಾರ್ಡ್ ಘಟಕ, ಗ್ರಾಮ ಘಟಕಗಳ ಪದಾಧಿಕಾರಿಗಳು ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಬೇಕು ಎಂದು ಮನವಿ ಮಾಡಿದರು.ಈ ಹಿಂದೆ ವಿಜಯನಗರದಲ್ಲಿ ಮಾತನಾಡಿದ್ದ ಅವರು, ಸರ್ಕಾರ 2ಎ ಮೀಸಲಾತಿ ಕೊಡಲೇಬೇಕು. ಪ್ರಾಣವನ್ನಾದರೂ ಬಿಡುತ್ತೇವೆ, ಆದರೆ ಮೀಸಲಾತಿ ಬಿಡುವುದಿಲ್ಲ ಎಂದು ಘೋಷಿಸಿದ್ದರು.
ಅಕ್ರಮ ವೋಟರ್ ಐಡಿ ಕೇಸ್ : ರಾಜ್ಯ ಮುಖ್ಯ ಚುನಾವಣಾಧಿಕಾರಿ ಭೇಟಿ ಮಾಡಿದ ಕೇಂದ್ರ ಚುನಾವಣಾ ಆಯೋಗ