ಮಂಡ್ಯ: ರಾಜ್ಯದಲ್ಲಿ ಆಮಿಷವೊಡ್ಡಿ ಮತಾಂತರಕ್ಕೆ ಬೇಡಿಕೆ ಹೆಚ್ಚಾಗಿದೆ. ಇದೀಗ ಮತ್ತೊಂದು ಜಿಲ್ಲೆಯಲ್ಲಿ ಪ್ರಕರಣಗಳು ಬೆಳಕಿಗೆ ಬಂದಿದೆ.
ಇತ್ತೀಚೆಗೆ ಸುಪ್ರೀಂ ಕೋರ್ಟ್ ಕೂಡ ಬಲವಂತದ ಮತಾಂತರದ ಬಗ್ಗೆ ಅಸಮಾಧಾನ ಹೊರಹಾಕಿದ್ದಲ್ಲದೆ, ಅದರ ವಿರುದ್ಧ ಕೈಗೊಂಡಿರುವ ಕ್ರಮದ ಬಗ್ಗೆ ತಿಳಿಸುವಂತೆ ಕೇಂದ್ರ ಸರ್ಕಾರಕ್ಕೆ ತಾಕೀತು ಮಾಡಿತ್ತು.
ಸಿಲಿಕಾನ್ ಸಿಟಿಯಲ್ಲಿ ತುಂತುರು ‘ಮಳೆ’ : ರಾಜ್ಯದಲ್ಲಿ ಮುಂದಿನ 3 ದಿನ ವರುಣನ ಆರ್ಭಟ |Rain Alert Karnataka
ಕೆಲವು ದಿನಗಳ ಹಿಂದೆ ಕಾಫಿ ನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಲವ್ ಜಿಹಾದ್ ಪಿತೂರಿ ಆರೋಪ ಕೇಳಿ ಬಂದ ಬೆನ್ನಲ್ಲೆ ಮಂಡ್ಯ ಜಿಲ್ಲೆಯಲ್ಲಿ ಇಂತಹದ್ದೇ ಪ್ರಕರಣ ಬೆಳಕಿಗೆ ಬಂದಿದೆ. 13 ವರ್ಷದ ವಿಕಲಚೇತನ ಬಾಲಕಿ ಮೇಲೆ ಅತ್ಯಾಚಾರ ಎಸಗಿದ 24 ವರ್ಷದ ಮುಸ್ಲಿಂ ಯುವಕ, ಇಸ್ಲಾಂ ಧರ್ಮಕ್ಕೆ ಮತಾಂತರ ಆಗುವಂತೆ ಬೆದರಿಕೆ ಹಾಕಿರುವ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.
ಸಿಲಿಕಾನ್ ಸಿಟಿಯಲ್ಲಿ ತುಂತುರು ‘ಮಳೆ’ : ರಾಜ್ಯದಲ್ಲಿ ಮುಂದಿನ 3 ದಿನ ವರುಣನ ಆರ್ಭಟ |Rain Alert Karnataka
24 ವರ್ಷದ ಜಿಹಾದಿ ಯೂನಸ್ ಪಾಷ ಎಂಬತಾ ನಾಗಮಂಗಲದ 13 ವರ್ಷದ ವಿಕಲಚೇತನ ಬಾಲಕಿಯನ್ನು ಪುಸಲಾಯಿಸಿ ಮೊಬೈಲ್ ಕೊಡಿಸಿದ್ದಾನೆ. ಬಳಿಕ ಮೆಸೆಜ್ ಮಾಡಲು ಆರಂಭಿಸಿದ್ದಲ್ಲದೆ ವಿಡಿಯೋ ಕಾಲ್ ಮಾಡುತ್ತಿದ್ದನು. ಹೀಗೆ ವಿಡಿಯೋ ಕಾಲ್ ಮಾಡಿ ಸ್ಕ್ರೀನ್ ರೆಕಾರ್ಡ್ ಕೂಡ ಮಾಡಿಕೊಂಡಿದ್ದ. ಅಲ್ಲದೆ ರೆಕಾರ್ಡ್ ಮಾಡಿದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವುದಾಗಿ ಬೆದರಿಕೆ ಹಾಕುತ್ತಿದ್ದನು. ಅಷ್ಟೇ ಅಲ್ಲದೆ ತನ್ನ ಖಾಸಗಿ ಅಂಗವನ್ನು ತೋರಿಸುವಂತೆ ಧಮ್ಕಿ ಹಾಕಿದ್ದಲ್ಲದೆ ಖಾಸಗಿ ಅಂಗವನ್ನು ತೋರುವಾಗ ಮತ್ತೆ ರೆಕಾರ್ಡ್ ಮಾಡಿಕೊಂಡಿದ್ದಾನೆ.