ನವದೆಹಲಿ: ಸತೇಂದ್ರ ಜೈನ್ ಮಸಾಜ್ ವಿಡಿಯೋ ಲೀಕ್ ವಿಷಯಕ್ಕೆ ಸಂಬಂಧಿಸಿದಂತೆ ಬಿಜೆಪಿ, ದೆಹಲಿ ಸಿಎಂ ಅರವಿಂದ್ ಕ್ರೇಜಿವಾಲ್ ಅವರು ರಾಷ್ಟ್ರಕ್ಕೆ ಕ್ಷಮೆಯಾಚಿಸಬೇಕು. ಜೈಲಿನಲ್ಲಿರುವ ಸಚಿವ ಸತ್ಯೇಂದ್ರ ಜೈನ್ ಅವರನ್ನು ವಜಾಗೊಳಿಸಬೇಕು ಎಂದು ಒತ್ತಾಯಿಸಿದೆ.
ಈ ರಾಜ್ಯದ 95% ಯುವಜನತೆ ʻಮಾನಸಿಕ ಆರೋಗ್ಯ ಸಮಸ್ಯೆʼಯಿಂದ ಬಳಲುತ್ತಿದೆ: ಅಧ್ಯಯನದಿಂದ ಶಾಕಿಂಗ್ ವರದಿ
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ವಕ್ತಾರ ಗೌರವ್ ಭಾಟಿಯಾ, ಕೇಜ್ರಿವಾಲ್ ಹೊಸ ಆರೋಪಗಳಿಗೆ ಒಂದು ಗಂಟೆಯೊಳಗೆ ಪ್ರತಿಕ್ರಿಯಿಸಬೇಕು. ಎಎಪಿ ಪಕ್ಷ ಅರಾಜಕ ಅಪರಾದಿ ಪಕ್ಷ, ಜೈಲಿನಲ್ಲಿ ಅವರ ನಾಯಕರು ಮಾಡಿರುವುದನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಅರವಿಂದ್ ಕೇಜ್ರಿವಾಲ್ ಇಡೀ ರಾಷ್ಟ್ರದ ಕ್ಷಮೆಯಾಚಿಸಬೇಕು. ಸತ್ಯೇಂದ್ರ ಜೈನ್ ಇನ್ನು ದೆಹಲಿ ಸಚಿವ ಸ್ಥಾನವನ್ನು ಒಂದು ನಿಮಿಷವೂ ಉಳಿಸಿಕೊಳ್ಳಬಾರದು ಎಂದು ಭಾಟಿಯಾ ಆಗ್ರಹಿಸಿದರು.
ಈ ಆಪಾದಿತ ಪ್ರಸಂಗದ ನಂತರ ಜೈನ್ ಅವರನ್ನು ವಜಾಗೊಳಿಸುವ ಜವಾಬ್ದಾರಿಯನ್ನು ಹೊರಲು ಕೇಜ್ರಿವಾಲ್ ಅವರ ಭುಜಗಳು ತುಂಬಾ ದುರ್ಬಲವಾಗಿದ್ದರೆ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ನಾಯಕ ಒತ್ತಾಯಿಸಿದರು.
ಕೆಲ ದಿನಗಳ ಹಿಂದೆ ಆಮ್ ಆದ್ಮಿ ಪಕ್ಷದ ನಾಯಕ ಸತೇಂದ್ರ ಜೈನ್ ಅವರು ಜೈಲಿನಲ್ಲಿ ಕಾಲಿಗೆ ಮಸಾಜ್ ಮಾಡಿಸಿಕೊಳ್ಳುತ್ತಿರುವ ವಿಡಿಯೋ ವೈರಲ್ ಆಗಿತ್ತು. ಇದಾದ ಬಳಿಕ ಬಿಜೆಪಿ ಆಮ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸುತ್ತಿದೆ.
ಈ ವಿಡಿಯೋ ಕುರಿತಂತೆ ಬೆನ್ನುಮೂಳೆಯ ಗಾಯದ ನಂತರ ಜೈನ್ ಫಿಸಿಯೋಥೆರಪಿ ಪಡೆಯುತ್ತಿದ್ದಾರೆ ಎಂದು ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹೇಳಿಕೊಂಡಿದ್ದರು.
ಭಾರತೀಯ ಜನತಾ ಪಕ್ಷವು ಸಿಸಿಟಿವಿ ದೃಶ್ಯಾವಳಿಗಳನ್ನು ಅಕ್ರಮವಾಗಿ ಸೋರಿಕೆ ಮಾಡುವ ಮೂಲಕ ಆರೋಗ್ಯ ಸಮಸ್ಯೆಗಳಲ್ಲಿ ಅಗ್ಗದ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದರು.
BIGG UPDATE : ಕೊಲಂಬಿಯಾ ವಿಮಾನ ಪತನ ; ಎಂಟು ಮಂದಿ ಸಾವು |Plane Crashes