ಮುಂಬೈ: ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್ (Amitabh Bachchan) ಪ್ರತೀ ಭಾನುವಾರ ಮುಂಬೈನ ತಮ್ಮ ನಿವಾಸದ ಬಳಿ ಅಭಿಮಾನಿಗಳನ್ನು ಭೇಟಿ ಮಾಡುತ್ತಾರೆ. ಅಭಿಮಾನಿಗಳನ್ನು ಭೇಟಿ ಸಂತಸ ವ್ಯಕ್ತಪಡುತ್ತಾರೆ.
ಕಳೆದ ಭಾನುವಾರವೂ ಸಹ ಅಮಿತಾಬ್ ಅವರು ಅಭಿಮಾನಿಗಳನ್ನು ನೋಡಲು ಮನೆಯಿಂದ ಹೊರಗೆ ಬಂದಿದ್ದಾರೆ. ಈ ವೇಳೆ ಪುಟ್ಟ ಬಾಲಕನೊಬ್ಬ ಭಾರೀ ಭದ್ರತೆಯನ್ನು ಕಣ್ತಪ್ಪಿಸಿ ಅಮಿತಾಬ್ ಬಳಿ ಬಂದು ಅವರ ಕಾಲಿಗೆ ಬಿದ್ದಿದ್ದಾನೆ.
ತಮ್ಮ ಬ್ಲಾಗ್ನಲ್ಲಿ ಅಮಿತಾಬ್ ಬಚ್ಚನ್ ಅವರು ಇಂದೋರ್ನಿಂದ ಬಂದ ನಾಲ್ಕು ವರ್ಷದ ತಮ್ಮ ಅಭಿಮಾನಿಯ ಬಗ್ಗೆ ಬರೆದಿದ್ದಾರೆ. ಬಾಲಕನ ಚಿತ್ರವನ್ನು ಹಂಚಿಕೊಂಡ ಬಿಗ್ ಬಿ, ʻಇಂದೋರ್ನ ಈ ಪುಟ್ಟ ಬಾಲಕ ತನ್ನ 4 ನೇ ವಯಸ್ಸಿನಲ್ಲಿ ನನ್ನ ನಟನೆಯ ʻಡಾನ್ʼ ಚಿತ್ರವನ್ನು ನೋಡಿ ಆತ ಮೆಚ್ಚಿಕೊಂಡಿದ್ದ. ಬಾಲಕ ನನ್ನನ್ನು ನೋಡಲು ಅಷ್ಟು ದೂರದಿಂದ ಬಂದು ಭೇಟಿಯಾಗಿ ನನ್ನ ಕಾಲಿಗೆ ಆತ ನಮಸ್ಕರಿಸಿದ. ತಂದೆ ಕೊಟ್ಟ ಲೆಟರ್ ನೀಡಿದ. ಅವನ ಪೇಂಟಿಂಗ್ ನೋಡಿದೆ. ಅವನು ಮಾಡಿದ ವರ್ಣಚಿತ್ರಗಳಿಗೆ ಆಟೋಗ್ರಾಫ್ ಮಾಡಿದೆ. ಸಾಕಷ್ಟು ಖುಷಿಪಟ್ಟೆʼ ಎಂದು ಬರೆದುಕೊಂಡಿದ್ದಾರೆ.
BIGG NEWS: ಬಿಡಿಎ ವ್ಯಾಪ್ತಿಯಲ್ಲಿ ನಡೆದ ಭೂ ಒತ್ತುವರಿ ಪ್ರಕರಣ: ಒತ್ತುವರಿದಾರರ ವಿರುದ್ಧ ದಾಳಿ
WATCH VIDEO: ತಮ್ಮದೇ ಪಕ್ಷದ ಕಾರ್ಯಕರ್ತರಿಂದ ಹಿಗ್ಗಾಮುಗ್ಗಾ ಥಳಿತಕ್ಕೊಳಗಾದ ಆಮ್ ಆದ್ಮಿ ಶಾಸಕ!… ಕಾರಣ?
BIGG NEWS : `ರೇಷನ್ ಕಾರ್ಡ್ ಹೊಂದಿರುವವರಿಗೆ ಬಿಗ್ ಶಾಕ್’ : ಶೀಘ್ರವೇ ಈ ಎಲ್ಲಾ ಕಾರ್ಡ್ ಗಳು ರದ್ದು!
BIGG NEWS: ಬಿಡಿಎ ವ್ಯಾಪ್ತಿಯಲ್ಲಿ ನಡೆದ ಭೂ ಒತ್ತುವರಿ ಪ್ರಕರಣ: ಒತ್ತುವರಿದಾರರ ವಿರುದ್ಧ ದಾಳಿ