ಬೆಂಗಳೂರು : ಬೆಂಗಳೂರಿನಲ್ಲಿ ಮನೆ ಬಾಡಿಗೆ ಹೆಚ್ಚಾಗುತ್ತಿರುವ ಬಗ್ಗೆ ವರದಿಗಳು ಬರುತ್ತಲೇ ಇವೆ. ಇದರ ಜೊತೆಗೆ ಈಗ ಕಚೇರಿ ಬಾಡಿಗೆಯು ಗಗನಕ್ಕೆ ಏರುತ್ತಿದೆ.
BREAKING NEWS : ‘ರಾಜ್ಯಸಭಾ ಮಾಜಿ ಸದಸ್ಯ’ ಅಬ್ದುಲ್ ಸಮದ್ ಸಿದ್ದೀಖಿ ಇನ್ನಿಲ್ಲ | Abdul Samad Siddiqui
ಹೊಸ ಕಚೇರಿ ನಡೆಸುವವರ ಕನಸು ತುಸು ಭಾರವಾಗಲಿದೆ. ಈ ವರ್ಷದ ಜುಲೈ- ಸೆಪ್ಟೆಂಬರ್ನಲ್ಲಿ ಕಚೇರಿ ಬಾಡಿಗೆಯು ಶೇಕಡಾ 12.1 ರಷ್ಟು ಏರಿಕೆಯಾಗಿದೆ. ಇದು ಏಷ್ಯಾ ಪೆಸಿಫಿಕ್ ಪ್ರದೇಶದಲ್ಲಿ ಅತ್ಯಧಿಕವಾಗಿದೆ ಎಂದು ನೈಟ್ ಫ್ರಾಂಕ್ ತಿಳಿಸಿದೆ.
BREAKING NEWS : ‘ರಾಜ್ಯಸಭಾ ಮಾಜಿ ಸದಸ್ಯ’ ಅಬ್ದುಲ್ ಸಮದ್ ಸಿದ್ದೀಖಿ ಇನ್ನಿಲ್ಲ | Abdul Samad Siddiqui
2022 ರ ಏಷ್ಯಾ – ಪೆಸಿಫಿಕ್ ಪ್ರೈಮ್ನ ಆಫೀಸ್ ಬಾಡಿಗೆ ಸೂಚ್ಯಂಕದಲ್ಲಿ, ಪ್ರಾಪರ್ಟಿ ಕನ್ಸಲ್ಟೆಂಟ್ ಆಗಿರುವ ನೈಟ್ ಫ್ರಾಂಕ್ ಹೇಳುವಂತೆ, 2022 ರ Q3 (ಜುಲೈ-ಸೆಪ್ಟೆಂಬರ್) ನಲ್ಲಿ ಕಚೇರಿ ಬಾಡಿಗೆಗಳಲ್ಲಿ ಶೇ. 12.10 (ವರ್ಷದಿಂದ ವರ್ಷಕ್ಕೆ) ಹೆಚ್ಚಾಗಿದ್ದು ಬೆಂಗಳೂರು ಅಗ್ರಸ್ಥಾನದಲ್ಲಿದೆ ಎಂದು ಎಂದಿದೆ.
ಈ ಸೂಚ್ಯಂಕದಲ್ಲಿ ಕಚೇರಿ ಬಾಡಿಗೆಯಲ್ಲಿ ಶೇ.10.90ರಷ್ಟು ಏರಿಕೆಗಳೊಂದಿಗೆ ಜಕಾರ್ತ ಎರಡನೇ ಸ್ಥಾನದಲ್ಲಿದೆ. ಮುಂಬೈಯಲ್ಲಿ ಕಚೇರಿ ಬಾಡಿಗೆಗಳಲ್ಲಿ ಶೇಕಡಾ 7 ರಷ್ಟು ಏರಿಕೆಯಾಗಿದ್ದು, 3 ನೇ ಸ್ಥಾನದಲ್ಲಿದೆ.
BREAKING NEWS : ‘ರಾಜ್ಯಸಭಾ ಮಾಜಿ ಸದಸ್ಯ’ ಅಬ್ದುಲ್ ಸಮದ್ ಸಿದ್ದೀಖಿ ಇನ್ನಿಲ್ಲ | Abdul Samad Siddiqui
ತೈಪೆ ಬಾಡಿಗೆಯಲ್ಲಿ 5.50 ಶೇಕಡಾ ಹೆಚ್ಚಳದೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ಸಿಂಗಾಪುರದಲ್ಲಿ ಕಚೇರಿ ಬಾಡಿಗೆ ಶೇಕಡಾ 5.3, ಬ್ರಿಸ್ಬೇನ್ನಲ್ಲಿ ಶೇಕಡಾ 3.9 ಮತ್ತು ಸಿಯೋಲ್ನಲ್ಲಿ ಶೇಕಡಾ 3.7 ಬಾಡಿಗೆ ಏರಿಕೆಯಾಗಿದೆ. 3.40 ಶೇಕಡಾ ಬಾಡಿಗೆ ಹೆಚ್ಚಳದೊಂದಿಗೆ ಸಿಡ್ನಿ 8 ನೇ ಸ್ಥಾನದಲ್ಲಿದ್ದರೆ, ಶೇ.2.4 ಬಾಡಿಗೆ ಹೆಚ್ಚಿಸಿರಉವ ಪರ್ತ್ 9 ನೇ ಸ್ಥಾನದಲ್ಲಿದೆ . ಶೇ.1.9 ಬಾಡಿಗೆ ಏರಿಕೆಯಿಂದ ಶಾಂಘೈ 10 ನೇ ಸ್ಥಾನದಲ್ಲಿದೆ. ದೆಹಲಿ – NCR 14 ನೇ ಸ್ಥಾನದಲ್ಲಿದೆ. ಏಷ್ಯಾ-ಪೆಸಿಫಿಕ್ ಪ್ರೈಮ್ ಆಫೀಸ್ ಬಾಡಿಗೆ ಸೂಚ್ಯಂಕವು ತ್ರೈಮಾಸಿಕ ಪ್ರಕಟಣೆಯಾಗಿದೆ.
ಇದು ಏಷ್ಯಾ ಪೆಸಿಫಿಕ್ ಪ್ರದೇಶದ ಪ್ರಮುಖ ಮಾರುಕಟ್ಟೆಗಳಲ್ಲಿ ಪ್ರಧಾನ ಕಚೇರಿ ಬಾಡಿಗೆ ಬಗ್ಗೆ ಮಾಹಿತಿ ಕಲೆ ಹಾಕುತ್ತದೆ. ನೈಟ್ ಫ್ರಾಂಕ್ ಅಂಕಿಅಂಶಗಳ ಪ್ರಕಾರ, ಏಪ್ರಿಲ್-ಜೂನ್ ತ್ರೈಮಾಸಿಕಕ್ಕೆ ಹೋಲಿಸಿದರೆ ಬೆಂಗಳೂರು, ಮುಂಬೈ ಮತ್ತು ದೆಹಲಿ-ಎನ್ಸಿಆರ್ನಲ್ಲಿ ಬಾಡಿಗೆ ಏರಿಕೆ ಸಮತಟ್ಟಾಗಿದೆ.
BREAKING NEWS : ‘ರಾಜ್ಯಸಭಾ ಮಾಜಿ ಸದಸ್ಯ’ ಅಬ್ದುಲ್ ಸಮದ್ ಸಿದ್ದೀಖಿ ಇನ್ನಿಲ್ಲ | Abdul Samad Siddiqui
ಕೊರೊನಾ ಸಾಂಕ್ರಾಮಿಕ ಮುಗಿದು ಬಳಿಕ ಬೆಂಗಳೂರಿನ ಮಧ್ಯೆ ಭಾಗದಲ್ಲಿ ಬಿಡಿ, ಉಪನಗರಗಳಲ್ಲೂ ಬಾಡಿಗೆ ಶೇ 45 ರಷ್ಟು ಹೆಚ್ಚಳ ಕಂಡಿದೆ. ಪ್ರತಿವರ್ಷದಂತೆ ಶೇಕಡಾ 5 ರಷ್ಟು ಅಲ್ಲದೆ, ಶೇ.45 ಬಾಡಿಗೆ ಹೆಚ್ಚಳವಾಗಿರುವುದು ಬಾಡಿಗೆದಾರರನ್ನು ಭಾರೀ ಸಂಕಷ್ಟಕ್ಕೆ ನೂಕಿದೆ. ಹಲವು ಮಂದಿ ಕಳೆದ ಅರ್ಧ ವರ್ಷದಲ್ಲಿ ಶೇ. 45 ಬಾಡಿಗೆ ಹೆಚ್ಚಳವನ್ನು ಕಂಡಿದ್ದಾರೆ. ಡಿಸೆಂಬರ್ 2021 ರಲ್ಲಿ 11,000 ರೂಪಾಯಿ ಬಾಡಿಗೆ ನೀಡುತ್ತಿದ್ದವರು ಕಳೆದ ಆರು ತಿಂಗಳ ಒಳಗೆ 16,000 ಬಾಡಿಗೆ ಕಟ್ಟುವಂತಾಗಿದೆ. ಅದು ಬೆಂಗಳೂರಿನಿಂದ ಸ್ವಲ್ಪ ದೂರದಲ್ಲಿರುವ, ಉಪನಗರಗಳೆಂದು ಕರೆಸಿಕೊಳ್ಳುವ ಪ್ರದೇಶಗಳಲ್ಲಿಯೂ ಬಾಡಿಗೆ ದರ ಗಗನ್ನಕ್ಕೇರಿದೆ.